ವಿಟಮಿನ್ ಕೊರತೆಯ ಐದು ಲಕ್ಷಣಗಳು

ವಿನಾಯಕ ನಾಯಕ

ವಿಟಮಿನ್ ಕೊರತೆಯ ಐದು ಲಕ್ಷಣಗಳು

ನಿಮ್ಮ ದೇಹದಲ್ಲಿ ಜೀವಸತ್ವಗಳ ಕೊರತೆಯಾದಾಗ ದೇಹವು ಕೆಲವು ಸೂಕ್ಷ್ಮ ಸಂಕೇತಗಳನ್ನು ನೀಡುತ್ತದೆ. ನಾವು ಹೆಚ್ಚಾಗಿ ಇವುಗಳನ್ನು ಕೆಲಸದ ಒತ್ತಡ ಅಥವಾ ಸುಸ್ತು ಎಂದು ನಿರ್ಲಕ್ಷಿಸುತ್ತೇವೆ. ಆದರೆ ಇವುಗಳನ್ನು ಸಮಯಕ್ಕೆ ಸರಿಯಾಗಿ ಗುರುತಿಸುವುದು ಬಹಳ ಮುಖ್ಯ.

ಉಗುರು ಮತ್ತು ಕೂದಲು ತುಂಡಾಗುವುದು

ನಿಮ್ಮ ಉಗುರುಗಳು ಪದೇ ಪದೇ ಒಡೆಯುತ್ತಿದ್ದರೆ ಅಥವಾ ಕೂದಲು ಅತಿಯಾಗಿ ಉದುರಿ ತುದಿಯಲ್ಲಿ ಸೀಳಾಗುತ್ತಿದ್ದರೆ, ಅದು ಬಯೋಟಿನ್ ಕೊರತೆಯ ಸಂಕೇತವಾಗಿರಬಹುದು. ಬಯೋಟಿನ್ ದೇಹದಲ್ಲಿನ ಜೀವಕೋಶಗಳ ಬೆಳವಣಿಗೆಗೆ ಮತ್ತು ಶಕ್ತಿಗೆ ಬಹಳ ಅಗತ್ಯ.

ಬಾಯಿ ಅಥವಾ ತುಟಿಯ ಬಿರುಕು

ತುಟಿಯ ಅಕ್ಕಪಕ್ಕದ ಮೂಲೆಗಳಲ್ಲಿ ಸಣ್ಣಗೆ ಬಿರುಕು ಬಿಡುವುದು ಅಥವಾ ಆಗಾಗ ಬಾಯಿ ಹುಣ್ಣು ಆಗುತ್ತಿದ್ದರೆ, ಅದು ಬಿ-ಕಾಂಪ್ಲೆಕ್ಸ್ ಮತ್ತು ಕಬ್ಬಿಣದ ಅಂಶದ ಕೊರತೆಯನ್ನು ತೋರಿಸುತ್ತದೆ.

ವಸಡುಗಳಿಂದ ರಕ್ತ ಸ್ರವಿಸುವುದು

ಹಲ್ಲುಜ್ಜುವಾಗ ಅಥವಾ ಗಟ್ಟಿಯಾದ ಹಣ್ಣುಗಳನ್ನು ಕಚ್ಚಿದಾಗ ವಸಡಿನಿಂದ ರಕ್ತ ಬರುತ್ತಿದ್ದರೆ ಅದು ವಿಟಮಿನ್ ಸಿ ಕೊರತೆಯ ಲಕ್ಷಣ. ವಿಟಮಿನ್ ಸಿ ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುವುದಲ್ಲದೆ, ಗಾಯಗಳು ಬೇಗ ವಾಸಿಯಾಗಲು ಮತ್ತು ಹಲ್ಲುಗಳ ಆರೋಗ್ಯಕ್ಕೆ ಸಹಕಾರಿ.

ಕಣ್ಣಿನ ಕೆಳಗೆ ಕಪ್ಪು ಕಲೆ

ಕಡಿಮೆ ಬೆಳಕಿನಲ್ಲಿ ವಸ್ತುಗಳು ಸರಿಯಾಗಿ ಕಾಣಿಸದೇ ಇರುವುದು ಅಥವಾ ಕಣ್ಣುಗಳು ಅತಿಯಾಗಿ ಒಣಗುತ್ತಿದ್ದರೆ ಅದು ವಿಟಮಿನ್ ಎ ಕೊರತೆಯ ಸಂಕೇತ. ಇದನ್ನು ನಿರ್ಲಕ್ಷಿಸಿದರೆ ಮುಂದೆ ದೃಷ್ಟಿ ದೋಷ ಉಂಟಾಗುವ ಸಾಧ್ಯತೆ ಇರುತ್ತದೆ.

ಮೂಳೆಗಳ ನೋವು

ಯಾವುದೇ ಬಲವಾದ ದೈಹಿಕ ಕೆಲಸ ಮಾಡದಿದ್ದರೂ ಕಾಲುಗಳಲ್ಲಿ ಸ್ನಾಯು ಸೆಳೆತಉಂಟಾಗುವುದು ಅಥವಾ ಸದಾ ಮೂಳೆಗಳಲ್ಲಿ ನೋವು ಕಾಣಿಸಿಕೊಳ್ಳುತ್ತಿದ್ದರೆ ಅದು ವಿಟಮಿನ್ ಡಿ ಮತ್ತು ಕ್ಯಾಲ್ಸಿಯಂ ಕೊರತೆಯನ್ನು ಸೂಚಿಸುತ್ತದೆ. ಸೂರ್ಯನ ಬೆಳಕು ಈ ಜೀವಸತ್ವಕ್ಕೆ ಅತಿ ದೊಡ್ಡ ಮೂಲವಾಗಿದೆ.