ಬೆಂಡೆಕಾಯಿ ಆರೋಗ್ಯಕ್ಕೆ ಒಳ್ಳೆಯದೇ ಆದರೆ ಈ 5 ಜನರು ಇದರಿಂದ ದೂರವಿದ್ದಷ್ಟು ಉತ್ತಮ!

Vijayavan

ಬೆಂಡೆಕಾಯಿ ಆರೋಗ್ಯಕ್ಕೆ ಒಳ್ಳೆಯದೇ ಆದರೆ ಈ 5 ಜನರು ಇದರಿಂದ ದೂರವಿದ್ದಷ್ಟು ಉತ್ತಮ!

ಭಾರತದ ಪಾಕಪದ್ಧತಿಯಲ್ಲಿ ಬೆಂಡೆಕಾಯಿ ಬಹಳ ಜನಪ್ರಿಯ ತರಕಾರಿಯಾಗಿದೆ. ರುಚಿಕರವಾಗಿರುವುದಲ್ಲದೆ, ವಿಟಮಿನ್ ಸಿ, ವಿಟಮಿನ್ ಕೆ, ಫೋಲೇಟ್, ಫೈಬರ್, ಮೆಗ್ನೀಸಿಯಮ್ ಮತ್ತು ಉತ್ಕರ್ಷಣ ನಿರೋಧಕಗಳಿಂದ ಕೂಡಿದ್ದು, ಸಾಕಷ್ಟು ಆರೋಗ್ಯ ಪ್ರಯೋಜನಗಳನ್ನು ಹೊಂದಿದೆ.

ಕಿಡ್ನಿ ಕಲ್ಲು ಸಮಸ್ಯೆ

ಬೆಂಡೆಕಾಯಿಯಲ್ಲಿ ನೈಸರ್ಗಿಕವಾಗಿ ಹೇರಳವಾಗಿರುವ ಆಕ್ಸಲೇಟ್‌ಗಳು ದೇಹದಲ್ಲಿನ ಕ್ಯಾಲ್ಸಿಯಂ ಜೊತೆಗೆ ಸೇರಿದಾಗ, ಕಲ್ಲುಗಳು ರೂಪುಗೊಳ್ಳಬಹುದು.

ಗೌಟ್​ ಸಮಸ್ಯೆ

ಗೌಟ್ ಎಂಬುದು ದೇಹದಲ್ಲಿ ಹೆಚ್ಚಿನ ಮಟ್ಟದ ಯೂರಿಕ್ ಆಮ್ಲದಿಂದ ಉಂಟಾಗುವ ಕಾಯಿಲೆಯಾಗಿದೆ. ಬೆಂಡೆಕಾಯಿಯಲ್ಲಿರುವ ಆಕ್ಸಲೇಟ್‌ಗಳು ಯೂರಿಕ್ ಆಮ್ಲದ ಸ್ಫಟಿಕೀಕರಣವನ್ನು ಉತ್ತೇಜಿಸುತ್ತವೆ.

ಜೀರ್ಣಕ್ರಿಯೆ ಸಮಸ್ಯೆ

ಬೆಂಡೆಕಾಯಿಯಲ್ಲಿ ಫೈಬರ್ ಹೆಚ್ಚಾಗಿರುತ್ತದೆ. ಫೈಬರ್​ ಸಾಮಾನ್ಯವಾಗಿ ಜೀರ್ಣಕ್ರಿಯೆ ಸುಧಾರಿಸುವಲ್ಲಿ ಮತ್ತು ಮಲಬದ್ಧತೆ ಕಡಿಮೆ ಮಾಡುವಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ. ಆದರೆ, ಕೆಲವು ಸಂದರ್ಭಗಳಲ್ಲಿ, ನಕಾರಾತ್ಮಕ ಪರಿಣಾಮ ಬೀರಬಹುದು.

ಬ್ಲಡ್​ ಥಿನ್ನರ್​ ತೆಗೆದುಕೊಳ್ಳುವವರು

ಬೆಂಡೆಕಾಯಿಯಲ್ಲಿ ವಿಟಮಿನ್ ಕೆ ಸಮೃದ್ಧವಾಗಿದೆ. ಇದು ರಕ್ತ ಹೆಪ್ಪುಗಟ್ಟುವಿಕೆಗೆ ಸಹಾಯ ಮಾಡುವ ಪ್ರಮುಖ ಪೋಷಕಾಂಶವಾಗಿದೆ. ಹೀಗಾಗಿ ಬ್ಲಡ್​ ಥಿನ್ನರ್​ ತೆಗೆದುಕೊಳ್ಳುವವರು ಸೇವಿಸಬಾರದು.

ಅಲರ್ಜಿ ಸಮಸ್ಯೆ ಹೊಂದಿರುವವರು

ಅಲರ್ಜಿ ಇರುವವರು ಬೆಂಡೆಕಾಯಿ ತಿನ್ನಬಾರದು. ಇದನ್ನು ತಿಂದ ನಂತರ ಚರ್ಮದ ದದ್ದು, ತುರಿಕೆ, ಊತ, ಉಸಿರಾಟದ ತೊಂದರೆ ಅಥವಾ ಬಾಯಿಯಲ್ಲಿ ಸುಡುವ ಸಂವೇದನೆ ಕಂಡುಬರಬಹುದು.