ದೇಹದ ಅರ್ಧ ಹೆಣ್ಣು, ಇನ್ನರ್ಧ ಭಾಗ ಗಂಡಿನ ರಚನೆಯುಳ್ಳ ಅಪರೂಪದ ಪಕ್ಷಿ ಪಕ್ಷಿಶಾಸ್ತ್ರಜ್ಞ ಹ್ಯಾಮಿಶ್ ಸ್ಪೆನ್ಸರ್ ಕ್ಯಾಮೆರಾ ಕಣ್ಣಿಗೆ ಸೆರೆಯಾಗಿದೆ..100 ವರ್ಷಗಳಿಗೂ ಹೆಚ್ಚು ಅವಧಿಯ ಬಳಿಕ ಕಾಣಸಿಕ್ಕ ಎರಡನೇ ಅಪರೂಪದ ದೃಶ್ಯ ಇದಾಗಿದೆ..ಪಕ್ಷಿಯ ಹೆಸರು ಗ್ರೀನ್ ಹನಿಕ್ರೀಪರ್ ಹಸಿರು ಬಣ್ಣದಲ್ಲಿರುವ ದೇಹದ ಅರ್ಧ ಭಾಗ ಹೆಣ್ಣು ಮತ್ತು ನೀಲಿ ಬಣ್ಣದಲ್ಲಿರುವ ಇನ್ನರ್ಧ ಭಾಗ ಗಂಡು..ಈ ಪಕ್ಷಿ ಯುನೈಟೆಡ್ ಸ್ಟೇಟ್ಸ್ನ ದಕ್ಷಿಣ ಕರೊಲಿನಾ ರಾಜ್ಯದ ಕೊಲಂಬಿಯಾದಲ್ಲಿ ಕಂಡುಬಂದಿದೆ..ಈ ಪಕ್ಷಿ ಸಾಮಾನ್ಯವಾಗಿ ಬಲಭಾಗದಲ್ಲಿ ಪುರುಷ ಪುಕ್ಕ ಮತ್ತು ಎಡಭಾಗದಲ್ಲಿ ಹೆಣ್ಣು ಗರಿಗಳನ್ನು ಹೊಂದಿದೆ..ಈ ವಿದ್ಯಮಾನವು ಪಕ್ಷಿಗಳಲ್ಲಿ ಅತ್ಯಂತ ಅಪರೂಪವಾಗಿದೆ. ಇದನ್ನು ವೈಜ್ಞಾನಿಕವಾಗಿ ಗೈನಾಂಡ್ರೊಮಾರ್ಫಿಕ್ ಎಂದು ಕರೆಯಲಾಗುತ್ತದೆ..ಮೊಟ್ಟೆ ಉತ್ಪಾದಿಸಲು ಸ್ತ್ರೀ ಕೋಶ ವಿಭಜನೆ ಸಮಯದಲ್ಲಿ ಉಂಟಾಗುವ ದೋಷದಿಂದ ಎರಡು ವೀರ್ಯವೂ ಫಲೀಕರಣಗೊಳ್ಳುವುದರಿಂದ ಈ ರೀತಿ ಸಂಭವಿಸುತ್ತದೆ ಎಂದು ತಜ್ಞರು ಹೇಳಿದ್ದಾರೆ.