ಹೃದಯ ಸಂಬಂಧಿ ಕಾಯಿಲೆಗಳಿಂದ ಪಾರಾಗಲು ಈ ಐದು ಹಣ್ಣುಗಳನ್ನು ತಪ್ಪದೆ ಸೇವಿಸಿ

ವಿನಾಯಕ ನಾಯಕ

ಹೃದಯ ಸಂಬಂಧಿ ಕಾಯಿಲೆಗಳಿಂದ ಪಾರಾಗಲು ಈ ಐದು ಹಣ್ಣುಗಳನ್ನು ತಪ್ಪದೆ ಸೇವಿಸಿ

ಹೃದಯದ ಆರೋಗ್ಯವನ್ನು ಕಾಪಾಡಿಕೊಳ್ಳಲು ನಮ್ಮ ಆಹಾರ ಪದ್ಧತಿ ಮುಖ್ಯವಾಗಿದೆ. ಇತ್ತೀಚಿನ ದಿನಗಳಲ್ಲಿ ಹೆಚ್ಚುತ್ತಿರುವ ಹೃದಯಾಘಾತದಂತಹ ಅಪಾಯಗಳಿಂದ ದೂರವಿರಲು ಪ್ರಕೃತಿ ನೀಡಿರುವ ಕೆಲವು ಹಣ್ಣುಗಳು ರಾಮಬಾಣದಂತೆ ಕೆಲಸ ಮಾಡುತ್ತವೆ.

ಸೇಬು

ಸೇಬು ರಕ್ತದಲ್ಲಿನ ಕೆಟ್ಟ ಕೊಲೆಸ್ಟ್ರಾಲ್ ಮಟ್ಟವನ್ನು ಕಡಿಮೆ ಮಾಡುತ್ತದೆ. ಇದರಲ್ಲಿರುವ ಆಂಟಿ-ಆಕ್ಸಿಡೆಂಟ್‌ಗಳು ರಕ್ತದೊತ್ತಡವನ್ನು ನಿಯಂತ್ರಣದಲ್ಲಿಡಲು ಸಹಾಯ ಮಾಡುತ್ತವೆ.

ದಾಳಿಂಬೆ

ದಾಳಿಂಬೆ ರಸವು ರಕ್ತನಾಳಗಳು ಗಟ್ಟಿಯಾಗುವುದನ್ನು ತಡೆಯುತ್ತದೆ ಮತ್ತು ಇಡೀ ದೇಹಕ್ಕೆ ರಕ್ತ ಪರಿಚಲನೆ ಸುಗಮವಾಗಿ ನಡೆಯುವಂತೆ ನೋಡಿಕೊಳ್ಳುತ್ತದೆ.

ಬಾಳೆಹಣ್ಣು

ದೇಹದಲ್ಲಿ ಉಪ್ಪಿನ (ಸೋಡಿಯಂ) ಪ್ರಮಾಣ ಹೆಚ್ಚಾದಾಗ ರಕ್ತದೊತ್ತಡ ಏರುತ್ತದೆ. ಬಾಳೆಹಣ್ಣಿನಲ್ಲಿರುವ ಪೊಟ್ಯಾಸಿಯಮ್ ಬಿಪಿಯನ್ನು ನಿಯಂತ್ರಿಸಿ, ಹಾರ್ಟ್ ಅಟ್ಯಾಕ್ ಆಗುವ ಅಪಾಯವನ್ನು ಗಣನೀಯವಾಗಿ ಕಡಿಮೆ ಮಾಡುತ್ತದೆ.

ಬೆರ್ರಿ ಹಣ್ಣುಗಳು

ಇವು ರಕ್ತನಾಳಗಳಲ್ಲಿ ಉರಿಯೂತವನ್ನು ಕಡಿಮೆ ಮಾಡುತ್ತವೆ. ರಕ್ತ ಹೆಪ್ಪುಗಟ್ಟದಂತೆ ತಡೆದು, ಹೃದಯದ ಸ್ನಾಯುಗಳು ಬಲಗೊಳ್ಳುವಂತೆ ಮಾಡುತ್ತವೆ.

ಪಪ್ಪಾಯಿ

ಕೊಲೆಸ್ಟ್ರಾಲ್ ಆಕ್ಸಿಡೀಕರಣಗೊಳ್ಳುವುದನ್ನು ಪಪ್ಪಾಯಿ ತಡೆಯುತ್ತದೆ. ರಕ್ತನಾಳಗಳಲ್ಲಿ ಕೊಬ್ಬು ಶೇಖರಣೆಯಾಗದಂತೆ ತಡೆದು, ಪಾರ್ಶ್ವವಾಯು ಮತ್ತು ಹೃದಯಾಘಾತದ ಅಪಾಯದಿಂದ ರಕ್ಷಿಸುತ್ತದೆ.