ಎವರ್‌ಗ್ರೀನ್ ಬ್ಯೂಟಿ ತ್ರಿಶಾ!

ಭಾನುಪ್ರಿಯ ಡಿ.ಕೆ

ಎವರ್‌ಗ್ರೀನ್ ಬ್ಯೂಟಿ ತ್ರಿಶಾ!

ತ್ರಿಶಾ ಕೃಷ್ಣನ್ ದಕ್ಷಿಣ ಭಾರತದ ಚಿತ್ರರಂಗದ ಅತ್ಯಂತ ಯಶಸ್ವಿ ಮತ್ತು ಬೇಡಿಕೆಯ ನಟಿಯರಲ್ಲಿ ಒಬ್ಬರು. ತಮಿಳು ಮತ್ತು ತೆಲುಗು ಸಿನಿಮಾಗಳಲ್ಲಿ ಸ್ಟಾರ್ ನಟರೊಂದಿಗೆ ನಟಿಸಿ 'ದಕ್ಷಿಣ ಭಾರತದ ಕ್ವೀನ್' ಎಂದೇ ಗುರುತಿಸಿಕೊಂಡಿದ್ದಾರೆ.

ಸಾಂಪ್ರದಾಯಿಕ ಲುಕ್​

ಈ ಚಿತ್ರದಲ್ಲಿ ತ್ರಿಶಾ ಕೃಷ್ಣನ್‌ ಸಾಂಪ್ರದಾಯಿಕ ಕ್ರೀಮ್ ಬಣ್ಣದ ಸೀರೆಯಲ್ಲಿ ಮನಮೋಹಕವಾಗಿ ಕಾಣಿಸಿಕೊಂಡಿದ್ದಾರೆ. ಅಲಂಕೃತ ಬ್ಲೌಸ್‌, ಹಸಿರು ಕಲ್ಲಿನ ಆಭರಣಗಳು ಮತ್ತು ಸಹಜ ನಗುವು ಅವರ ಸೌಂದರ್ಯವನ್ನು ಮತ್ತಷ್ಟು ಹೆಚ್ಚಿಸಿವೆ. ಹಸಿರಿನ ನಿಸರ್ಗದ ಹಿನ್ನೆಲೆ ಹಾಗೂ ಸರಳ ಭಂಗಿ ಚಿತ್ರಕ್ಕೆ ಆಕರ್ಷಕ ಮತ್ತು ಶಾಂತ ವಾತಾವರಣವನ್ನು ನೀಡಿದೆ.

ಸಿನಿಮಾಗಳು

ಮೌನಂ ಪೇಸಿಯದೇ, ಸಾಮಿ, ಗಿಲ್ಲಿ, ಆಯಿರತಿಲ್ ಒರುವನ್, ವಿನ್ನೈತಾಂಡಿ ವರುವಾಯಾ, 96, ಪೊನ್ನಿಯಿನ್ ಸೆಲ್ವನ್ (ಭಾಗ 1 ಮತ್ತು 2), ಲಿಯೋ, ಐಡೆಂಟಿಟಿ ಸೇರಿದಂತೆ ಹಲವು ಯಶಸ್ವಿ ಚಿತ್ರಗಳಲ್ಲಿ ಅಭಿನಯಿಸಿದ್ದಾರೆ.

ಪ್ರಶಸ್ತಿಗಳು

ಫಿಲ್ಮ್‌ಫೇರ್ ಸೌತ್ ಪ್ರಶಸ್ತಿ, ತಮಿಳುನಾಡು ರಾಜ್ಯ ಚಲನಚಿತ್ರ ವಿಶೇಷ ಪ್ರಶಸ್ತಿ, ನಂದಿ ಪ್ರಶಸ್ತಿ, ಎಡಿಸನ್ ಅವಾರ್ಡ್ಸ್, ಸೈಮಾ ಸೇರಿದಂತೆ ಅನೇಕ ಗೌರವಗಳನ್ನು ಮುಡಿಗೇರಿಸಿಕೊಂಡಿದ್ದಾರೆ.

ಮುಂಬರುವ ಸಿನಿಮಾ

ತ್ರಿಶಾ ಅವರ ಮುಂದಿನ ಪ್ರಮುಖ ಚಿತ್ರಗಳಲ್ಲಿ ವಿಶ್ವಂಭರ, ರಾಮ್, ದ್ವಿತ್ವ, ಕರುಪ್ಪು ಮತ್ತು ಸತುರಂಗ ವೆಟ್ಟೈ 2 ಸೇರಿವೆ.