ಕೊಳಲು ಹಿಡಿದು ಕೃಷ್ಣನ ಆಗಮನಕ್ಕಾಗಿ ಕಾದ ಹರ್ಷಿಕಾ!

ಭಾನುಪ್ರಿಯ ಡಿ.ಕೆ

ಕೊಳಲು ಹಿಡಿದು ಕೃಷ್ಣನ ಆಗಮನಕ್ಕಾಗಿ ಕಾದ ಹರ್ಷಿಕಾ!

ಕನ್ನಡ ಚಿತ್ರರಂಗದ ದಂಪತಿಗಳಾದ ಹರ್ಷಿಕಾ ಮತ್ತು ಭುವನ್ ಸದ್ಯದಲ್ಲೇ ತಮ್ಮ ಎರಡನೇ ಮಗುವನ್ನು ಬರಮಾಡಿಕೊಳ್ಳುವ ಸಂಭ್ರಮದಲ್ಲಿದ್ದಾರೆ.

ರಾಧಾ ಕೃಷ್ಣ

ವೃಂದಾವನದ ರಾಧೆ ಕೃಷ್ಣನಿಗಾಗಿ ಕಾದಂತೆ, ನಾನು ನನ್ನ ಹೊಟ್ಟೆಯಲ್ಲಿರುವ ಪುಟ್ಟ ಕಂದನ ಆಗಮನಕ್ಕಾಗಿ ಕಾತುರದಿಂದ ಕಾಯುತ್ತಿದ್ದೇನೆ.

ಕೃಷ್ಣನ ಕೊಳಲಿನ ನಾದ

ಪ್ರತಿ ಬಾರಿ ಮಗುವಿನ ಆ ಮೃದುವಾದ ಒದೆತದ ಅನುಭವವಾದಾಗಲೂ, ದೂರದಿಂದ ಕೃಷ್ಣನ ಕೊಳಲಿನ ನಾದ ಕೇಳಿಸಿದಷ್ಟು ಆನಂದವಾಗುತ್ತಿದೆ.

ತಾಯ್ತನದ ಈ ಕ್ಷಣ

ನನ್ನ ಜಗತ್ತನ್ನು ಬೆಳಗಲು ಬರುವ ಆ ಪುಟ್ಟ ಜೀವವನ್ನು ಬರಮಾಡಿಕೊಳ್ಳಲು ಮನಸ್ಸು ತವಕಿಸುತ್ತಿದ್ದು, ತಾಯ್ತನದ ಈ ಕ್ಷಣಗಳಿಂದ ನಾನು ಧನ್ಯಳಾಗಿದ್ದೇನೆ.

ಎರಡನೇ ಮಗುವಿನ ಆಗಮನ

ಪ್ಯಾರಿಸ್‌ನ ಐಫೆಲ್ ಟವರ್‌ನ ಅದ್ಭುತ ಹಿನ್ನೆಲೆಯಲ್ಲಿ ನಿಂತು ಹರ್ಷಿಕಾ ತನ್ನ ಎರಡನೇ ಮಗುವಿನ ಆಗಮನದ ಸಿಹಿ ಸುದ್ದಿಯನ್ನು ಹಂಚಿಕೊಂಡಿರುವ ರೀತಿ ನಿಜಕ್ಕೂ ಮಂತ್ರಮುಗ್ಧಗೊಳಿಸುವಂತಿತ್ತು.

ಹೆಣ್ಣು ಮಗು

ಈಗಾಗಲೇ ಈ ದಂಪತಿಗೆ ತ್ರಿದೇವಿ ಎಂಬ ಮುದ್ದಾದ ಹೆಣ್ಣು ಮಗುವಿದ್ದು, ಈಗ ಮತ್ತೊಮ್ಮೆ ತಾಯ್ತನದ ಮಡಿಲೇರಲು ಹರ್ಷಿಕಾ ಸಜ್ಜಾಗಿದ್ದಾರೆ.