ತೂಕ ಇಳಿಸಿಕೊಳ್ಳಲು ಆರೋಗ್ಯಕರ ಹುರಿದ ಆಹಾರಗಳು!

ಭಾನುಪ್ರಿಯ ಡಿ.ಕೆ

ತೂಕ ಇಳಿಸಿಕೊಳ್ಳಲು ಆರೋಗ್ಯಕರ ಹುರಿದ ಆಹಾರಗಳು!

ಈ ಆಹಾರಗಳು ಕಡಿಮೆ ಕ್ಯಾಲರಿ, ಹೆಚ್ಚು ಫೈಬರ್ ಮತ್ತು ಪ್ರೋಟೀನ್ ಇರುವುದರಿಂದ ಹಸಿವನ್ನು ನಿಯಂತ್ರಿಸಿ ತೂಕ ಹೆಚ್ಚಾಗದಂತೆ ತಡೆಯಲು ಸಹಾಯ ಮಾಡುತ್ತದೆ.

ಹುರಿದ ಕಡಲೆ

ಇದು ಪ್ರೋಟೀನ್ ಫೈಬರ್​ನಿಂದ ಕೂಡಿರುತ್ತದೆ. ಇದರ ಸೇವನೆಯು ದೀರ್ಘಕಾಲ ಹಸಿವನ್ನು ತಡೆಯುತ್ತದೆ. ನಿಯಮಿತವಾಗಿ ಸೇವಿಸುವುದರಿಂದ ತೂಕ ಇಳಿಸಿಕೊಳ್ಳಬಹುದು.

ಹುರಿದ ಮಕಾನ

ಈ ಆಹಾರ ಸೂಪರ್​ ಲೈಟ್​ ಆಗಿದ್ದು, ಫೈಬರ್ ಹೆಚ್ಚು, ಕೊಬ್ಬು ಕಡಿಮೆಯಾಗಿರುತ್ತದೆ. 100ಗ್ರಾಂ ಮಕಾಣದಲ್ಲಿ 350 ಗ್ರಾಂ ಕ್ಯಾಲರಿ ಇರುವುದರಿಂದ ತೂಕ ಇಳಿಸುವವರು ಈ ಆಹಾರ ಬೆಸ್ಟ್ ಆಯ್ಕೆ ಆಗಿದೆ.

ಹುರಿದ ಹೆಸರು ಬೇಳೆ

ಉಪ್ಪು ಹಾಕಿ ಹುರಿದು ತಿನ್ನುವುದರಿಂದ ದೇಹಕ್ಕೆ ಹೆಚ್ಚಿನ ಪ್ರೊಟೀನ್​ ನೀಡುತ್ತದೆ. ಇದರಲ್ಲಿ ಫೈಬರ್ ಹೆಚ್ಚಾಗಿದ್ದು, ಬೊಜ್ಜು ಕಡಿಮೆ ಮಾಡಲು ಸಹಾಯಕವಾಗುತ್ತದೆ.

ಹುರಿದ ಶೇಂಗಾ

ಹುರಿದ ಶೇಂಗಾದಲ್ಲಿ ಉತ್ತಮ ಫ್ಯಾಟ್​, ಪ್ರೋಟೀನ್, ಕ್ಯಾಲರಿ ಹೆಚ್ಚಿದ್ದು, ಇದರ ನಿಯಮಿತ ಸೇವನೆಯು ದೇಹವನ್ನು ಫಿಟ್​ ಆಗಿರಿಸುತ್ತದೆ. ಜೊತೆಗೆ ತೂಕ ಹೆಚ್ಚಾಗದಂತೆ ತಡೆಯುತ್ತದೆ.

ಹುರಿದ ಪಾಪ್‌ಕಾರ್ನ್

ಪಾಪ್​ಕಾರ್ನ್​ನಲ್ಲಿ ಕಡಿಮೆ ಕ್ಯಾಲರಿ, ಹೆಚ್ಚು ವಾಲ್ಯೂಮ್ ಇರುತ್ತದೆ. ಇದರ ನಿಯಮಿತ ಸೇವನೆಯು ಹೊಟ್ಟೆ ತುಂಬಿದಂತೆ ಮಾಡುತ್ತದೆ. ಜೊತೆಗೆ ಪದೇ ಪದೇ ಹಸಿವಾಗುವುದನ್ನು ತಪ್ಪಿಸುತ್ತದೆ.