ಚರ್ಮದ ಕ್ಯಾನ್ಸರ್ನ ನಾಲ್ಕು ಪ್ರಮುಖ ಲಕ್ಷಣಗಳು
ಚರ್ಮದ ಕ್ಯಾನ್ಸರ್ ಅನ್ನು ಮೊದಲೇ ಪತ್ತೆಹಚ್ಚುವುದು ಜೀವ ಉಳಿಸಲು ಸಹಕಾರಿ. ಚರ್ಮದ ಮೇಲಿನ ಮಚ್ಚೆಗಳ ಬಣ್ಣ ಬದಲಾಗುವುದು, ದೀರ್ಘಕಾಲ ಗುಣವಾಗದ ಗಾಯಗಳು, ಹೊಸದಾಗಿ ಕಾಣಿಸಿಕೊಳ್ಳುವ ಗಂಟುಗಳು ಅಥವಾ ಚರ್ಮದಲ್ಲಿ ಉಂಟಾಗುವ ಅಸಾಮಾನ್ಯ ತುರಿಕೆ ಮತ್ತು ನೋವು ಇದರ ಪ್ರಮುಖ ಲಕ್ಷಣಗಳಾಗಿವೆ. ಇಂತಹ ಬದಲಾವಣೆಗಳು ಕಂಡುಬಂದಲ್ಲಿ ತಕ್ಷಣ ವೈದ್ಯಕೀಯ ಸಲಹೆ ಪಡೆಯುವುದು ಅಗತ್ಯ.