ಅತಿಯಾದ ತೂಕ, ಬೊಜ್ಜು ಇಳಿಸಲು ನಾವು ತಿಳಿಸಿರುವ ಒಂದಷ್ಟು ಸರಳ ಟಿಪ್ಸ್ಗಳನ್ನು ತಪ್ಪದೇ ಅನುಸರಿಸಿ, ವ್ಯತ್ಯಾಸ ಕಂಡುಕೊಳ್ಳಿ.ಪ್ರತಿ ದಿನ 35ರಿಂದ 40 ನಿಮಿಷಗಳ ಕಾಲ ವೇಗದ ಕಾಲ್ನಡಿಗೆ ಅಥವಾ ಜಾಗಿಂಗ್ ಮಾಡುವುದನ್ನು ರೂಢಿಸಿಕೊಳ್ಳಿ.ವಾರದಲ್ಲಿ 4 ಅಥವಾ 5 ದಿನ ತೂಕ ಎತ್ತುವುದು ಅಥವಾ ವ್ಯಾಯಾಮಗಳನ್ನು ಮಾಡುವುದು ಉತ್ತಮ.ಹೆಚ್ಚು ಪ್ರೋಟಿನ್ಯುಕ್ತ ಆಹಾರಗಳನ್ನು ಸೇವಿಸಿ (ಮೊಟ್ಟೆ, ಚಿಕನ್, ಪನ್ನೀರ್ ಇತ್ಯಾದಿ) ಅನ್ನ ಆದಷ್ಟು ಕಡಿಮೆ ಮಾಡಿ.ರಾತ್ರಿ 7 ಗಂಟೆಯ ನಂತರ ಭಾರೀ ಪ್ರಮಾಣದ ಅಥವಾ ಭೂರಿ ಭೋಜನವನ್ನು ಮಾಡಬೇಡಿ.ಪ್ರತಿದಿನ ಬೆಳಗ್ಗೆ ಖಾಲಿ ಹೊಟ್ಟೆಗೆ ಗ್ರೀನ್ ಟೀ ಅಥವಾ ನಿಂಬೆ ನೀರು ಕುಡಿಯುವ ಅಭ್ಯಾಸ ರೂಢಿಸಿಕೊಳ್ಳಿ.ಸರಿಯಾದ ಊಟದ ಕ್ರಮದ ಜತೆಗೆ 7ರಿಂದ 8 ಗಂಟೆಗಳ ನಿದ್ರೆ ಅತ್ಯವಶ್ಯಕ ಅನ್ನೋದು ನೆನಪಿರಲಿ.ಸಕ್ಕರೆ, ಫಾಸ್ಟ್ ಫುಡ್ ಮತ್ತು ಕರಿದ ತಿಂಡಿಗಳ ಸೇವನೆಯನ್ನು ಸಂಪೂರ್ಣವಾಗಿ ಬಿಡುವುದು ಉತ್ತಮ.ದಿನಕ್ಕೆ 2ರಿಂದ 3 ಲೀಟರ್ ನೀರು ಕುಡಿಯುವುದು ಒಳ್ಳೆಯದು. ಇದು ನಿರ್ಜಲೀಕರಣ ತಪ್ಪಿಸುತ್ತದೆ