ಕಿಡ್ನಿ ವೈಫಲ್ಯದಿಂದ ಪಾರಾಗಲು ಈ ಐದು ಹಣ್ಣುಗಳನ್ನು ತಪ್ಪದೆ ಸೇವಿಸಿ
ವಿನಾಯಕ ನಾಯಕ
ಕಿಡ್ನಿ ವೈಫಲ್ಯದಿಂದ ಪಾರಾಗಲು ಈ ಐದು ಹಣ್ಣುಗಳನ್ನು ತಪ್ಪದೆ ಸೇವಿಸಿ
ಮೂತ್ರಪಿಂಡಗಳ ಆರೋಗ್ಯವನ್ನು ಕಾಪಾಡಿಕೊಳ್ಳುವುದು ದೀರ್ಘಾಯುಷ್ಯಕ್ಕೆ ಬಹಳ ಮುಖ್ಯ. ನಾವು ಸೇವಿಸುವ ಆಹಾರ ನಮ್ಮ ಕಿಡ್ನಿಗಳ ಕಾರ್ಯಕ್ಷಮತೆಯ ಮೇಲೆ ನೇರ ಪರಿಣಾಮ ಬೀರುತ್ತದೆ.
ಕೆಂಪು ದ್ರಾಕ್ಷಿ
ಕೆಂಪು ದ್ರಾಕ್ಷಿಯಲ್ಲಿ ಫ್ಲೇವನಾಯ್ಡ್‌ಗಳು ಅಧಿಕವಾಗಿವೆ, ಇದು ಕಿಡ್ನಿಯಲ್ಲಿ ಉಂಟಾಗುವ ಉರಿಯೂತವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ.
ಸೇಬು
ದಿನಕ್ಕೊಂದು ಸೇಬು ತಿನ್ನಿ, ವೈದ್ಯರಿಂದ ದೂರವಿರಿ ಎಂಬ ಮಾತು ಕಿಡ್ನಿಗೂ ಅನ್ವಯಿಸುತ್ತದೆ. ಸೇಬಿನಲ್ಲಿ ಪೆಕ್ಟಿನ್ ಎಂಬ ನಾರಿನಂಶವಿದ್ದು, ಇದು ರಕ್ತದಲ್ಲಿನ ಕೊಲೆಸ್ಟ್ರಾಲ್ ಮತ್ತು ಸಕ್ಕರೆಯ ಮಟ್ಟವನ್ನು ಕಡಿಮೆ ಮಾಡುತ್ತದೆ.
ಸ್ಟ್ರಾಬೆರಿ ಮತ್ತು ಬ್ಲೂಬೆರಿ
ಬೆರಿ ಹಣ್ಣುಗಳಲ್ಲಿ ಆಂಟಿ-ಆಕ್ಸಿಡೆಂಟ್‌ಗಳು ಸಮೃದ್ಧವಾಗಿವೆ. ಇವು ದೇಹದಲ್ಲಿರುವ ವಿಷಕಾರಿ ಅಂಶಗಳನ್ನು ಹೊರಹಾಕಲು ಮತ್ತು ಕಿಡ್ನಿ ಕೋಶಗಳ ಆರೋಗ್ಯವನ್ನು ವೃದ್ಧಿಸಲು ಸಹಕಾರಿ.
ಅನಾನಸ್
ಕಿಡ್ನಿ ಸಮಸ್ಯೆ ಇರುವವರಿಗೆ ಬಾಳೆಹಣ್ಣು ಅಥವಾ ಕಿತ್ತಳೆ ಹಣ್ಣುಗಳಿಗಿಂತ ಅನಾನಸ್ ಉತ್ತಮ ಆಯ್ಕೆ. ಏಕೆಂದರೆ ಇದರಲ್ಲಿ ಪೊಟ್ಯಾಸಿಯಮ್ ಕಡಿಮೆ ಇರುತ್ತದೆ. ಇದರಲ್ಲಿರುವ ಬ್ರೋಮೆಲೈನ್ ಎಂಬ ಕಿಣ್ವವು ಕಿಡ್ನಿ ಕಲ್ಲುಗಳನ್ನು ತಡೆಯಲು ಮತ್ತು ಉರಿಯೂತ ಕಡಿಮೆ ಮಾಡಲು ಸಹಾಯ ಮಾಡುತ್ತದೆ.
ಪಪ್ಪಾಯಿ
ಪಪ್ಪಾಯಿ ಹಣ್ಣು ದೇಹದ ಜೀರ್ಣಕ್ರಿಯೆಯನ್ನು ಸುಧಾರಿಸುವುದಲ್ಲದೆ, ಕಿಡ್ನಿಯ ಕಾರ್ಯಕ್ಷಮತೆಯನ್ನು ಹೆಚ್ಚಿಸುತ್ತದೆ. ಇದರಲ್ಲಿರುವ ವಿಟಮಿನ್ ಸಿ ಮತ್ತು ಆಂಟಿ-ಆಕ್ಸಿಡೆಂಟ್‌ಗಳು ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸಿ ಕಿಡ್ನಿ ಸೋಂಕಿನಿಂದ ರಕ್ಷಿಸುತ್ತವೆ.