ಚಳಿಗಾಲದಲ್ಲಿ ತಿನ್ನಬೇಕಾದ ಹಣ್ಣುಗಳು

ಕಲಾನ್ವಿತ ಜಿ ಜೈನ್

ಚಳಿಗಾಲದಲ್ಲಿ ತಿನ್ನಬೇಕಾದ ಹಣ್ಣುಗಳು

ಚಳಿಗಾಲದಲ್ಲಿ ತಾಪಮಾನ ಕಡಿಮೆಯಾಗುವುದರಿಂದ ಶೀತ, ಕೆಮ್ಮು, ಜ್ವರ, ವೈರಲ್ ಸೋಂಕುಗಳು ಹೆಚ್ಚಾಗಿ ಬಾಧಿಸುತ್ತವೆ. ಈ ಸಮಯದಲ್ಲಿ ಋತುಮಾನಕ್ಕೆ ತಕ್ಕಂತೆ ಬೆಳೆಯುವ ಹಣ್ಣುಗಳು ಸೇವಿಸುವುದು ಉತ್ತಮ.

ಕಿತ್ತಳೆ

ಈ ಹಣ್ಣಿನಲ್ಲಿ ವಿಟಮಿನ್ ಸಿ ಭರಿತವಾಗಿರುವುದರಿಂದ ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ. ಶೀತ, ಜ್ವರ ಮತ್ತು ಸೋಂಕುಗಳಿಂದ ರಕ್ಷಣೆ ನೀಡುತ್ತದೆ.

ಪೇರಲೆ

ಈ ಹಣ್ಣಿನಲ್ಲಿ ವಿಟಮಿನ್ ಸಿ, ಫೈಬರ್ ಮತ್ತು ಆಂಟಿಆಕ್ಸಿಡೆಂಟ್‌ಗಳು ಹೇರಳ. ಜೀರ್ಣಕ್ರಿಯೆ ಸುಧಾರಿಸುತ್ತದೆ, ತೂಕ ನಿಯಂತ್ರಣಕ್ಕೆ ಸಹಾಯಕ ಮತ್ತು ಚರ್ಮಕ್ಕೆ ಒಳ್ಳೆಯದು.

ಸೀತಾಫಲ

ಇದು ದೇಹಕ್ಕೆ ಶಕ್ತಿ ನೀಡುವುದರ ಜತೆಗೆ, ವಿಟಮಿನ್ ಎ, ಸಿ ಮತ್ತು ಮೆಗ್ನೀಷಿಯಂ ಇದ್ದು ಕಣ್ಣುಗಳು, ಚರ್ಮ ಮತ್ತು ಮೂಳೆಗಳ ಆರೋಗ್ಯಕ್ಕೆ ಒಳ್ಳೆಯದು.

ದ್ರಾಕ್ಷಿ

ಆಂಟಿಆಕ್ಸಿಡೆಂಟ್‌ಗಳು ಹೆಚ್ಚಾಗಿ ಇದ್ದು ಹೃದಯದ ಆರೋಗ್ಯ ಸುಧಾರಿಸುತ್ತದೆ, ರಕ್ತದೊತ್ತಡ ನಿಯಂತ್ರಣ ಮತ್ತು ಉರಿಯೂತ ಕಡಿಮೆ ಮಾಡುತ್ತದೆ.

ದಾಳಿಂಬೆ

ಆಂಟಿಆಕ್ಸಿಡೆಂಟ್‌ಗಳಿಂದ ಸಮೃದ್ಧ, ರಕ್ತ ಶುದ್ಧೀಕರಣ, ಹೃದಯಕ್ಕೆ ಒಳ್ಳೆಯದು ಮತ್ತು ಕ್ಯಾನ್ಸರ್ ವಿರೋಧಿ ಗುಣಗಳು. ಹೆಚ್ಚಿರುವುದರಿಂದ ರೋಗ ನಿರೋಧಕ ಶಕ್ತಿ ಹೆಚ್ಚಿಸಲು ಸಹಾಯ ಮಾಡುತ್ತದೆ.