ಚಿಕನ್ ತುಂಬಾ ರುಚಿಕರ ಅನ್ನೋದು ಎಲ್ಲರಿಗೂ ಗೊತ್ತು. ಆದರೆ, ಪ್ರತಿದಿನ ತಿಂದ್ರೆ ಎಷ್ಟು ಡೇಂಜರ್ ಅನ್ನೋದು ಅನೇಕರಿಗೆ ತಿಳಿದಿಲ್ಲ. ಹೌದು ಚಿಕನ್ ತಿನ್ನುವುದರಿಂದ ನಿಮ್ಮ ಆರೋಗ್ಯಕ್ಕೆ ತುಂಬಾನೇ ಹಾನಿಕಾರಕ.
ಇಷ್ಟೆಲ್ಲ ಸಮಸ್ಯೆ ಇದೆ
ಕೊಲೆಸ್ಟ್ರಾಲ್, ತೂಕ, ರಕ್ತದೊತ್ತಡ ಮತ್ತು ಹೃದಯ ಕಾಯಿಲೆಗಳನ್ನು ಹೆಚ್ಚಿಸುತ್ತದೆ. ಅಲ್ಲದೆ, ಮೂತ್ರಪಿಂಡಗಳ ಮೇಲೆ ಒತ್ತಡ, ಜೀರ್ಣಕಾರಿ ಸಮಸ್ಯೆ ಮತ್ತು ಚರ್ಮದ ಸಮಸ್ಯೆಗಳನ್ನು ಉಂಟುಮಾಡಬಹುದು.
ತೂಕ ಹೆಚ್ಚಳ
ನಿಯಮಿತವಾಗಿ ಕೋಳಿ ಮಾಂಸ ತಿನ್ನುವುದರಿಂದ ದೇಹದಲ್ಲಿ ಕೊಲೆಸ್ಟ್ರಾಲ್ ಮಟ್ಟ ಹೆಚ್ಚಾಗಿ, ತೂಕ ಹೆಚ್ಚಾಗುತ್ತದೆ.
ಬೊಜ್ಜು
ಹೆಚ್ಚು ಮಾಂಸಾಹಾರಿ ಆಹಾರವನ್ನು ಸೇವಿಸುವುದರಿಂದ ಬೊಜ್ಜು ಸಮಸ್ಯೆ ಉಂಟಾಗುತ್ತದೆ. ಬೊಜ್ಜು ಬಂದರೆ ವಿವಿಧ ಸಮಸ್ಯೆಗಳು ಶುರುವಾಗುತ್ತದೆ.
ಹೊಟ್ಟೆ ನೋವು
ಪ್ರತಿದಿನ ಚಿಕನ್ ಸೇವಿಸುವುದರಿಂದ ಜೀರ್ಣಕಾರಿ ಸಮಸ್ಯೆಗಳು ಮತ್ತು ಹೊಟ್ಟೆ ನೋವು ಉಂಟಾಗಬಹುದು.
ಹೃದಯ ಕಾಯಿಲೆ
ಚಿಕನ್ನಲ್ಲಿ ಹೆಚ್ಚಿನ ಕೊಬ್ಬಿನಾಂಶ ಇರುವ ಕಾರಣ ಹೃದಯ ಕಾಯಿಲೆಗಳ ಅಪಾಯ ಹೆಚ್ಚಿದೆ. ಹೀಗಾಗಿ ವೈದ್ಯರು ಸೂಚಿಸಿದ ಪ್ರಮಾಣದಲ್ಲಿ ಸೇವಿಸಿ.
ರಕ್ತದೊತ್ತಡ
ಅತಿಯಾಗಿ ಉಪ್ಪು ಮತ್ತು ಮಸಾಲೆಗಳ ಬಳಸಿ ತಯಾರು ಮಾಡುವ ಚಿಕನ್ ಸೇವನೆ ಮಾಡುವುದರಿಂದ ರಕ್ತದೊತ್ತಡ ಹೆಚ್ಚಾಗುತ್ತದೆ.
ಕಿಡ್ನಿ ಮೇಲೆ ಒತ್ತಡ
ಚಿಕನ್ನಲ್ಲಿ ಪ್ರೋಟೀನ್ ಹೆಚ್ಚಾಗಿರುತ್ತದೆ. ಹೀಗಾಗಿ ಅತಿಯಾಗಿ ಪ್ರೋಟಿನ್ ಸೇವಿಸುವುದರಿಂದ ಮೂತ್ರಪಿಂಡಗಳ ಮೇಲೆ ಒತ್ತಡ ಉಂಟಾಗುತ್ತದೆ.
ಮೊಡವೆ
ಹೆಚ್ಚು ಮಾಂಸ ತಿನ್ನುವುದರಿಂದ ಚರ್ಮದಲ್ಲಿ ಹೆಚ್ಚುವರಿ ಎಣ್ಣೆ ಉಂಟಾಗುತ್ತದೆ ಮತ್ತು ಮೊಡವೆಗಳು ಉಂಟಾಗಬಹುದು.
ಕ್ಯಾನ್ಸರ್ ಅಪಾಯ
ಹೆಚ್ಚು ಸಂಸ್ಕರಿಸಿದ ಕೋಳಿ ಮಾಂಸ ಅಥವಾ ಹುರಿದ ಕೋಳಿ ಮಾಂಸ ತಿನ್ನುವುದರಿಂದ ಕ್ಯಾನ್ಸರ್ ಅಪಾಯ ಹೆಚ್ಚಾಗುತ್ತದೆ.
ಗಮನಿಸಿ
ನೀವು ಕೋಳಿ ಮಾಂಸವನ್ನು ಸಂಪೂರ್ಣವಾಗಿ ತ್ಯಜಿಸಬೇಕಾಗಿಲ್ಲ, ಆದರೆ ನೀವು ಅದನ್ನು ಪ್ರತಿದಿನ ತಿನ್ನಬಾರದು.