ಸಂಕಷ್ಟಿ ವೃತ ಮಾಡುವುದರಿಂದ ದೊರೆಯುವ ನಾಲ್ಕು ಫಲಗಳು
ಗಣೇಶನಿಗೆ ಪ್ರಿಯವಾದ ಸಂಕಷ್ಟಹರ ಚತುರ್ಥಿ ವ್ರತವನ್ನು ಆಚರಿಸುವುದರಿಂದ ಜೀವನದ ಸಕಲ ವಿಘ್ನಗಳು ದೂರವಾಗುತ್ತವೆ. ಶ್ರದ್ಧಾಭಕ್ತಿಯಿಂದ ಈ ವ್ರತ ಕೈಗೊಳ್ಳುವ ಭಕ್ತರಿಗೆ ಮಾನಸಿಕ ಶಾಂತಿ, ಆರ್ಥಿಕ ಸಮೃದ್ಧಿ ಹಾಗೂ ಇಷ್ಟಾರ್ಥ ಸಿದ್ಧಿ ಲಭಿಸುತ್ತದೆ. ಸಂಕಷ್ಟದ ಸಮಯದಲ್ಲಿ ಆನೆಮುಖನ ಮೊರೆ ಹೋಗುವವರಿಗೆ ಆತನ ಕೃಪೆಯಿಂದ ಕಷ್ಟಗಳು ಮಂಜಿನಂತೆ ಕರಗಿ, ಸುಖ-ಸಂತೋಷ ನೆಲೆಸುತ್ತದೆ ಎಂಬುದು ಅಚಲವಾದ ನಂಬಿಕೆ.