ಚಳಿಗಾಲದಲ್ಲಿ ಹೊಳೆಯುವ ಚರ್ಮಕ್ಕಾಗಿ ತಿನ್ನಬೇಕಾದ ಆಹಾರಗಳು!

ಭಾನುಪ್ರಿಯ ಡಿ.ಕೆ

ಚಳಿಗಾಲದಲ್ಲಿ ಹೊಳೆಯುವ ಚರ್ಮಕ್ಕಾಗಿ ತಿನ್ನಬೇಕಾದ ಆಹಾರಗಳು!

ಚಳಿಗಾಲ ಸಮೀಪಿಸುತ್ತಿದ್ದಂತೆಯೇ ಚರ್ಮವು ಬಿಗಿಯುವುದು, ಉರಿಯುವುದು ಹಾಗೂ ಮಂದತೆಯನ್ನು ಅನುಭವಿಸಲು ಪ್ರಾರಂಭಿಸುತ್ತದೆ. ಹಾಗಾಗಿ ಈ ರೀತಿಯ ಆಹಾರವನ್ನು ಸೇವಿಸುವುದರಿಂದ ಚರ್ಮವನ್ನು ಹೊಳೆಯುವಂತೆ ಮಾಡಿಕೊಳ್ಳಬಹುದು.

ಅವಕಾಡೊಗಳು

ಅವಕಾಡೊಗಳಲ್ಲಿ ವಿಟಮಿನ್ E, C, K ಮತ್ತು B-6 ಇವೆ. ಚರ್ಮವನ್ನುಹೈಡ್ರೇಟ್ ಮಾಡಿ, ಒಣತನ-ಕೊರೆತ ತಡೆಯುತ್ತದೆ. ಆಂಟಿಆಕ್ಸಿಡೆಂಟ್‌ಗಳು ಫ್ರೀ ರಾಡಿಕಲ್‌ಗಳನ್ನು ಹೋರಾಡಿ ಕೊಲಾಜನ್ ಹೆಚ್ಚಿಸುತ್ತವೆ.

ಬಾದಾಮಿ

ಇದರಲ್ಲಿರುವ ವಿಟಮಿನ್ E, ಜಿಂಕ್, ಹೆಲ್ದಿ ಫ್ಯಾಟ್ ಮತ್ತು ಒಮೇಗಾ-3 ಸಮೃದ್ಧವಾಗಿವೆ. ಇದು ಒಣತನ ತಡೆಯುತ್ತದೆ, ಚರ್ಮವನ್ನು ಮೃದು ಮತ್ತು ಹೈಡ್ರೇಟೆಡ್ ಇರಿಸುತ್ತದೆ.

ಸೀತಾಫಲ

ಸೀತಾಫಲ ಹಣ್ಣಿನಲ್ಲಿ ವಿಟಮಿನ್ C ಇದ್ದು, ಕೊಲಾಜನ್ ಉತ್ಪಾದನೆ ಹೆಚ್ಚಿಸಿ ಚರ್ಮವನ್ನು ಗಟ್ಟಿಯಾಗಿರಿಸುತ್ತದೆ. ಇದರಲ್ಲಿರುವ ಆಂಟಿಆಕ್ಸಿಡೆಂಟ್‌ಗಳು ಫ್ರೀ ರಾಡಿಕಲ್‌ಗಳನ್ನು ನಾಶಪಡಿಸಿ, ಕಲೆ-ಗುರುತು ಕಡಿಮೆ ಮಾಡುತ್ತವೆ.

ತೆಂಗಿನ ನೀರು

ಎಲೆಕ್ಟ್ರೋಲೈಟ್‌ಗಳು ಪೊಟ್ಯಾಸಿಯಂ, ಸೋಡಿಯಂ, ಸೈಟೋಕೈನಿನ್ ಹಾರ್ಮೋನ್ ಮತ್ತು ಆಂಟಿಆಕ್ಸಿಡೆಂಟ್‌ಗಳಿಂದ ತುಂಬಿದೆ ಇದರ ಸೇವನೆಯು ಚರ್ಮದ ಒಳಗಿಂದ ಡೀಪ್ ಹೈಡ್ರೇಟ್ ಮಾಡಿ, ಚಳಿಗಾಲದ ಒಣತನ-ಕೊರೆತ ತಡೆಯುತ್ತದೆ.

ಕ್ಯಾರೆಟ್​

ಬೀಟಾ-ಕ್ಯಾರೋಟಿನ್‌ನ ಶಕ್ತಿಶಾಲಿ ಮೂಲವಾಗಿದ್ದು, ಇದನ್ನು ಸೇವಿಸುವುದರಿಂದ ಚರ್ಮವನ್ನು ತೇವಾಂಶದಿಂದ ಕೂಡಿರುವಂತೆ ಮಾಡುತ್ತದೆ. ಹಾಗೆಯೇ ಕಾಂತಿಯನ್ನು ಕಾಪಾಡಿಕೊಳ್ಳಲು ಸಹಾಯ ಮಾಡುತ್ತದೆ.