ಎರಡನೇ ಮಗುವಿನ ತಂದೆಯಾದ ಖ್ಯಾತ ನಿರ್ದೇಶಕ ಅಟ್ಲಿ

Vijayavan

ಎರಡನೇ ಮಗುವಿನ ತಂದೆಯಾದ ಖ್ಯಾತ ನಿರ್ದೇಶಕ ಅಟ್ಲಿ

ತಮಿಳಿನ ಖ್ಯಾತ ನಿರ್ದೇಶಕ ಅಟ್ಲಿ ಮತ್ತು ಅವರ ಪತ್ನಿ ಪ್ರಿಯಾ ಅಟ್ಲಿ ಎರಡನೇ ಮಗುವಿನ ನಿರೀಕ್ಷೆಯಲ್ಲಿದ್ದು ಈ ಕುರಿತು ಇನ್​ಸ್ಟಾಗ್ರಾಂನಲ್ಲಿ ಫೋಟೋ ಶೇರ್ ಮಾಡಿ ಘೋಷಣೆ ಮಾಡಿಕೊಂಡಿದ್ದಾರೆ.

ಹೊಸ ಸದಸ್ಯರ ಸೇರ್ಪಡೆ

ನಮ್ಮ ಹೊಸ ಸದಸ್ಯರ ಸೇರ್ಪಡೆಯೊಂದಿಗೆ ನಮ್ಮ ಮನೆ ಇನ್ನಷ್ಟು ಆರಾಮದಾಯಕವಾಗಲಿದೆ! ಹೌದು! ನಾನು ಮತ್ತೆ ಗರ್ಭಿಣಿಯಾಗಿದ್ದೇನೆ. ನಿಮ್ಮೆಲ್ಲರ ಆಶೀರ್ವಾದ, ಪ್ರೀತಿ ಮತ್ತು ಪ್ರಾರ್ಥನೆಗಳು ನಮಗೆ ಬೇಕು ಎಂದು ಪ್ರಿಯಾ ಪೋಸ್ಟ್​ ಮಾಡಿದ್ದಾರೆ

ಅಟ್ಲಿ-ಪ್ರಿಯಾ

2014ರಲ್ಲಿ ಅಟ್ಲಿ ಮತ್ತು ಪ್ರಿಯಾ ಪ್ರೀತಿಸಿ ಮದುವೆಯಾಗಿದ್ದರು. ದಂಪತಿಗೆ 2023ರಲ್ಲಿ ಮೀರ್ ಎಂಬ ಮಗ ಜನಿಸಿದ್ದಾನೆ. ಈಗ ಮತ್ತೊಮ್ಮೆ ಎರಡನೇ ಬಾರಿಗೆ ತಂದೆ-ತಾಯಿಯಾಗುತ್ತಿದ್ದಾರೆ. ನಟಿ ಕೀರ್ತಿ ಸುರೇಶ್, ಸಮಂತಾ ಸೇರಿ ಹಲವು ನಟಿಯರು ಶುಭನ ಹಾರೈಸುತ್ತಿದ್ದಾರೆ.

ಅಲ್ಲು ಅರ್ಜುನ್ ಜೊತೆ ಅಟ್ಲಿ ಸಿನಿಮಾ

ತಮಿಳಿನಲ್ಲಿ ಖ್ಯಾತ ನಿರ್ದೇಶಕನಾಗಿರುವ ಅಟ್ಲಿ, ದಳಪತಿ ವಿಜಯ್ ಜೊತೆ ಬಿಗಿಲ್, ಸರ್ಕಾರ್ ಸೇರಿ ಮೂರು ಸಿನಿಮಾ ಮಾಡಿದ್ದಾರೆ. ಬಾಲಿವುಡ್​ನಲ್ಲಿ ಶಾರುಖ್​ ಖಾನ್ ಅವರ ಜವಾನ್ ಸಿನಿಮಾ ನಿರ್ದೇಶನ ಮಾಡಿದ್ದರು. ಈಗ ತೆಲುಗಿನ ಅಲ್ಲು ಅರ್ಜುನ್ ಜೊತೆ ಸಿನಿಮಾ ಮಾಡುತ್ತಿದ್ದಾರೆ.