ತೂಕ ಇಳಿಸಿಕೊಳ್ಳಲು ಸಹಾಯ ಮಾಡುವ ಅಭ್ಯಾಸಗಳು! Weight Loss

ಭಾನುಪ್ರಿಯ ಡಿ.ಕೆ

ತೂಕ ಇಳಿಸಿಕೊಳ್ಳಲು ಸಹಾಯ ಮಾಡುವ ಅಭ್ಯಾಸಗಳು! Weight Loss

ತೂಕ ಇಳಿಸಿಕೊಳ್ಳುವ ಪ್ರಕ್ರಿಯೆ ಸಾಮಾನ್ಯವೇನಲ್ಲ. ಇದಕ್ಕೆ ಶಿಸ್ತು ಜೀವನಶೈಲಿ, ಆರೋಗ್ಯಕ್ರಮ ಬೇಕಾಗಿರುತ್ತದೆ. ಈ ನಿಯಮಗಳನ್ನು ಅನೇಕ ಜನರು ಹೆಚ್ಚಿನ ಪ್ರೇರಣೆ, ಕಟ್ಟುನಿಟ್ಟಾದ ಯೋಜನೆಗಳು ಮತ್ತು ದೊಡ್ಡ ಭರವಸೆಗಳೊಂದಿಗೆ ಪ್ರಾರಂಭಿಸುತ್ತಾರೆ.

ನಡೆಯುವುದು

ಪ್ರತಿದಿನ ಕನಿಷ್ಟ 30-45 ನಿಮಿಷ ನಡೆಯುವ ಅಭ್ಯಾಸವನ್ನು ಮಾಡಿಕೊಳ್ಳಬೇಕು. ಈ ಅಭ್ಯಾಸವು ಹೊರಾಂಗಣದ ತಾಜಾ ಗಾಳಿ, ಚಲನೆ ಮತ್ತು ನಿಮ್ಮ ಮನಸ್ಸನ್ನು ಹಗುರವಾಗಿರಿಸಲು ಸಹಾಯ ಮಾಡುತ್ತದೆ.

ನೀರು

ಪ್ರತಿದಿನ ಸಾಕಷ್ಟು ನೀರು ಕುಡಿಯುವ ಅಭ್ಯಾಸದಿಂದ ತೂಕವನ್ನು ಇಳಿಸಿಕೊಳ್ಳಬಹುದು. ಉದಾಹರಣೆಗೆ, ಯಾರಾದರೂ 200 ಪೌಂಡ್‌ಗಳ ತೂಕ ಹೊಂದಿದ್ದರೆ, ಅದು ಸುಮಾರು 100 ಔನ್ಸ್‌ಗಳಷ್ಟು ನೀರು ಕುಡಿಯುವುದಾಗಿ ತಿಳಿಸಿದ್ದಾರೆ. ಇದು ಕಡುಬಯಕೆಗಳನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ

ಪ್ರೋಟೀನ್​ ಭರಿತ ಆಹಾರ ಸೇವನೆ

ಹೊಟ್ಟೆ ತುಂಬಿಸುವಲ್ಲಿ ಮತ್ತು ಕೊಬ್ಬು ಕರಗಿಸುವಲ್ಲಿ ಪ್ರೋಟೀನ್ ದೊಡ್ಡ ಪಾತ್ರ ವಹಿಸಿದೆ. ಪ್ರತಿದಿನ ಕನಿಷ್ಟ 100 ಗ್ರಾಂ ಪ್ರೊಟೀನ್​ ಸೇವಿಸುವುದರಿಂದ ಇದು ಹಸಿವನ್ನು ನಿಯಂತ್ರಿಸಿ, ಸ್ನಾಯುಗಳ ಬಲವನ್ನು ನಿರ್ಮಿಸುತ್ತದೆ.

ವ್ಯಾಯಾಮ ಮಾಡುವುದು

ಮೊಬೈಲ್​ ಬಿಟ್ಟು ವ್ಯಾಯಾಮ ಮಾಡುವುದು, ಪ್ರಾರ್ಥಿಸುವುದು, ಸಂಗೀತ ಕೇಳುವ ಅಭ್ಯಾಸವನ್ನು ಮಾಡುವುದರಿಂದ ಒತ್ತಡ ಇಳಿಕೆ, ಉತ್ತಮ ನಿದ್ರೆ, ಸುಧಾರಿತ ಗಮನ ಮತ್ತು ಹೆಚ್ಚಿನ ಮಾನಸಿಕ ಸ್ಪಷ್ಟತೆ ನೀಡುತ್ತದೆ.

ಫೈಬರ್ ಭರಿತ ಆಹಾರ ಸೇವನೆ

ಪ್ರತಿನಿತ್ಯ ಫೈಬರ್ ಅಂಶಗಳಿಂದ ಕೂಡಿದ ಆಹಾರಗಳನ್ನು ಸೇವಿಸುವ ಅಭ್ಯಾಸವನ್ನು ಮಾಡುವುದರಿಂದ ಜೀರ್ಣಕ್ರಿಯೆಯನ್ನು ಹೆಚ್ಚಿಸಿ, ನಿಮ್ಮ ಹೊಟ್ಟೆಯನ್ನು ತುಂಬಿಸುತ್ತದೆ.