ಉತ್ತಮ ಆರೋಗ್ಯಕ್ಕಾಗಿ ಈ ಅಭ್ಯಾಸಗಳನ್ನು ಪಾಲಿಸಿ! Good habits
ಭಾನುಪ್ರಿಯ ಡಿ.ಕೆ
ಉತ್ತಮ ಆರೋಗ್ಯಕ್ಕಾಗಿ ಈ ಅಭ್ಯಾಸಗಳನ್ನು ಪಾಲಿಸಿ! Good habits
ಉತ್ತಮ ಆರೋಗ್ಯ ಹೊಂದಬೇಕು ಎಂಬುದು ಎಲ್ಲರಿಗೂ ಇರುವಂತಹ ಕಾಳಜಿ. ಆದರೆ, ನಾವು ಮಾಡುವ ಕೆಲವೊಂದು ಅಭ್ಯಾಸಗಳು ನಮ್ಮ ಆರೋಗ್ಯವನ್ನು ಹದಗೆಡಿಸಲು ಪ್ರಾರಭಿಸುತ್ತದೆ. ಹಾಗಾಗಿ ಇಂದಿನಿಂದಲೇ ಈ ಅಭ್ಯಾಸಗಳನ್ನು ಅಳವಡಿಸಿಕೊಳ್ಳಿ.
ಸಮತೋಲಿತ ಆಹಾರ ಸೇವನೆ
ಪ್ರತಿನಿತ್ಯ ಜಂಕ್ ಫುಡ್ ಮತ್ತು ಹೆಚ್ಚು ಸಿಹಿತಿಂಡಿಗಳನ್ನು ತಪ್ಪಿಸಿ, ಹಣ್ಣುಗಳು, ತರಕಾರಿಗಳು, ಸಿರಿಧಾನ್ಯಗಳು, ಪ್ರೋಟೀನ್ ಭರಿತ ಆಹಾರಗಳನ್ನು ಸೇವಿಸುವುದರಿಂದ ಇದು ದೇಹದ ತೂಕವನ್ನು ನಿಯಂತ್ರಿಸುವುದರ ಜೊತೆಗೆ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ.
ಪ್ರತಿದಿನ ವ್ಯಾಯಾಮ
ಪ್ರತಿದಿನ ಕನಿಷ್ಟ 30 ನಿಮಿಷಗಳ ಕಾಲ ವ್ಯಾಯಾಮ ಮಾಡುವ ಅಭ್ಯಾಸವನ್ನು ಮಾಡಿಕೊಳ್ಳಿ. ನಡಿಗೆ, ಓಟ, ಯೋಗ ಅಥವಾ ಇನ್ನಿತರ ಚಟುವಟಿಕೆಗಳನ್ನು ಮಾಡಿ. ಇದು ಹೃದಯ ಆರೋಗ್ಯ, ಸ್ನಾಯು ಬಲ ಮತ್ತು ಮಾನಸಿಕ ಒತ್ತಡ ಕಡಿಮೆ ಮಾಡುತ್ತದೆ.
ಸಾಕಷ್ಟು ನೀರು ಕುಡಿಯಿರಿ
ದಿನಕ್ಕೆ 3-4 ಲೀಟರ್ ನೀರು ಕುಡಿಯುವುರಿಂದ ದೇಹದ ಜೀವಕೋಶಗಳನ್ನು ಆರೋಗ್ಯವಾಗಿಡುತ್ತದೆ. ಚಯಾಪಚಯ ಕ್ರಿಯೆ ಸುಗಮಗೊಳಿಸುತ್ತದೆ.
ಸಾಕಷ್ಟು ನಿದ್ರೆ
ದಿನಕ್ಕೆ 7-8 ಗಂಟೆಗಳ ಗುಣಮಟ್ಟದ ನಿದ್ರೆ ಮಾಡುವ ಅಭ್ಯಾಸವನ್ನು ಮಾಡಿಕೊಳ್ಳಿ. ಇದು ಮನಸ್ಸು ಮತ್ತು ದೇಹವನ್ನು ರಿಫ್ರೆಶ್ ಮಾಡಿ, ಒತ್ತಡ ಕಡಿಮೆ ಮಾಡುತ್ತದೆ.
ಕೆಟ್ಟ ಅಭ್ಯಾಸಗಳನ್ನು ತ್ಯಜಿಸಿ
ಧೂಮಪಾನ, ಮಧ್ಯಪಾನ ಮತ್ತು ಅತಿಯಾದ ಸಿಹಿತಿಂಡಿಗಳನ್ನು ತಪ್ಪಿಸಿ. ಇದು ದೀರ್ಘಕಾಲೀನ ರೋಗಗಳಿಂದ ರಕ್ಷಣೆ ನೀಡುತ್ತದೆ.