ಬೆಳಗ್ಗೆ ಎದ್ದ ತಕ್ಷಣ ಖಾಲಿ ಹೊಟ್ಟೆಯಲ್ಲಿ ಸರಿಯಾದ ಆಹಾರಗಳನ್ನು ಸೇವಿಸುವುದು ಜೀರ್ಣಕ್ರಿಯೆಯನ್ನು ಸುಧಾರಿಸುತ್ತದೆ, ಶಕ್ತಿಯನ್ನು ಹೆಚ್ಚಿಸುತ್ತದೆ ಮತ್ತು ದಿನವಿಡೀ ಆರೋಗ್ಯವನ್ನು ಕಾಪಾಡುತ್ತದೆ.
ನಿಂಬೆ ನೀರು
ಬೆಚ್ಚಗಿನ ನೀರಿಗೆ ನಿಂಬೆ ರಸ ಹಾಕಿ ಕುಡಿಯಿರಿ. ಇದು ಮೆಟಾಬಾಲಿಸಂ ಹೆಚ್ಚಿಸಿ, ಜೀರ್ಣಕ್ರಿಯೆಯನ್ನು ಸುಧಾರಿಸಿ, ವಿಷಮುಕ್ತಗೊಳಿಸುತ್ತದೆ.
ಜೇನುತುಪ್ಪ + ಬೆಚ್ಚಗಿನ ನೀರು
ಒಂದು ಚಮಚ ಜೇನುತುಪ್ಪವನ್ನು ಬೆಚ್ಚಗಿನ ನೀರಿನಲ್ಲಿ ಕರಗಿಸಿ ಕುಡಿಯಿರಿ. ಇದು ದೇಹಕ್ಕೆ ಬೇಕಾದ ಶಕ್ತಿ ನೀಡುತ್ತದೆ. ಜೊತೆಗೆ ರೋಗನಿರೋಧಕ ಶಕ್ತಿಯನ್ನು ಬಲಪಡಿಸಿ ಹೊಟ್ಟೆಯನ್ನು ಶಾಂತಗೊಳಿಸುತ್ತದೆ.
ಪಪ್ಪಾಯಿ
ಪಪ್ಪಾಯಿ ಹಣ್ಣು ಸೇವಿಸುವುದರಿಂದ ವಿಷಕಾರಿಗಳನ್ನು ದೂರ ಮಾಡುತ್ತದೆ, ಜೀರ್ಣಕ್ರಿಯೆ ಸುಗಮಗೊಳಿಸುತ್ತದೆ ಮತ್ತು ತೂಕ ನಿಯಂತ್ರಣಕ್ಕೆ ಸಹಾಯ ಮಾಡುತ್ತದೆ.
ಓಟ್‌ಮೀಲ್
ನೀರಿನಲ್ಲಿ ಬೇಯಿಸಿದ ಓಟ್ಸ್ ಫೈಬರ್‌ನಿಂದ ಸಮೃದ್ಧವಾಗಿದ್ದು, ದೀರ್ಘಕಾಲ ತೃಪ್ತಿ ನೀಡುತ್ತದೆ ಮತ್ತು ರಕ್ತದ ಸಕ್ಕರೆ ಮಟ್ಟ ನಿಯಂತ್ರಿಸಿ, ಆರೋಗ್ಯವನ್ನು ಹೆಚ್ಚಿಸುತ್ತದೆ.
ನೆನೆಸಿದ ಬಾದಾಮಿ
ರಾತ್ರಿ ನೆನೆಸಿ ಬೆಳಗ್ಗೆ 4-6 ಬಾದಾಮಿ ತಿನ್ನಿರಿ. ಇದು ಮೆದುಳು ಆರೋಗ್ಯ, ಚರ್ಮ ಮತ್ತು ತೂಕ ನಿಯಂತ್ರಣಕ್ಕೆ ಉತ್ತಮವಾಗಿದೆ.
ಕಲ್ಲಂಗಡಿ
ಹೆಚ್ಚು ನೀರಿನಾಂಶ ಹೊಂದಿರುವ ಕಲ್ಲಂಗಡಿ ಹೈಡ್ರೇಷನ್ ನೀಡುತ್ತದೆ, ಜೀರ್ಣಕ್ರಿಯೆ ಸುಧಾರಿಸುತ್ತದೆ ಮತ್ತು ತಾಜಾತನ ನೀಡುತ್ತದೆ.