ಕಣ್ಣಿನ ಆರೋಗ್ಯವನ್ನು ಕಾಪಾಡಲು ವಿಟಮಿನ್ A, C, E, ಲುಟೀನ್, ಜೀಯಾಕ್ಸಾಂಥಿನ್, ಒಮೆಗಾ-3 ಮತ್ತು ಆಂಟಿಆಕ್ಸಿಡೆಂಟ್‌ಗಳು ಬಹಳ ಮುಖ್ಯವಾಗಿರುತ್ತದೆ. ಈ ಪೋಷಕಾಂಶಗಳು ಕಣ್ಣಿನ ರೋಗಗಳಾದ ಮ್ಯಾಕ್ಯುಲರ್ ಡಿಜೆನರೇಷನ್, ಕ್ಯಾಟರ್ಯಾಕ್ಟ್ ಆಗುವುದನ್ನು ತಡೆಯುತ್ತದೆ.
ಕ್ಯಾರೆಟ್
ಇದು ಬೀಟಾ-ಕ್ಯಾರೋಟೀನ್‌ನಿಂದ ಸಮೃದ್ಧವಾಗಿದ್ದು, ಇದು ವಿಟಮಿನ್ A ಆಗಿ ಪರಿವರ್ತನೆಯಾಗುತ್ತದೆ. ಇದನ್ನು ಆಹಾರದಲ್ಲಿ ಅಥವಾ ಹಸಿಯಾಗಿ ಸೇವಿಸುವುದರಿಂದ ರಾತ್ರಿ ದೃಷ್ಟಿ ಮತ್ತು ಕಾರ್ನಿಯಾ ರಕ್ಷಣೆಗೆ ಸಹಾಯ ಮಾಡುತ್ತದೆ.
ಹಸಿರು ಎಲೆ ತರಕಾರಿಗಳು
ಇದರಲ್ಲಿ ಲುಟೀನ್ ಮತ್ತು ಜೀಯಾಕ್ಸಾಂಥಿನ್‌ನಂತಹ ಪೋಷಕಾಂಶಗಳು ಇರುವುದರಿಂದ ಇದು ಮ್ಯಾಕ್ಯುಲಾ ರಕ್ಷಣೆ ಮಾಡಿ ಹಾನಿಕಾರಕ ನೀಲಿ ಬೆಳಕನ್ನು ಫಿಲ್ಟರ್ ಮಾಡುತ್ತದೆ.
ಕೊಬ್ಬಿನ ಮೀನು
ಒಮೆಗಾ-3 ಫ್ಯಾಟಿ ಆಸಿಡ್‌ಗಳು ಒಣ ಕಣ್ಣುಗಳನ್ನು ತಡೆಗಟ್ಟಿ ರೆಟಿನಾ ಆರೋಗ್ಯ ಕಾಪಾಡುತ್ತದೆ. ಇದರಿಂದ ಕಣ್ಣು ಮಂಜಾಗುವುದು, ದೃಷ್ಟಿ ಮಂಕಾಗುವುದು ಕಡಿಮೆಯಾಗುತ್ತದೆ.
ಬಾದಾಮಿ ಮತ್ತು ಇತರ ನಟ್ಸ್
ವಿಟಮಿನ್ E ಆಂಟಿಆಕ್ಸಿಡೆಂಟ್‌ಗಳು ತುಂಬಿದ್ದು, ಇದು ಕಣ್ಣಿನ ಕೋಶಗಳನ್ನು ಫ್ರೀ ರ್ಯಾಡಿಕಲ್‌ಗಳಿಂದ ರಕ್ಷಿಸಿ, ಕಣ್ಣುಗಳು ಆರೋಗ್ಯವಾಗಿರುವಂತೆ ನೋಡಿಕೊಳ್ಳುತ್ತದೆ.
ಸಿಟ್ರಸ್ ಹಣ್ಣುಗಳು
ಕಿತ್ತಳೆ, ಮೂಸಂಬಿ, ನಿಂಬೆ ಹಣ್ಣುಗಳಲ್ಲಿ ವಿಟಮಿನ್ ಸಿ ಹೇರಳವಾಗಿರುವುದರಿಂದ ಇವುಗಳನ್ನು ಆಹಾರದಲ್ಲಿ ಸೇರಿಸಿ ತಿನ್ನುವುದರಿಂದ ಕ್ಯಾಟರ್ಯಾಕ್ಟ್ ಅಪಾಯ ಕಡಿಮೆ ಮಾಡಿ ರಕ್ತನಾಳಗಳನ್ನು ಬಲಪಡಿಸುತ್ತದೆ.