ಯಕೃತ್ತಿನ ಆರೈಕೆಗೆ ಉತ್ತಮ ಆಹಾರ!

ಭಾನುಪ್ರಿಯ ಡಿ.ಕೆ

ಯಕೃತ್ತಿನ ಆರೈಕೆಗೆ ಉತ್ತಮ ಆಹಾರ!

ನಮ್ಮ ದೇಹದಲ್ಲಿರುವ ಯಕೃತ್​ ಆಹಾರ ಜೀರ್ಣ, ಟಾಕ್ಸಿನ್ ತೆಗೆಯುವುದು, ಪ್ರೋಟೀನ್-ಕಾರ್ಬೋಹೈಡ್ರೇಟ್-ಕೊಬ್ಬು ಮೆಟಬಾಲಿಸಂ, ರೋಗನಿರೋಧಕ ಶಕ್ತಿ, ರಕ್ತ ಶುದ್ಧೀಕರಣವನ್ನು ಮಾಡುತ್ತದೆ.

ನೆನಸಿದ ವಾಲ್‌ನಟ್ ಮತ್ತು ಬಾದಾಮಿ

ಇದರಲ್ಲಿ ಒಮೇಗಾ-3 ಫ್ಯಾಟಿ ಆಸಿಡ್ ಮತ್ತು ಗ್ಲೂಟಾಥಯೋನ್ ಇದ್ದು, ಯಕೃತ್ತಿನ ಕೊಬ್ಬನ್ನು ಕರಗಿಸುತ್ತದೆ. ವಿಶೇಷವಾಗಿ ವಾಲ್‌ನಟ್ ಫ್ಯಾಟಿ ಲಿವರ್ ಗ್ರೇಡ್ 2-3 ರೋಗಿಗಳಿಗೆ ಅದ್ಭುತ ಕೆಲಸ ಮಾಡುತ್ತದೆ.

ಹಸಿ ಅರಿಶಿನ

ಹಸಿ ಅರಿಶಿನ ಸೇವನೆಯು ಕರ್ಕ್ಯುಮಿನ್ ಯಕೃತ್ತಿನ ಉರಿಯೂತವನ್ನು ಕಡಿಮೆ ಮಾಡುತ್ತದೆ. ಹಾಗೆಯೇ ಲಿವರ್ ಸೆಲ್‌ಗಳನ್ನು ರಿಪೇರಿ ಮಾಡುತ್ತದೆ. ಹಾಗಾಗಿ ಅರಿಶಿನ ಜೊತೆ ಕಾಲುಮೆಣಸು ಸೇರಿಸಿ ತಿನ್ನಿ.

ಬೀಟ್‌ರೂಟ್

ಯಕೃತ್ತಿನ ಆರೈಕೆಗೆ ಬೀಟ್​ರೂಟ್​ ಬಹಳ ಪ್ರಯೋಜನಕಾರಿಯಾಗಿದೆ. ಇದರಲ್ಲಿರುವ ಬೆಟಾಲೈನ್ ಎಂಬ ಆಂಟಿ-ಆಕ್ಸಿಡೆಂಟ್ ಲಿವರ್‌ನಲ್ಲಿ ಟಾಕ್ಸಿನ್‌ಗಳನ್ನು ಹೊರಹಾಕುತ್ತದೆ ಮತ್ತು ಫ್ಯಾಟಿ ಲಿವರ್ ಕಡಿಮೆ ಮಾಡುತ್ತದೆ.

ಪಪ್ಪಾಯಿ ಹಣ್ಣು

ಪಪ್ಪಾಯಿಯಲ್ಲಿರುವ ಪಪೇನ್ ಎಂಜೈಮ್ ಜೀರ್ಣಕ್ರಿಯೆಯನ್ನು ಸುಧಾರಿಸುತ್ತದೆ. ಇದು ಲಿವರ್​ನಲ್ಲಿ ಕೊಬ್ಬನ್ನು ಜಮಾವಣೆ ಮಾಡುತ್ತದೆ. ಇದನ್ನು ಸೇವಿಸುವುದರಿಂದ ಲಿವರ್ ಸಿರೋಸಿಸ್ ರಿಸ್ಕ್ ಕಡಿಮೆಯಾಗುತ್ತದೆ.

ಗ್ರೀನ್ ಟೀ

ಗ್ರೀನ್​ ಟೀಯಲ್ಲಿ EGCG ಲಿವರ್ ಫೈಬ್ರೋಸಿಸ್ ತಡೆಯುವುದರ ಜೊತೆಗೆ ಕೊಬ್ಬನ್ನು ಕರಗಿಸುತ್ತದೆ.

ನೆನಸಿದ ವಾಲ್‌ನಟ್ ಮತ್ತು ಬಾದಾಮಿ

ಇದರಲ್ಲಿ ಒಮೇಗಾ-3 ಫ್ಯಾಟಿ ಆಸಿಡ್ ಮತ್ತು ಗ್ಲೂಟಾಥಯೋನ್ ಇದ್ದು, ಯಕೃತ್ತಿನ ಕೊಬ್ಬನ್ನು ಕರಗಿಸುತ್ತದೆ. ವಿಶೇಷವಾಗಿ ವಾಲ್‌ನಟ್ ಫ್ಯಾಟಿ ಲಿವರ್ ಗ್ರೇಡ್ 2-3 ರೋಗಿಗಳಿಗೆ ಅದ್ಭುತ ಕೆಲಸ ಮಾಡುತ್ತದೆ.