ವಿದೇಶದಲ್ಲಿ ಹೆಬ್ಬಾ ಪಟೇಲ್ ದೇಸಿ ಲುಕ್​

ಮಮತಾ

ವಿದೇಶದಲ್ಲಿ ಹೆಬ್ಬಾ ಪಟೇಲ್ ದೇಸಿ ಲುಕ್​

ಕನ್ನಡ ಸಿನಿಮಾ ಮೂಲಕ ಚಿತ್ರರಂಗಕ್ಕೆ ಎಂಟ್ರಿಕೊಟ್ಟ ಹೆಬ್ಬಾ ಪಟೇಲ್​ ಕನ್ನಡ, ತೆಲುಗು, ತಮಿಳು ಸಿನಿಮಾಗಳಿಗೆ ಬೇಡಿಕೆ ನಟಿಯಾಗಿ ಮಾರ್ಪಟ್ಟರು. ಮಾಡಲಿಂಗ್​ ಮೂಲಕ ವೃತ್ತಿ ಜೀವನ ಆರಂಭಿಸಿದರು

ದೇಸಿ ಇನ್ ವಿದೇಸಿ ಎಂದ ಹೆಬ್ಬಾ ಪಟೇಲ್

ದೇಸಿ ಇನ್​ ವಿದೇಸಿ ಎಂದು ಇನ್​ಸ್ಟಾಗ್ರಾಮ್​ನಲ್ಲಿ ಫೋಟೋ ಹಂಚಿಕೊಂಡಿದ್ದಾರೆ. ತೆಳು ಬಣ್ಣದ ಸೀರೆ, ಅದಕ್ಕೆ ಬನ್ ಹಾಕಿದ ಜಡೆ ಹಾಗೂ ಅದಕ್ಕೆ ತಕ್ಕಂತೆ ಸಿಂಪಲ್​ ಮೇಕಪ್​ ಹಾಕಿದ್ದು ಭಾರತೀಯ ಸಂಪ್ರದಾಯಸ್ಥ ಮಹಿಳೆಯಂತೆ ಕಾಣುತ್ತಿದ್ದಾರೆ. ಹಲವರು ಗಾರ್ಗಿಯಸ್​ ಎಂದು ಕಾಮೆಂಟ್ ಮಾಡಿದ್ದಾರೆ

ಅಧ್ಯಕ್ಷ ಮೂಲಕ ಎಂಟ್ರಿ

ಮುಂಬೈನಲ್ಲಿ ಜನಿಸಿದ ಹಬ್ಬಾ ಪಟೇಲ್​​​ ಕನ್ನಡ ಮಾತನಾಡುವ ಮುಸ್ಲಿಂ ಕುಟುಂಬಕ್ಕೆ ಸೇರಿಕೊಂಡಿರುವವರಾಗಿದ್ದಾರೆ. ಅಧ್ಯಕ್ಷ ಸಿನಿಮಾದಲ್ಲಿ ನಟಿಸಿದ ಅವರು ಮತ್ತೆ ಕನ್ನಡಕ್ಕೆ ಕಾಲಿಟ್ಟೇ ಇಲ್ಲ. ಓಪನ್​ ಹೇರು ಬಿಟ್ಕೊಂಡು ಇನ್ನೂ ಈ ಹಾಡನ್ನು ಹಲವರು ಗುನುಗುತ್ತಾರೆ.

ಹೆಬ್ಬಾ ಪಟೇಲ್​ ನಟಿಸಿದ ಸಿನಿಮಾವಿದು

ಅಧ್ಯಕ್ಷ ಸಿನಿಮಾ ಮೂಲಕ ಸಿನಿ ರಂಗಕ್ಕೆ ಎಂಟ್ರಿಕೊಟ್ಟ ಹೆಬ್ಬಾ ಪಟೇಲ್​ ತಮಿಳಿನ ತಿರುಮಾನಂ ಎನುಮ್​ ನಿಕ್ಕಾದಲ್ಲಿ ನಟಿಸಿದರು. ಆನಂತರ ಕುಮಾರಿ 21F, ಈಡೋ ರಕಮ್ ಆರೋ ರಕಮ್​, ಏಂಜೆಲ್​ ಒರೆ ಬುಜ್ಜಿಗ ಸೇರಿದಂತೆ ಹಲವು ಸಿನಿಮಾದಲ್ಲಿ ನಟಿಸಿದ್ದಾರೆ.

ಫ್ಲಾಪ್​ ಸಿನಿಮಾ ಹೆಚ್ಚು

ಹೆಬ್ಬಾ ಪಟೇಲ್​ ನಟನೆಯಲ್ಲಿ ಜೀವ ತುಂಬಿದರು ಸಹ ಅವರ ಸಿನಿಮಾಗಳು ಹೆಚ್ಚು ಫ್ಲಾಪ್​ ಕಂಡವು ಹೀಗಾಗಿ ಅವರಿಗೆ ಸಾಕಷ್ಟು ಆಫರ್​ಗಳು ಬರಲಿಲ್ಲ. ಅಧ್ಯಕ್ಷ 2 ಸಿನಿಮಾದಲ್ಲಿ ಇವರೇ ನಟಿಸಲಿದ್ದಾರೆ ಎನ್ನುವ ವದಂತಿ ಹಬ್ಬಿತ್ತು.