ಸಪ್ತಪದಿ ತುಳಿದ 'ನೀ ಸಿಗೋವರೆಗೂ' ನಟಿ ಮೆಹ್ರೀನ್ ಪಿರ್ಜಾದಾ

ಮಮತಾ

ಸಪ್ತಪದಿ ತುಳಿದ 'ನೀ ಸಿಗೋವರೆಗೂ' ನಟಿ ಮೆಹ್ರೀನ್ ಪಿರ್ಜಾದಾ

ಟಾಲಿವುಡ್​ ಸಿನಿಮಾಗಳಲ್ಲಿ ನಟನಾ ವೃತ್ತಿ ಕಂಡುಕೊಂಡಿದ್ದ ನಟಿ ಮೆಹ್ರೀನ್ ಪಿರ್ಜಾದಾ ಭಾನುವಾರ ದಾಂಪತ್ಯ ಜೀವನಕ್ಕೆ ಕಾಲಿಟ್ಟದ್ದರೆ. ಅವರ ಬಹುಕಾಲದ ಗೆಳೆಯ ಅರ್ಶ್ ಔಲಾಖ್ ಅವರೊಂದಿಗೆ ಹಿಮಾಚಲ ಪ್ರದೇಶದ ಚೈಲ್ ಎಂಬಲ್ಲಿ ಮದುವೆಯಾಗಿದ್ದಾರೆ.

ಗುಲಾಬಿ ಬಣ್ಣದ ಬಟ್ಟೆಯಲ್ಲಿ ಮಿಂಚಿದ ಮೆಹ್ರೀನ್

ಸಿಖ್ ಸಂಪ್ರದಾಯದಂತೆ 'ಆನಂದ್ ಕಾರಜ್' ವಿಧಿವಿಧಾನಗಳ ಮೂಲಕ ದಂಪತಿಗಳು ಒಂದಾಗಿದ್ದಾರೆ.ವಿವಾಹದ ಸಮಯದಲ್ಲಿ ಮೆಹ್ರೀನ್ ಮತ್ತು ಅರ್ಶ್ ಇಬ್ಬರೂ ತಿಳಿ ಗುಲಾಬಿ ಬಣ್ಣದ ಉಡುಗೆಗಳನ್ನು ತೊಟ್ಟು ಮಿಂಚಿದ್ದಾರೆ.

ಈ ಹಿಂದೆ ನಡೆದಿತ್ತಾ ಎಂಗೇಜ್ಮೆಂಟ್?

ಈ ಹಿಂದೆ ಮೆಹ್ರೀನ್ ಪಿರ್ಜಾದಾ ಹರಿಯಾಣದ ಮಾಜಿ ಮುಖ್ಯಮಂತ್ರಿ ಭಜನ್ ಲಾಲ್ ಮೊಮ್ಮಗನ ಜೊತೆ ಎಂಗೇಜ್ಮೆಂಟ್​ ಮಾಡಿಕೊಂಡಿದ್ದರು. ಆದರೆ, ಆನಂತರ ಕಾರಣಾಂತರಗಳಿಂದ ಮೆಹ್ರೀನ್ ನಿಶ್ಚಿತಾರ್ಥವನ್ನು ರದ್ದುಗೊಳಿಸಿದ್ದರು ಎನ್ನಲಾಗಿದೆ.

ಅರ್ಶ್ ಔಲಾಖ್ ಯಾರು?

ಮೆಹ್ರೀನ್ ಪತಿ ಅರ್ಶ್ ಔಲಾಖ್ ಅವರ ಬಗ್ಗೆ ಹೆಚ್ಚಿನ ಮಾಹಿತಿ ಸಾರ್ವಜನಿಕವಾಗಿ ಲಭ್ಯವಿಲ್ಲ. ಅವರು ತಮ್ಮ ಖಾಸಗಿ ಜೀವನವನ್ನು ಗೌಪ್ಯವಾಗಿಟ್ಟಿದ್ದಾರೆ. ಅವರ ಇನ್‌ಸ್ಟಾಗ್ರಾಮ್ ಪ್ರೊಫೈಲ್ ಪ್ರಕಾರ, ಅವರಿಗೆ ಪ್ರವಾಸ ಮತ್ತು ಕ್ರೀಡೆಗಳಲ್ಲಿ ಹೆಚ್ಚಿನ ಆಸಕ್ತಿ ಇದೆ ಎಂದು ತಿಳಿದುಬಂದಿದೆ.

ಈ ಸಿನಿಮಾ ಮೂಲಕ 'ಹನಿ' ಫೇಮಸ್

ತೆಲುಗಿನ 'F2' ಮತ್ತು 'ಕೃಷ್ಣಗಾಡಿ ವೀರ ಪ್ರೇಮಗಾಧ', ಪಂಥಮ್​, ಕವಚಮ್, ಜವಾನ್​ ಹಾಗೂ 2023 ರಲ್ಲಿ ಮಿಲನ್ ಲುಥ್ರಿಯಾ ನಿರ್ದೇಶನದ ಕ್ರೈಮ್ ಥ್ರಿಲ್ಲರ್ ಸರಣಿ ಸುಲ್ತಾನ್ ಆಫ್ ದೆಹಲಿಯಲ್ಲಿ ​ ನಟಿಸಿದ್ದರು.

ಶಿವಣ್ಣ ಜೊತೆ ನಟನೆ

ಕನ್ನಡದ ಎನರ್ಜಿಟಿಕ್​ ಹೀರೋ ಶಿವರಾಜ್​ ಕುಮಾರ್​ ಅವರೊಂದಿಗೆ ನೀ ಸಿಗೋವರೆಗೂ ಸಿನಿಮಾದಲ್ಲಿ ನಟಿಸಲಿದ್ದಾರೆ ಎನ್ನಲಾಗಿತ್ತು. ಅವರು ಹಲವಾರು ಬಾರಿ ಕರ್ನಾಟಕಕ್ಕೆ ಬಂದು ಇಲ್ಲಿ ಈವೆಂಟ್​ಗಳಲ್ಲಿ ಭಾಗಿಯಾಗಿದ್ದರು. ಶಿವ ಸಿನಿಮಾ ನೋಡಿದ್ದಾಗಿ ಹೇಳಿಕೊಂಡಿದ್ದರು.