ಆರೋಗ್ಯ ಕಣಜ ರಾಗಿ

ರಮೇಶ್​ ಕುಮಾರ್​​ ಬಿ ಎಡಮೋಳೆ

ಆರೋಗ್ಯ ಕಣಜ ರಾಗಿ

ಹಿಟ್ಟಂ ತಿಂದಂ ಬೆಟ್ಟಂ ಕಿತ್ತಿಟ್ಟಂ ಎಂಬ ಮಾತಿದೆ. ಅದರಂತೆ ರಾಗಿ ಮುದ್ದೆ ಸೇವನೆಯು ಆರೋಗ್ಯಕ್ಕೆ ತುಂಬಾನೇ ಒಳ್ಳೆಯದು.

ಏನೆಲ್ಲ ಪ್ರಯೋಜನಾ?

ರಾಗಿಯು ರಕ್ತದಲ್ಲಿನ ಸಕ್ಕರೆ ಮಟ್ಟ ನಿಯಂತ್ರಣ, ರಕ್ತಹೀನತೆ, ಮೂಳೆಗಳಿಗೆ ಬಲ ಹಾಗೂ ಜೀರ್ಣಕ್ರಿಯೆ ಸುಧಾರಿಸುತ್ತದೆ. ಕಡಿಮೆ ಕ್ಯಾಲೋರಿಯೊಂದಿಗೆ ತೂಕ ಇಳಿಕೆಗೆ ನೆರವಾಗುತ್ತದೆ.

ಮಧುಮೇಹ

ರಾಗಿಯಲ್ಲಿರುವ ನಾರಿನಾಂಶ ಮತ್ತು ಪೋಷಕಾಂಶಗಳು ಮಧುಮೇಹವನ್ನು ನಿರ್ವಹಿಸಲು ಸಹಾಯ ಮಾಡುತ್ತದೆ.

ಮೂಳೆಗಳ ಬಲ

ಕ್ಯಾಲ್ಸಿಯಂನಲ್ಲಿ ಸಮೃದ್ಧವಾಗಿರುವ ರಾಗಿಯು ಮೂಳೆಗಳನ್ನು ಬಲವಾಗಿಡುತ್ತದೆ ಮತ್ತು ಮೂಳೆ ಸಮಸ್ಯೆಗಳನ್ನು ಕಡಿಮೆ ಮಾಡುತ್ತದೆ.

ಜೀರ್ಣಕ್ರಿಯೆ ಸುಧಾರಣೆ

ರಾಗಿಯಲ್ಲಿ ಫೈಬರ್‌ ಅಧಿಕವಾಗಿದ್ದು, ಜೀರ್ಣಾಂಗ ವ್ಯವಸ್ಥೆಯನ್ನು ಆರೋಗ್ಯಕರವಾಗಿರಿಸುತ್ತದೆ ಮತ್ತು ಜೀರ್ಣಕಾರಿ ಸಮಸ್ಯೆಗಳನ್ನು ಕಡಿಮೆ ಮಾಡುತ್ತದೆ.

ಹಿಮೋಗ್ಲೋಬಿನ್​ ಮಟ್ಟ

ರಾಗಿಯಲ್ಲಿರುವ ಹೆಚ್ಚಿನ ಕಬ್ಬಿಣಾಂಶವು ದೇಹದಲ್ಲಿ ಹಿಮೋಗ್ಲೋಬಿನ್ ಮಟ್ಟವನ್ನು ಹೆಚ್ಚಿಸುತ್ತದೆ.

ತೂಕ ಇಳಿಕೆ

ರಾಗಿಯು ಕಡಿಮೆ ಕ್ಯಾಲೋರಿಗಳೊಂದಿಗೆ ದೇಹಕ್ಕೆ ಶಕ್ತಿಯನ್ನು ಒದಗಿಸುವುದಲ್ಲದೆ ತೂಕ ನಷ್ಟಕ್ಕೆ ಉಪಯುಕ್ತವಾಗಿದೆ

ದಿನವಿಡಿ ಶಕ್ತಿ

ಬೆಳಗ್ಗೆ ರಾಗಿಯನ್ನು ಉಪಾಹಾರವಾಗಿ ಸೇವಿಸುವುದರಿಂದ ದಿನವಿಡೀ ಶಕ್ತಿಯನ್ನು ಕಾಪಾಡಿಕೊಳ್ಳಲು ಮತ್ತು ಜೀರ್ಣಕಾರಿ ಸಮಸ್ಯೆಗಳನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ.

ಸಕ್ಕರೆ ಮಟ್ಟ

ಮಧ್ಯಾಹ್ನ ಊಟದ ಸಮಯದಲ್ಲಿ ರಾಗಿಯನ್ನು ತಿನ್ನುವುದು ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ಸಮತೋಲನದಲ್ಲಿರಿಸುತ್ತದೆ.

ಸಖತ್ ಕಾಂಬಿನೇಷನ್​​

ಚಿಕನ್​ ಅಥವಾ ಮಟನ್ ಕರಿಯೊಂದಿಗೆ ರಾಗಿ ಮುದ್ದೆಯನ್ನು ತಿನ್ನುವುದು ಸಖತ್​ ರುಚಿಯಾಗಿರುತ್ತದೆ.