ತಮಿಳುನಾಡಿನಲ್ಲಿ ವಿಧಾನಸಭಾ ಚುನಾವಣೆ ನಡೆಯುತ್ತಿದ್ದು, ಗುರುವಾರ ಬೆಳಿಗ್ಗೆಯಿಂದಲೇ ಮತದಾರರು ಮತಗಟ್ಟೆಗಳಿಗೆ ತಲುಪಿ ತಮ್ಮ ಮತದಾನದ ಹಕ್ಕನ್ನು ಚಲಾಯಿಸುತ್ತಿದ್ದಾರೆ. ಚಲನಚಿತ್ರ ಮತ್ತು ರಾಜಕೀಯ ಗಣ್ಯರು ತಮ್ಮ ಮತದಾನದ ಹಕ್ಕನ್ನು ಚಲಾಯಿಸಿದ್ದಾರೆ.
ಥಲಾ ಅಜಿತ್ ಮತದಾನ
ನಟ ಅಜಿತ್ ಕುಮಾರ್ ಅವರು 2026ರ ತಮಿಳುನಾಡು ವಿಧಾನಸಭಾ ಚುನಾವಣೆಯ ಅಂಗವಾಗಿ ಚೆನ್ನೈನ ತಿರುವನ್ಮಿಯೂರು ಮತಗಟ್ಟೆಯಲ್ಲಿ ಇಂದು ತಮ್ಮ ಮತ ಚಲಾಯಿಸಿದರು.
ಹಕ್ಕು ಚಲಾಯಿಸಿದ ಧನುಷ್
ನಟ ಧನುಷ್ ಅವರು 2026ರ ತಮಿಳುನಾಡು ವಿಧಾನಸಭಾ ಚುನಾವಣೆಯ ಅಂಗವಾಗಿ ಚೆನ್ನೈನ ಆಳ್ವಾರ್‌ಪೇಟೆಯ ಸೇಂಟ್ ಫ್ರಾನ್ಸಿಸ್ ಕ್ಸೇವಿಯರ್ ಶಾಲೆಯಲ್ಲಿ ಇಂದು ತಮ್ಮ ಮತ ಚಲಾಯಿಸಿದರು.
ಪುತ್ರಿ ಜತೆ ಕಮಲ್ ಹಾಸನ್ ಮತದಾನ
ಮಕ್ಕಳ್ ನೀಧಿ ಮೈಯಂ (MNM) ಅಧ್ಯಕ್ಷ ಹಾಗೂ ನಟ ಕಮಲ್ ಹಾಸನ್ ಮತ್ತು ಅವರ ಪುತ್ರಿ ಶ್ರುತಿ ಹಾಸನ್ ಅವರು ಇಂದು ಚೆನ್ನೈನ ಆಳ್ವಾರ್‌ಪೇಟೆಯ ಕಾರ್ಪೊರೇಷನ್ ಶಾಲೆಯಲ್ಲಿ ತಮ್ಮ ಮತ ಚಲಾಯಿಸಿದರು.
ಸಿಎಂ ಸ್ಟಾಲಿನ್ ಹಕ್ಕು ಚಲಾವಣೆ
ತಮಿಳುನಾಡು ಮುಖ್ಯಮಂತ್ರಿ ಎಂ.ಕೆ. ಸ್ಟಾಲಿನ್ ಮತ್ತು ಅವರ ಪತ್ನಿ ದುರ್ಗಾ ಸ್ಟಾಲಿನ್ ಅವರು ಇಂದು ಚೆನ್ನೈನ ತೇನಾಂಪೇಟೆಯಲ್ಲಿರುವ ಎಸ್‌ಐಇಟಿ ಕಾಲೇಜು ಮತಗಟ್ಟೆಯಲ್ಲಿ ತಮ್ಮ ಮತ ಚಲಾಯಿಸಿದರು.
ಪ್ರದೀಪ್ ರಂಗನಾಥನ್ ಮತದಾನ
ನಟ ಮತ್ತು ನಿರ್ದೇಶಕ ಪ್ರದೀಪ್ ರಂಗನಾಥನ್ ಅವರು 2026ರ ತಮಿಳುನಾಡು ವಿಧಾನಸಭಾ ಚುನಾವಣೆಯ ಅಂಗವಾಗಿ ಇಂದು ಚೆನ್ನೈನ ಮಡಿಪಾಕ್ಕಂನಲ್ಲಿರುವ ಮತಗಟ್ಟೆಯಲ್ಲಿ ತಮ್ಮ ಮತ ಚಲಾಯಿಸಿದರು.
ತಲೈವಾ ಹಕ್ಕು ಚಲಾವಣೆ
ಸೂಪರ್‌ಸ್ಟಾರ್ ರಜನಿಕಾಂತ್ ಅವರು 2026ರ ತಮಿಳುನಾಡು ವಿಧಾನಸಭೆ ಚುನಾವಣೆಯಲ್ಲಿ ಚೆನ್ನೈನ ಸ್ಟೆಲ್ಲಾ ಮಾರಿಸ್ ಕಾಲೇಜಿನ ಮತಗಟ್ಟೆಯಲ್ಲಿ ತಮ್ಮ ಮತವನ್ನು ಚಲಾಯಿಸಿದರು.
ಮತಹಾಕಿದ ವಿಜಯ್
ನಟ ಮತ್ತು 'ತಮಿಳಗ ವೆಟ್ರಿ ಕಳಗಂ' ಪಕ್ಷದ ಅಧ್ಯಕ್ಷರಾದ ವಿಜಯ್ ಅವರು 2026ರ ತಮಿಳುನಾಡು ವಿಧಾನಸಭೆ ಚುನಾವಣೆಯಲ್ಲಿ ಚೆನ್ನೈನ ನೀಲಂಕರೈ ಮತಗಟ್ಟೆಯಲ್ಲಿ ತಮ್ಮ ಮತವನ್ನು ಚಲಾಯಿಸಿದರು.
ಹಕ್ಕು ಚಲಾಯಿಸಿದ ತ್ರಿಷಾ
ನಟಿ ತ್ರಿಷಾ ಕೃಷ್ಣನ್ ಅವರು 2026ರ ತಮಿಳುನಾಡು ವಿಧಾನಸಭೆ ಚುನಾವಣೆಯಲ್ಲಿ ಚೆನ್ನೈನ ಆಳ್ವಾರ್‌ಪೇಟೆಯ ಸೇಂಟ್ ಫ್ರಾನ್ಸಿಸ್ ಕ್ಸೇವಿಯರ್ ಮಿಡಲ್ ಸ್ಕೂಲ್ ಮತಗಟ್ಟೆಯಲ್ಲಿ ತಮ್ಮ ಮತವನ್ನು ಚಲಾಯಿಸಿದರು.
ನಟ ವಿಕ್ರಮ್ ಮತದಾನ
ನಟ ಚಿಯಾನ್ ವಿಕ್ರಮ್ ಅವರು 2026ರ ತಮಿಳುನಾಡು ವಿಧಾನಸಭೆ ಚುನಾವಣೆಯಲ್ಲಿ ಚೆನ್ನೈನ ಬೆಸೆಂಟ್ ನಗರದ ಮತಗಟ್ಟೆಯಲ್ಲಿ ತಮ್ಮ ಮತವನ್ನು ಚಲಾಯಿಸಿದರು.
ವೋಟ್ ಮಾಡಿದ ವಿಜಯ್ ಸೇತುಪತಿ
ನಟ ವಿಜಯ್ ಸೇತುಪತಿ ಅವರು 2026ರ ತಮಿಳುನಾಡು ವಿಧಾನಸಭೆ ಚುನಾವಣೆಯಲ್ಲಿ ಚೆನ್ನೈನ ಕಿಲ್ಪಾಕ್‌ನ (Kilpauk) ಸರ್ಕಾರಿ ಪ್ರೌಢಶಾಲೆಯಲ್ಲಿ ತಮ್ಮ ಮತವನ್ನು ಚಲಾಯಿಸಿದರು.
ಹಾಸ್ಯ ನಟ ಯೋಗಿ ಬಾಬು ಮತದಾನ
ನಟ ಯೋಗಿ ಬಾಬು ಅವರು 2026ರ ತಮಿಳುನಾಡು ವಿಧಾನಸಭೆ ಚುನಾವಣೆಯಲ್ಲಿ ಚೆನ್ನೈನ ವಲಸರವಾಕ್ಕಂ ಮತಗಟ್ಟೆಯಲ್ಲಿ ತಮ್ಮ ಮತವನ್ನು ಚಲಾಯಿಸಿದರು.