ದೇಹಕ್ಕೆ ವಿಟಮಿನ್​ ಡಿ ನೀಡುವ ಆಹಾರಗಳು!

ಭಾನುಪ್ರಿಯ ಡಿ.ಕೆ

ದೇಹಕ್ಕೆ ವಿಟಮಿನ್​ ಡಿ ನೀಡುವ ಆಹಾರಗಳು!

ವಿಟಮಿನ್ ಡಿ ನಮ್ಮ ಆರೋಗ್ಯಕ್ಕೆ ತುಂಬಾ ಅವಶ್ಯಕ. ಸಾಮಾನ್ಯವಾಗಿ ಸೂರ್ಯನ ಬೆಳಕಿನಿಂದ ಮಾತ್ರ ವಿಟಮಿನ್ ಡಿ ಪಡೆಯುತ್ತೇವೆ ಎಂದು ಭಾವಿಸುತ್ತೇವೆ. ಆದರೆ, ವಿಟಮಿನ್​ ಡಿ ಆಹಾರಗಳನ್ನು ಸೇವಿಸುವುದನ್ನು ದೇಹಕ್ಕೆ ಪೋಷಣೆ ನೀಡಿಕೊಳ್ಳಬಹುದು.

ಕೊಬ್ಬಿನ ಮೀನು

ಕೊಬ್ಬಿನ ಮೀನುಗಳನ್ನು ವಿಟಮಿನ್ ಡಿ ಯ ಅತ್ಯುತ್ತಮ ಮೂಲವೆಂದು ಪರಿಗಣಿಸಲಾಗುತ್ತದೆ. ಇದರ ಸೇವನೆಯು ಮೂಳೆಗಳನ್ನು ಬಲಪಡಿಸುವುದರ ಜೊತೆಗೆ ಉರಿಯೂತವನ್ನು ಕಡಿಮೆ ಮಾಡುತ್ತದೆ. ದೇಹಕ್ಕೆ ಬೇಕಾದ ವಿಟಮಿನ್​ ಡಿ ಪೂರೈಕೆಯನ್ನು ಮಾಡುತ್ತದೆ.

ಮೊಟ್ಟೆಯ ಹಳದಿ ಲೋಳೆ

ಮೊಟ್ಟೆಯಲ್ಲಿರುವ ಹಳದಿ ಲೋಳೆಯು ವಿಟಮಿನ್​ ಡಿಯನ್ನು ಹೊಂದಿರುತ್ತದೆ. ಮೊಟ್ಟೆಯ ಹಳದಿ ಲೋಳೆಯಲ್ಲಿರುವ ಆರೋಗ್ಯಕರ ಕೊಬ್ಬುಗಳು ವಿಟಮಿನ್ ಡಿ ಹೀರಿಕೊಳ್ಳುವಿಕೆಯನ್ನು ಸುಧಾರಿಸುತ್ತದೆ.

ಅಣಬೆಗಳು

ನಮ್ಮ ಚರ್ಮವನ್ನು ಸೂರ್ಯನ ಬೆಳಕಿನಿಂದ ವಿಟಮಿನ್​ ಡಿ ಉತ್ಪಾದನೆಯನ್ನು ಹೇಗೆ ಹೆಚ್ಚಿಸುತ್ತವೆಯೋ, ಅದೇ ರೀತಿ ಸೂರ್ಯನ ಕಿರಣಗಳನ್ನು ಪಡೆದು ಬೆಳದ ಅಣಬೆಗಳಲ್ಲಿ ವಿಟಮಿನ್​ ಡಿ ಹೇರಳವಾಗಿರುತ್ತದೆ.

ಬಲವರ್ಧಿತ ಹಾಲು ಮತ್ತು ಮೊಸರು

ಪ್ರತಿನಿತ್ಯ ಹಾಲು ಮತ್ತು ಮೊಸರನ್ನು ಸೇವಿಸುವುದರಿಂದ ದೇಹಕ್ಕೆ ನೇರವಾಗಿ ವಿಟಮಿನ್​ ಡಿ ಸಿಗುತ್ತದೆ. ಪ್ರತಿದಿನ ಇದನ್ನು ಸೇವಿಸಿದಾಗ ಪ್ರಯೋಜನಗಳು ಹೆಚ್ಚಾಗುವುದರ ಜೊತೆಗೆ ದೇಹಕ್ಕೆ ಬೇಕಾದ ಪೂರೈಕೆಗಳು ಕೂಡಾ ಸಿಗಲಾರಂಭಿಸುತ್ತವೆ.

ಸಿರಿಧಾನ್ಯಗಳು

ಸಿರಿಧಾನ್ಯಗಳಲ್ಲಿ ಮೆಗ್ನೀಸಿಯಂ ಸಮೃದ್ಧವಾಗಿದೆ. ಇದು ವಿಟಮಿನ್ ಡಿ ಯನ್ನು ಅದರ ಸಕ್ರಿಯ ರೂಪಕ್ಕೆ ಬದಲಾಯಿಸಲು ಸಹಾಯ ಮಾಡುತ್ತದೆ.