ನಿಮ್ಮ ಅಮೂಲ್ಯವಾದ ಕಣ್ಣುಗಳ ರಕ್ಷಣೆಗೆ ಈ ಸಲಹೆಗಳನ್ನು ತಪ್ಪದೇ ಪಾಲಿಸಿ!
ಭಾನುಪ್ರಿಯ ಡಿ.ಕೆ
ನಿಮ್ಮ ಅಮೂಲ್ಯವಾದ ಕಣ್ಣುಗಳ ರಕ್ಷಣೆಗೆ ಈ ಸಲಹೆಗಳನ್ನು ತಪ್ಪದೇ ಪಾಲಿಸಿ!
ಬೇಸಿಗೆಯ ತೀವ್ರವಾದ ಬಿಸಿಲು ಮತ್ತು ಧೂಳು ಕಣ್ಣುಗಳ ಮೇಲೆ ಕೆಟ್ಟ ಪರಿಣಾಮ ಬೀರಬಹುದು. ಈ ಸಮಯದಲ್ಲಿ ಕಣ್ಣಿನ ಉರಿ, ಕೆಂಪಾಗುವುದು ಅಥವಾ ತುರಿಕೆ ಕಾಣಿಸಿಕೊಳ್ಳುವುದು ಸಾಮಾನ್ಯ.
ಗುಣಮಟ್ಟದ ಸನ್‌ಗ್ಲಾಸ್ ಬಳಸಿ
ಬಿಸಿಲಿನಲ್ಲಿ ಹೊರಗೆ ಹೋಗುವಾಗ ಕಣ್ಣುಗಳ ರಕ್ಷಣೆಗಾಗಿ ಸನ್‌ಗ್ಲಾಸ್ ಧರಿಸುವುದು ಬಹಳ ಮುಖ್ಯ. ಸೂರ್ಯನ ಹಾನಿಕಾರಕ ಅತಿನೇರಳೆ ಕಿರಣಗಳಿಂದ (UV Rays) ಕಣ್ಣುಗಳನ್ನು ರಕ್ಷಿಸಲು '100% UV Protection' ಇರುವ ಕನ್ನಡಕಗಳನ್ನೇ ಆಯ್ಕೆ ಮಾಡಿ.
ದೇಹವನ್ನು ಹೈಡ್ರೇಟೆಡ್ ಆಗಿಡಿ
ಬೇಸಿಗೆಯಲ್ಲಿ ದೇಹದಲ್ಲಿ ನೀರಿನಂಶ ಕಡಿಮೆಯಾದಾಗ ಕಣ್ಣುಗಳು ಒಣಗಲು ಪ್ರಾರಂಭಿಸುತ್ತವೆ. ದಿನಕ್ಕೆ ಕನಿಷ್ಠ 8-10 ಲೋಟ ನೀರು ಕುಡಿಯುವುದರಿಂದ ಕಣ್ಣಿನ ನೈಸರ್ಗಿಕ ತೇವಾಂಶ ಉಳಿಯುತ್ತದೆ.
ತಂಪು ನೀರಿನಿಂದ ಕಣ್ಣು ತೊಳೆಯಿರಿ
ದಿನದಲ್ಲಿ ಮೂರ್ನಾಲ್ಕು ಬಾರಿ ಕಣ್ಣುಗಳನ್ನು ಶುದ್ಧವಾದ ತಂಪು ನೀರಿನಿಂದ ತೊಳೆಯಿರಿ. ಇದು ಕಣ್ಣಿನ ಮೇಲಿರುವ ಧೂಳನ್ನು ತೆಗೆದುಹಾಕುವುದಲ್ಲದೆ, ಕಣ್ಣಿಗೆ ತಂಪನ್ನು ನೀಡುತ್ತದೆ. ಆದರೆ, ಕಣ್ಣುಗಳನ್ನು ಜೋರಾಗಿ ಉಜ್ಜಬೇಡಿ. ಇದು ಸೋಂಕಿಗೆ ಕಾರಣವಾಗಬಹುದು.
ಸೌತೆಕಾಯಿ ಅಥವಾ ಐ-ಪ್ಯಾಕ್ ಬಳಕೆ
ಕಣ್ಣಿನ ಆಯಾಸ ಮತ್ತು ಉರಿಯನ್ನು ಕಡಿಮೆ ಮಾಡಲು ರಾತ್ರಿ ಮಲಗುವ ಮುನ್ನ ಸೌತೆಕಾಯಿಯ ತುಂಡುಗಳನ್ನು ಕಣ್ಣಿನ ಮೇಲಿಟ್ಟುಕೊಳ್ಳಿ. ಸೌತೆಕಾಯಿಯಲ್ಲಿರುವ ತಂಪಾದ ಗುಣವು ಕಣ್ಣಿನ ಸುತ್ತಲಿನ ಊತವನ್ನು ಕಡಿಮೆ ಮಾಡುತ್ತದೆ.
ಹಸಿರು ತರಕಾರಿ
ನಿಮ್ಮ ಆಹಾರದಲ್ಲಿ ವಿಟಮಿನ್ 'ಎ' ಸಮೃದ್ಧವಾಗಿರುವ ಕ್ಯಾರೆಟ್, ಪಾಲಕ್ ಮತ್ತು ಹಸಿರು ಎಲೆಕೋಸುಗಳನ್ನು ಸೇರಿಸಿ. ಹಣ್ಣುಗಳ ಪೈಕಿ ಪಪ್ಪಾಯಿ ಮತ್ತು ಮಾವಿನ ಹಣ್ಣುಗಳು ಕಣ್ಣಿನ ದೃಷ್ಟಿಯನ್ನು ಚುರುಕುಗೊಳಿಸಲು ಮತ್ತು ಬೇಸಿಗೆಯ ಶಾಖದಿಂದ ಕಣ್ಣನ್ನು ರಕ್ಷಿಸಲು ಸಹಾಯ ಮಾಡುತ್ತವೆ.