ಸ್ನಾಯುಗಳನ್ನು ಬಲಗೊಳಿಸಲು ಈ ಆಹಾರ ಸೇವಿಸಿ! Muscles health

Vijayavan

ಸ್ನಾಯುಗಳನ್ನು ಬಲಗೊಳಿಸಲು ಈ ಆಹಾರ ಸೇವಿಸಿ! Muscles health

ಸ್ನಾಯುಗಳನ್ನು ಬಲಗೊಳಿಸಲು ಪ್ರೋಟೀನ್‌ನಿಂದ ತುಂಬಿರುವ ಆಹಾರಗಳು ಅತ್ಯಂತ ಮುಖ್ಯವಾಗಿರುತ್ತದೆ. ಹಾಗಾಗಿ ಪ್ರತಿನಿತ್ಯ ವ್ಯಾಯಾಮಗಳ ಜೊತೆಗೆ ಸರಿಯಾದ ಪ್ರಮಾಣದ ಪ್ರೊಟೀನ್​ ಸೇವಿಸುವುದರಿಂದ ಸ್ನಾಯುಗಳು ಬಲಗೊಳ್ಳುತ್ತವೆ.

ಮೊಟ್ಟೆಗಳು

ಸಂಪೂರ್ಣ ಪ್ರೋಟೀನ್‌ನ ಅತ್ಯುತ್ತಮ ಮೂಲವಾಗಿದೆ. ಒಂದು ಮೊಟ್ಟೆಯಲ್ಲಿ ಸುಮಾರು 6-7g ಪ್ರೋಟೀನ್ ಇರುತ್ತದೆ. ಇದರಲ್ಲಿರುವ ಲ್ಯೂಸಿನ್ ಅಂಶದಿಂದ ಸ್ನಾಯು ಬೆಳವಣಿಗೆಗೆ ಅತ್ಯುತ್ತಮವಾಗಿರುತ್ತದೆ. ಹಾಗಾಗಿ ಇದನ್ನು ಬೇಯಿಸಿ ಅಥವಾ ಆಮ್ಲೆಟ್​ ಮಾಡಿ ಸೇವಿಸಿ.

ಚಿಕನ್ ಬ್ರೆಸ್ಟ್

ಲೀನ್ ಪ್ರೋಟೀನ್‌ನ ರಾಜ ಎಂದು ಕರೆಯಲಾಗುತ್ತದೆ. ಇದರಲ್ಲಿ ಕಡಿಮೆ ಕೊಬ್ಬು, ಹೆಚ್ಚು ಪ್ರೋಟೀನ್ ಇರುವುದರಿಂದ ಇದು ಸ್ನಾಯು ಬೆಳವಣಿಗೆ ಸಹಾಯ ಮಾಡುತ್ತದೆ.

ಪನೀರ್

ಸಸ್ಯಹಾರಿಗಳಿಗೆ ಪನೀರ್​ ಒಂದು ಅತ್ಯತ್ತಮ ಆಹಾರವಾಗಿದೆ. ಇದರಲ್ಲಿ ಕೇಸಿನ್​ ಪ್ರೊಟೀನ್​ ಹೇರಳವಾಗಿದ್ದು, ರಾತ್ರಿಯಲ್ಲಿ ಸ್ನಾಯು ದುರಸ್ತಿಗೆ ಸಹಾಯ ಮಾಡುತ್ತದೆ.

ಮೀನು

ಮೀನುಗಳಲ್ಲಿ ಪ್ರೋಟೀನ್ ಹೆಚ್ಚಾಗಿದ್ದು, ಇದು ಒಮೆಗಾ-3 ಫ್ಯಾಟಿ ಆಸಿಡ್‌ಗಳು ಉರಿಯೂತ ಕಡಿಮೆ ಮಾಡಿ, ಚೇತರಿಕೆಗೆ ಸಹಾಯ ಮಾಡುತ್ತವೆ. ವಾರಕ್ಕೆ 2-3 ಬಾರಿ ಸೇವಿಸಿ ಸ್ನಾಯು ಬಲ ಮತ್ತು ಶಕ್ತಿ ಹೆಚ್ಚಿಸುತ್ತದೆ.

ಬೀನ್ಸ್​

ಸಸ್ಯಹಾರಿಗಳಿಗೆ ಇದು ಅತ್ಯತ್ತಮ ಆಹಾರವಾಗಿದೆ. ಇದರಲ್ಲಿ ಹೇರಳವಾದ ಪ್ರೊಟೀನ್​ ಇರುವುದರಿಂದ ಇದು ಸ್ನಾಯುಗಳಿಗೆ ಶಕ್ತಿಯನ್ನು ನೀಡುತ್ತದೆ.