ತಪ್ಪುಗಳನ್ನು ಮಾಡಲು ಹಿಂಜರಿಯಬೇಡಿ
ತಪ್ಪು ಮಾಡುವುದು ಮನುಷ್ಯ ಸಹಜ. ತಪ್ಪು ಮಾಡಿದರೆ ಇತರರು ಏನು ಅಂದುಕೊಳ್ಳುತ್ತಾರೋ ಎಂಬ ಭಯವೇ ಆತ್ಮವಿಶ್ವಾಸ ಕುಗ್ಗಲು ಮುಖ್ಯ ಕಾರಣ. ಸೋಲನ್ನು ಕಲಿಕೆಯ ಭಾಗವಾಗಿ ಸ್ವೀಕರಿಸಿ. ಕಷ್ಟಕರವಾದ ಕೆಲಸಗಳನ್ನು ಮಾಡುವಾಗ ಸಣ್ಣ ಸಣ್ಣ ಗುರಿಗಳನ್ನು ಇಟ್ಟುಕೊಳ್ಳಿ, ಆ ಸಣ್ಣ ಗುರಿಗಳನ್ನು ತಲುಪಿದಾಗ ನಿಮಗೆ ದೊಡ್ಡ ಮಟ್ಟದ ಆತ್ಮವಿಶ್ವಾಸ ದೊರೆಯುತ್ತದೆ.