ಚಳಿಗಾಲದಲ್ಲಿ ಕಾಡುವ ಆರೋಗ್ಯ ಸಮಸ್ಯೆಗಳಿವು

ರಮೇಶ್​ ಕುಮಾರ್​​ ಬಿ ಎಡಮೋಳೆ

ಚಳಿಗಾಲದಲ್ಲಿ ಕಾಡುವ ಆರೋಗ್ಯ ಸಮಸ್ಯೆಗಳಿವು

ಚಳಿಗಾಲದ ತಂಪಾದ ವಾತಾವರಣ ನೋಡಲು ಆಹ್ಲಾದಕರ ಎನಿಸಿದರೂ ಆರೋಗ್ಯಕ್ಕೆ ತುಂಬಾನೇ ಅಪಾಯಕಾರಿ. ಈ ಸಮಯದಲ್ಲಿ ರೋಗನಿರೋಧಕ ಶಕ್ತಿ ಕಡಿಮೆಯಾಗಿ ಹಲವು ಆರೋಗ್ಯ ಸಮಸ್ಯೆಗಳು ಕಾಣಿಸಿಕೊಳ್ಳುತ್ತವೆ.

ನೆಗಡಿ ಮತ್ತು ಕೆಮ್ಮು

ಚಳಿಗಾಲದಲ್ಲಿ ಗಾಳಿಯಲ್ಲಿನ ತೇವಾಂಶ ಮತ್ತು ವೈರಸ್‌ಗಳ ಹರಡುವಿಕೆಯಿಂದ ನೆಗಡಿ, ಕೆಮ್ಮು ಮತ್ತು ಗಂಟಲು ನೋವು ಹೆಚ್ಚಾಗಿ ಕಾಣಿಸಿಕೊಳ್ಳುತ್ತದೆ. ಇದು ಒಬ್ಬರಿಂದೊಬ್ಬರಿಗೆ ಸುಲಭವಾಗಿ ಹರಡುತ್ತದೆ.

ಚರ್ಮದ ಶುಷ್ಕತೆ

ಚಳಿಗಾಲದಲ್ಲಿ ಚರ್ಮದ ಮೇಲಿನ ನೈಸರ್ಗಿಕ ತೈಲ ಕಡಿಮೆಯಾಗುತ್ತದೆ. ಇದರಿಂದ ಚರ್ಮ ಒಡೆಯುವುದು, ತುರಿಕೆ ಮತ್ತು ತುಟಿಗಳು ಒಡೆಯುವ ಸಮಸ್ಯೆ ಎದುರಾಗುತ್ತದೆ.

ಕೀಲು ನೋವು

ವಾತಾವರಣದಲ್ಲಿ ಉಷ್ಣಾಂಶ ಕಡಿಮೆಯಾದಾಗ ಕೀಲುಗಳ ಸುತ್ತಲಿನ ಸ್ನಾಯುಗಳು ಬಿಗಿಯಾಗುತ್ತವೆ. ಇದರಿಂದ ವಯಸ್ಸಾದವರಲ್ಲಿ ಅಥವಾ ಸಂಧಿವಾತ ಇರುವವರಲ್ಲಿ ಮೊಣಕಾಲು ಮತ್ತು ಕೀಲು ನೋವು ಹೆಚ್ಚಾಗುತ್ತದೆ.

ಉಸಿರಾಟದ ತೊಂದರೆ ಮತ್ತು ಅಸ್ತಮಾ

ತಂಪಾದ ಗಾಳಿಯು ಶ್ವಾಸಕೋಶದ ನಾಳಗಳನ್ನು ಸಂಕುಚಿತಗೊಳಿಸುತ್ತದೆ. ಇದರಿಂದ ಅಸ್ತಮಾ ರೋಗಿಗಳಿಗೆ ಉಸಿರಾಟದ ತೊಂದರೆ ಮತ್ತು ಎದೆ ಕಟ್ಟಿದ ಅನುಭವ ಉಂಟಾಗಬಹುದು.

ರಕ್ತದೊತ್ತಡ ಮತ್ತು ಹೃದಯದ ಸಮಸ್ಯೆ

ಚಳಿಯ ಸಮಯದಲ್ಲಿ ದೇಹದ ಉಷ್ಣತೆ ಕಾಪಾಡಿಕೊಳ್ಳಲು ಹೃದಯವು ಹೆಚ್ಚು ಕೆಲಸ ಮಾಡಬೇಕಾಗುತ್ತದೆ. ಇದರಿಂದ ರಕ್ತದೊತ್ತಡ ಹೆಚ್ಚಾಗಬಹುದು, ಇದು ಹೃದಯದ ಮೇಲೆ ಒತ್ತಡವನ್ನುಂಟು ಮಾಡುತ್ತದೆ.

ಅಸ್ವಸ್ಥತೆ

ಸೂರ್ಯನ ಬೆಳಕು ಕಡಿಮೆಯಾಗುವುದರಿಂದ ಕೆಲವರಲ್ಲಿ ಮಾನಸಿಕ ಬದಲಾವಣೆಗಳು ಕಂಡುಬರುತ್ತವೆ. ಇದನ್ನು 'ವಿಂಟರ್ ಬ್ಲೂಸ್' ಎಂದೂ ಕರೆಯುತ್ತಾರೆ. ಇದು ನಿರಾಸಕ್ತಿ, ಅತಿಯಾದ ನಿದ್ರೆ ಅಥವಾ ಬೇಸರಕ್ಕೆ ಕಾರಣವಾಗಬಹುದು.

ಸೈನಸೈಟಿಸ್

ತಲೆನೋವು, ಮೂಗು ಕಟ್ಟುವುದು ಮತ್ತು ಮುಖದ ಭಾಗದಲ್ಲಿ ಭಾರವಾದ ಅನುಭವವಾಗುವುದು ಈ ಸಮಯದಲ್ಲಿ ಸಾಮಾನ್ಯ. ತಂಪಾದ ಗಾಳಿಗೆ ಒಡ್ಡಿಕೊಳ್ಳುವುದರಿಂದ ಸೈನಸ್ ಸಮಸ್ಯೆ ಇರುವವರಿಗೆ ತೊಂದರೆ ಹೆಚ್ಚಾಗುತ್ತದೆ.

ಜೀರ್ಣಕ್ರಿಯೆ ಸಮಸ್ಯೆ

ಚಳಿಗಾಲದಲ್ಲಿ ನಾವು ದೈಹಿಕ ಚಟುವಟಿಕೆ ಕಡಿಮೆ ಮಾಡುತ್ತೇವೆ ಮತ್ತು ಹೆಚ್ಚು ಆಹಾರ ಸೇವಿಸುತ್ತೇವೆ. ಇದರಿಂದ ಜೀರ್ಣಕ್ರಿಯೆ ನಿಧಾನವಾಗಿ ಮಲಬದ್ಧತೆ ಅಥವಾ ಹೊಟ್ಟೆ ಉಬ್ಬರದಂತಹ ಸಮಸ್ಯೆಗಳು ಕಾಣಿಸಿಕೊಳ್ಳಬಹುದು.

ಜಾಗರೂಕತೆ ವಹಿಸಿ

ಬಿಸಿ ಆಹಾರ ಸೇವನೆ, ಸಾಕಷ್ಟು ನೀರು ಕುಡಿಯುವುದು ಮತ್ತು ಬೆಚ್ಚಗಿನ ಬಟ್ಟೆಗಳನ್ನು ಧರಿಸುವುದರಿಂದ ಈ ಎಲ್ಲ ಸಮಸ್ಯೆಗಳಿಂದ ದೂರವಿರಬಹುದು.