'ಹೈಬ್ರಿಡ್​ ಪಿಲ್ಲಾ' ಸಾಯಿಪಲ್ಲವಿ

ಮಮತಾ

'ಹೈಬ್ರಿಡ್​ ಪಿಲ್ಲಾ' ಸಾಯಿಪಲ್ಲವಿ

ಮೇ.9ರಂದು ಸಾಯಿ ಪಲ್ಲವಿ ಹುಟ್ಟಿದ ದಿನ ಅಂದು ಆಕೆ ಯಾವ ಬಗ್ಗೆಯೂ ಅಪಡೇಟ್​ ಕೊಟ್ಟಿರಲಿಲ್ಲ. ಆದರೆ, ಈಗ ಏಕ್​ ದಿನ್​ ಸಿನಿಮಾದ ಫೋಟೋಗಳನ್ನು ಹಂಚಿಕೊಂಡಿದ್ದಾರೆ. ಸಿಂಪಲ್​​, ನ್ಯಾಚುರಲ್​ ಬ್ಯೂಟಿ, ಆಕೆಯ ಪ್ರತಿಭೆ ಕಂಡು ನೆಟ್ಟಿಗರು ಫಿದಾ ಆಗಿದ್ದಾರೆ.

ಏಕ್​ ದಿನ್​​ ಫ್ಲಾಪ್​?

ಅಮೀರ್​ ಖಾನ್​ ಪ್ರೊಡಕ್ಷನ್ಸ್​ನ ಏಕ್​ ದಿನ್​ ಸಿನಿಮಾದಲ್ಲಿ ಜುನೈದ್​ ಖಾನ್​ ನಟಿಸಿದ್ದರು. ಸಾಯಿಪಲ್ಲವಿ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿದ್ದರು. ಆದರೆ, ನೀರಸವಾದ ಕತೆ, ಬೋರಿಂಗ್​ ಲವ್​​ ಪ್ರೇಕ್ಷಕರನ್ನು ಇಂಟರ್ವೆಲ್​ನಲ್ಲೇ ಬೋರ್​ ಮಾಡಿ ಎದ್ದೋಗುವಂತೆ ಮಾಡುತ್ತದೆ ಎನ್ನಲಾಗಿದೆ.

ನಾನು ಸರಿಯಾದ ಆಯ್ಕೆಯಲ್ಲ

ಇತ್ತೀಚೆಗೆ ಸಾಯಿಪಲ್ಲವಿ ಅವರು ಸಂದರ್ಶನವೊಂದರಲ್ಲಿ ಮಾತನಾಡುತ್ತಾ ನಾನು ಏಕ್​ ದಿನ್​ ಸಿನಿಮಾಗೆ ಸರಿಯಾದ ಆಯ್ಕೆಯಲ್ಲ. ಈ ಬಗ್ಗೆ ಅಮೀರ್ ಖಾನ್​ ಅವರಿಗೆ ತಿಳಿಸಿದ್ದೆ. ನನಗಿಂತಲೂ ಲವಲವಿಕೆಯಿಂದ ಕೂಡಿರುವ ವ್ಯಕ್ತಿಯನ್ನು ಆಯ್ಕೆ ಮಾಡಿಕೊಳ್ಳಿ ಎಂದಿದ್ದ ಬಗ್ಗೆ ಮಾತನಾಡಿದ್ದರು.

ರಾಮಾಯಣ ಕತೆ ಏನಾಯ್ತು?

ರಾಮಾಯಣ ಭಾಗ-1 ದೀಪಾವಳಿಗೆ ರಿಲೀಸ್ ಆಗುತ್ತದೆ ಎನ್ನಲಾಗುತ್ತಿದೆ. ಏಕ್​ ದಿನ್​ ನಂತರ ರಾಮಾಯಣ ಸಿನಿಮಾದಲ್ಲಿ ಸಾಯಿ ಪಲ್ಲವಿ ವಾಯ್ಸ್​ ಬದಲಿಗೆ ಬೇರೆಯವರ ಧ್ವನಿ ಇರಲಿದೆ ಎನ್ನಲಾಗುತ್ತಿದೆ. ಹಿಂದಿ ಮಾತನಾಡಲು ಬರದಿರುವವರನ್ನು ಹೇಗೆ ಸಿನಿಮಾಗೆ ಆಯ್ಕೆ ಮಾಡಿಕೊಂಡಿರಿ ಎಂದು ಹೀಗೆಳೆದ ಬೆನ್ನಲ್ಲೇ ಚಿತ್ರ ತಂಡ ಈ ನಿರ್ಧಾರಕ್ಕೆ ಬಂದಿದೆ ಎನ್ನಲಾಗುತ್ತಿದೆ.

ನ್ಯಾಚುರಲ್​ ಬ್ಯೂಟಿಯ ಸಿನಿಮಾಗಳಿವು

ಸಾಯಿಪಲ್ಲವಿ ಫಿದಾ ಸಿನಿಮಾ ಮೂಲಕ ಫೇಮಸ್​ ಆದ್ರು, ಅವರ ನಟನೆ, ನಾಟ್ಯಕ್ಕೆ ಜನ ಮನಸೋತರು. ಭಾನುಮತಿಯಾಗಿ ನಟಿಸಿದ್ದ ಅವರ ಪಾತ್ರವನ್ನು ಹಲವರು ರೀಲ್ಸ್​ ಮಾಡಿದ್ದರು. ದಿಯಾ, ಪ್ರೇಮಂ, ಮಾರಿ, ಎನ್​ಜಿಕೆ, ಅದಿರನ್​​, ಕಲಿ, ಗಾರ್ಗಿ, ಎಂಸಿಎ, ಶ್ಯಾಮ್​ ಸಿಂಗ್​ ರಾಯ್​, ಪಾವ ಕದೈಗಳ್​, ಥಂಡೇಲ್​​​, ಲವ್​ ಸ್ಟೋರಿ, ಪಡಿ ಪಡಿ ಲೇಚೆ ಮನಸ್ಸು ಇವರ ಸಿನಿಮಾಗಳು.

ಫೇರ್​ ಅಂಡ್​ ಲವ್ಲಿ ಆಡ್​ ತಿರಸ್ಕಾರ

ಫೇರ್​ ಅಂಡ್​ ಲವ್ಲಿ ಜೊತೆಗಿನ 2 ಕೋಟಿ ರೂ. ಒಪ್ಪಂದ ತಿರಸ್ಕರಿಸಿದ್ದ ಬಗ್ಗೆ ಸಾಯಿ ಪಲ್ಲವಿ ಸ್ಪಷ್ಟಪಡಿಸಿದ್ದರು. ನಮ್ಮದು ಭಾರತೀಯ ನೆಲದ ಬಣ್ಣ, ಅದನ್ನು ಬಿಟ್ಟು ಅಮೆರಿಕದವರಂತೆ ಬಣ್ಣ ಬೇಕು ಅನ್ನೋದು ಎಷ್ಟು ಸರಿ. ಆಫ್ರಿಕನ್ನರು ತಮ್ಮದೇ ಆದ ಬಣ್ಣವನ್ನು ಹೊಂದಿದ್ದಾರೆ. ಜನರಿಗೆ ತಪ್ಪು ಮಾಹಿತಿ ನೀಡೋದು ಇಷ್ಟವಿಲ್ಲ ಹೀಗಾಗಿ ರಿಜೆಕ್ಟ್ ಮಾಡಿದ್ದೆ ಎಂದರು.