ನಟಿ ಗೀತಾ ಭಾರತಿ ಭಟ್ ಅವರು 'ಲವ್ ಮಾಕ್ಟೇಲ್' ಚಿತ್ರದಲ್ಲಿ ತಾವು ಅನುಭವಿಸಿದ ಬಾಡಿ ಶೇಮಿಂಗ್ ಬಗ್ಗೆ ನೋವು ವ್ಯಕ್ತಪಡಿಸಿದ್ದಾರೆ..ಪಾತ್ರದಲ್ಲಿನ ಸಂಭಾಷಣೆಗಳಿಂದ ತಮಗೆ ತುಂಬಾ ಬೇಸರವಾಗಿದ್ದು, ಸಮಾಜಕ್ಕೆ ತಪ್ಪು ಸಂದೇಶ ರವಾನಿಸಿದ್ದಕ್ಕೆ ವಿಷಾದವಿದೆ ಎಂದಿದ್ದಾರೆ..ಗೀತಾ ಭಾರತಿ ಭಟ್ ಈ ಚಿತ್ರದಲ್ಲಿ ಅತಿಥಿ ಪಾತ್ರ ಮಾಡಿದ್ದರು..‘ಹೂವಿನ ರೀತಿ ಇದ್ದರು, ಹೂಕೋಸಿನ ರೀತಿ ಆಗಿದ್ದಾಳೆ’ ಎಂದು ಗೀತಾಗೆ ಹೇಳಲಾಗುತ್ತದೆ. ಈ ಡೈಲಾಗ್ ಅವರಿಗೆ ಬೇಸರ ಮೂಡಿಸಿದೆ..‘ನನ್ನನ್ನು ಕೆಟ್ಟ ರೀತಿಯಲ್ಲಿ ತೋರಿಸಲಾಗಿದೆ. ಬಾಡಿಶೇಮಿಂಗ್ ಆಗಿದೆ. ಲವ್ ಮಾಕ್ಟೇಲ್ ಸಿನಿಮಾದಲ್ಲಿ ಈ ಡೈಲಾಗ್ ಇದೆ. ದೊಡ್ಡ ಸ್ಕ್ರೀನ್ನಲ್ಲಿ ನೋಡಿದಾಗ ನನಗೆ ತುಂಬಾ ಬೇಸರವಾಯಿತು.