ಜಾತಿ ರತ್ನಾಲು ಸಿನಿಮಾ ಮೂಲಕ ಚಿತ್ರರಂಗಕ್ಕೆ ಹೆಚ್ಚೇ ಪರಿಚಿತರಾದ ಫರಿಯಾ ಅಬ್ದುಲ್ಲಾ ಅವರು ಸಿಎಂ ಸಿ ಜೋಸೆಫ್ ವಿಜಯ್ ಅವರ ಮಗ ನಿರ್ದೇಶಿಸಿರುವ ಸಿಗ್ಮಾ ಸಿನಿಮಾ ಮೂಲಕ ಬೆಳ್ಳಿ ತೆರೆ ಮೇಲೆ ಮಿಂಚಲು ಸಜ್ಜಾಗಿದ್ದಾರೆ.
ಸಿಂಪಲ್ ಹೂವಿನ ಸೀರೆಯಲ್ಲಿ ಮಿಂಚಿಂಗ್
ಇತ್ತೀಚೆಗೆ ನಡೆದ ಸಿಗ್ಮಾ ಪ್ರೀ ರಿಲೀಸ್ ಇವೆಂಟ್ನಲ್ಲಿ ಭಾಗಿಯಾದ ಅವರು, ಹಳದಿ ಮತ್ತು ಪಿಂಕ್ ಮಿಶ್ರಿತ ಹೂವಿನ ಸೀರೆ, ಸ್ಲೀವ್ ಲೆಸ್ ಬ್ಲೌಸ್, ಹವಳದ ಓಲೆ ಹಾಗೂ ಸಿಂಪಲ್ ಮೇಕಪ್ ಅವರ ಅಂದವನ್ನು ಹೆಚ್ಚಿಸುವಂತೆ ಮಾಡಿತ್ತು.
ಸಿಗ್ಮಾದಲ್ಲಿ ಯಾರೆಲ್ಲ ಇದ್ದಾರೆ?
ಸಂದೀಪ್ ಕಿಶನ್ ಹಾಗೂ ಫರಿಯಾ ಮುಖ್ಯ ಭೂಮಿಕೆಯ ಸಿಗ್ಮಾ ಸಿನಿಮಾದಲ್ಲಿ ನಟಿಸಿದ್ದಾರೆ. ಸಿಎಂ ವಿಜಯ್ ಅವರ ಮಗ ಥಾಮಸ್ ಆಕ್ಷನ್ ಕಟ್ ಹೇಳಿದ್ದು, ಅಕ್ಟೋಬರ್ 2ರಂದು ಈ ಸಿನಿಮಾವು ತೆರೆಗೆ ಬರಲಿದೆ ಎನ್ನಲಾಗುತ್ತಿದೆ.
ಕಾಫಿರ್ ಎಂದು ನಿಂದನೆ
ಹೈದರಾಬಾದ್ನಲ್ಲಿ ನಡೆದ ಹಿಂದೂ ಕಾರ್ಯಕ್ರಮವೊಂದರಲ್ಲಿ ಫರಿಯಾ ಭಾಗಿಯಾಗಿದ್ದಕ್ಕೆ ಅವರಿಗೆ ಕಾಫಿರ್ ಎನ್ನುವ ಹೆಸರನ್ನು ನೀಡಲಾಗಿತ್ತು. ಇದರಿಂದ ನೊಂದ ಅವರು ವಿಡಿಯೋ ಹರಿಬಿಟ್ಟಿದ್ದರು. ನಾನು ಎಲ್ಲ ಧರ್ಮವನ್ನು ಗೌರವಿಸುವವಳು ನನ್ನ ಕುಟುಂಬಸ್ಥರು ಹೇಳಿಕೊಟ್ಟಿರುವುದು ಅದನ್ನೇ ಎಂದಿದ್ದರು.
ಫರಿಯಾ ನಟಿಸಿದ ಸಿನಿಮಾ ಇದು
ಜಾತಿ ರತ್ನಾಲು ಮೋಸ್ಟ್ ಎಲಿಜಿಬಲ್ ಬ್ಯಾಚುರಲ್, ಬಂಗಾರರಾಜು, ಲೈಕ್ ಶೇರ್ ಆಂಡ್ ಸಬ್ಸ್ಕ್ರೈಬ್, ರಾವಣಾಸುರ, ಮಾಟು ವದಲರಾ2, ಆ ಒಕ್ಕಟ್ಟಿ ಅಡಕ್ಕು ಎನ್ನುವ ಸಿನಿಮಾದಲ್ಲಿ ನಟಿಸಿದ್ದಾರೆ.
ನರ್ಸರಿಯಲ್ಲೇ ಲವ್ವಾಗಿತ್ತು
ಫರಿಯಾ ಅವರಿಗೆ ನರ್ಸರಿಯಲ್ಲಿದ್ದಾಗಲೇ ಒಬ್ಬ ಹುಡುಗನೆಂದರೆ ಇಷ್ಟವಾಗಿತ್ತಂತೆ ಆತನನ್ನೇ ಮದುವೆಯಾಗಬೇಕು ಎಂದು ಹುಚ್ಚರಂತೆ ಪ್ರೀತಿ ಮಾಡುತ್ತಿದ್ದರಂತೆ. ಈ ಬಗ್ಗೆ ಅವರು ಸಂದರ್ಶನವೊಂದರಲ್ಲಿ ಭಾಗಿಯಾಗಿ ಮಾಹಿತಿ ಹಂಚಿಕೊಂಡಿದ್ದರು.
ಫರಿಯಾ ರೀಲ್ಸ್ಗಳು ಹೆಚ್ಚು ಹಿಟ್
ಫರಿಯಾ ಅವರು ಇತ್ತೀಚೆಗೆ ಕನ್ನಡದ ಮಸ್ತ್ ಮಸ್ತ್ ಹುಡುಗಿ ಬಂತು ಹಾಡಿಗೆ ರೀಲ್ಸ್ ಮಾಡಿದ್ದರು. ಇದು ಇಡೀ ಸೋಶಿಯಲ್ ಮೀಡಿಯಾದಲ್ಲಿಯೇ ಭಾರಿ ವೈರಲ್ ಆಗಿತ್ತು. ಅವರ ಆಕ್ಷನ್ ಮತ್ತು ಸೆಳೆಯುವ ನೋಟ ಹಲವರ ಗಮನ ಸೆಳೆದಿತ್ತು.
ಗಾಯಕಿಯೂ ಹೌದು
ನಟಿ ಫರಿಯಾ ಅಬ್ದುಲ್ಲಾ ನಟಿ ಮಾತ್ರವಲ್ಲ ಅವರು ರೀಲ್ಸ್ಗಳಲ್ಲಿ ಹಾಡಿದ್ದಾರೆ. ಗಾಯಕಿಯಾಗಿ ಹೊರಹೊಮ್ಮಿರುವ ವಿಡಿಯೋಗಳು ಇಂಟರ್ನೆಟ್ನಲ್ಲಿ ಇವೆ.