ಗ್ಲಾಮರ್​ ಗೊಂಬೆ ಶಾನ್ವಿ

ರಮೇಶ್​ ಕುಮಾರ್​​ ಬಿ ಎಡಮೋಳೆ

ಗ್ಲಾಮರ್​ ಗೊಂಬೆ ಶಾನ್ವಿ

ಚಂದ್ರಲೇಖ, ಮಾಸ್ಟರ್​ ಪೀಸ್​, ತಾರಕ್​ ಹಾಗೂ ಮಫ್ತಿ ಸಿನಿಮಾಗಳಲ್ಲಿ ನಟಿಸಿ ಕನ್ನಡಿಗರ ಮನಗೆದ್ದಿರುವ ನಟಿಯಂದರೆ ಅದು ಶಾನ್ವಿ ಶ್ರೀವಾತ್ಸವ. ಇತ್ತೀಚೆಗೆ ಅವರು ಇನ್​ಸ್ಟಾಗ್ರಾಂನಲ್ಲಿ ಹಂಚಿಕೊಂಡಿರುವ ಫೋಟೋಗಳು ವೈರಲ್​ ಆಗಿವೆ.

ವಾರಣಾಸಿ ಬ್ಯೂಟಿ

ಶಾನ್ವಿ ಅವರು 1993, ಡಿಸೆಂಬರ್ 8 ರಂದು ಉತ್ತರ ಪ್ರದೇಶದ ವಾರಣಾಸಿಯಲ್ಲಿ ಜನಿಸಿದರು. ಆಜಮ್‌ಗಢದಲ್ಲಿ ಪ್ರಾಥಮಿಕ ಶಿಕ್ಷಣ ಪಡೆದು, ಮುಂಬೈನ ಥಾಕೂರ್ ಕಾಲೇಜ್ ಆಫ್ ಸೈನ್ಸ್ ಅಂಡ್ ಕಾಮರ್ಸ್‌ನಲ್ಲಿ ಬಿಕಾಂ ಪದವಿ ಪಡೆದರು.

ಚಿತ್ರರಂಗ ಪ್ರವೇಶ

2012ರಲ್ಲಿ ತೆರೆಕಂಡ ತೆಲುಗು ಚಿತ್ರ ಲವ್ಲಿ ಮೂಲಕ ನಟನೆ ಆರಂಭಿಸಿದರು. ಕನ್ನಡ ಚಿತ್ರರಂಗದಲ್ಲಿ 2014ರಲ್ಲಿ ತೆರೆಕಂಡ ಚಂದ್ರಲೇಖ ಸಿನಿಮಾ ಮೂಲಕ ಯಶಸ್ಸು ಗಳಿಸಿ, ಎಲ್ಲರ ಗಮನ ಸೆಳೆದರು.

ಪ್ರಮುಖ ಸಿನಿಮಾಗಳು

ಕನ್ನಡದಲ್ಲಿ ಮಾಸ್ಟರ್​ ಪೀಸ್​, ಸುಂದರಾಂಗ ಜಾಣ, ತಾರಕ್​, ಮಫ್ತಿ, ಅವನೇ ಶ್ರೀಮನ್ನಾರಾಯಣ ಮುಂತಾದ ಹಲವು ಯಶಸ್ವಿ ಚಿತ್ರಗಳಲ್ಲಿ ನಟಿಸಿದ್ದಾರೆ. ತೆಲುಗು ಮತ್ತು ಇತ್ತೀಚೆಗೆ ಮರಾಠಿ ಚಿತ್ರಗಳಲ್ಲೂ ಕಾಣಿಸಿಕೊಂಡಿದ್ದಾರೆ.

ಸಿನಿಮಾ ಕುಟುಂಬ

ಶಾನ್ವಿ ಅವರ ಅಕ್ಕ ವಿದಿಶಾ ಶ್ರೀವಾಸ್ತವ್ ಸಹ ನಟಿ. ಒಬ್ಬ ಅಣ್ಣನಿದ್ದಾರೆ. ಕುಟುಂಬದಿಂದಲೇ ಸಿನಿಮಾ ಪ್ರಪಂಚಕ್ಕೆ ಬಂದವರು.

ಜಾಲತಾಣದಲ್ಲಿ ಆ್ಯಕ್ಟೀವ್​

ಶಾನ್ವಿ ಸೋಶಿಯಲ್​ ಮೀಡಿಯಾ ಇನ್ಫ್ಲುಯೆನ್ಸರ್ ಆಗಿಯೂ ಸಕ್ರಿಯರಾಗಿದ್ದಾರೆ. ಇನ್‌ಸ್ಟಾಗ್ರಾಮ್‌ನಲ್ಲಿ ಅತಿದೊಡ್ಡ ಅಭಿಮಾನಿಗಳನ್ನು ಹೊಂದಿರುವ ಶಾನ್ವಿ, ಯಾವಾಗಲೂ ಪ್ರವಾಸ ಹಾಗೂ ಫ್ಯಾಷನ್ ಪೋಸ್ಟ್‌ಗಳನ್ನು ಹಂಚಿಕೊಳ್ಳುತ್ತಾರೆ.

ಹಾಟ್​ ಫೋಟೋಸ್​ ವೈರಲ್​

ಇತ್ತೀಚೆಗೆ ಇಂಡೋನೇಷ್ಯಾದ ಬಾಲಿಗೆ ಪ್ರವಾಸ ಮಾಡಿದ್ದ ಶಾನ್ವಿ, ಅಲ್ಲಿನ ಮೋಜಿನ ಕ್ಷಣಗಳನ್ನು ಹಂಚಿಕೊಂಡಿದ್ದಾರೆ. ಅದರಲ್ಲಿ ಹಾಟ್​ ಫೋಟೋಗಳೂ ಸೇರಿವೆ. ಶಾನ್ವಿಯ ಮೈಮಾಟಕ್ಕೆ ಫ್ಯಾನ್ಸ್​ ಫಿದಾ ಆಗಿದ್ದು, ಮೆಚ್ಚುಗೆ ಸೂಚಿಸಿದ್ದಾರೆ.