ಬೇಸಿಗೆಯಲ್ಲಿ ಈ 5 ತರಕಾರಿಗಳನ್ನು ತಪ್ಪದೆ ಸೇವಿಸಿ

ವಿನಾಯಕ ನಾಯಕ

ಬೇಸಿಗೆಯಲ್ಲಿ ಈ 5 ತರಕಾರಿಗಳನ್ನು ತಪ್ಪದೆ ಸೇವಿಸಿ

ಬೇಸಿಗೆಯ ತೀವ್ರ ಶಾಖದಿಂದ ದೇಹವನ್ನು ರಕ್ಷಿಸಲು ಮತ್ತು ಹೈಡ್ರೇಟ್ ಆಗಿರಲು ಪೌಷ್ಟಿಕಾಂಶಯುಕ್ತ ಆಹಾರ ಸೇವನೆ ಅಗತ್ಯ. ನೀರಿನಂಶ ಹೆಚ್ಚಿರುವ ಸೌತೆಕಾಯಿ, ಸೊರೆಕಾಯಿ, ಹೀರೆಕಾಯಿ, ಕುಂಬಳಕಾಯಿ ಮತ್ತು ಹಸಿರು ಎಲೆ ತರಕಾರಿಗಳು ದೇಹವನ್ನು ತಂಪಾಗಿಸಿ ಜೀರ್ಣಕ್ರಿಯೆಯನ್ನು ಸುಗಮಗೊಳಿಸುತ್ತವೆ.

ಸೌತೆಕಾಯಿ (Cucumber)

ಸೌತೆಕಾಯಲ್ಲಿ 95% ರಷ್ಟು ನೀರಿನಂಶವಿದ್ದು, ದೇಹದ ಉಷ್ಣತೆಯನ್ನು ಕಡಿಮೆ ಮಾಡುತ್ತದೆ ಮತ್ತು ಚರ್ಮಕ್ಕೆ ಹೊಳಪನ್ನು ನೀಡುತ್ತದೆ.

ಸೊರೆಕಾಯಿ (Bottle Gourd)

ಸೊರೆಕಾಯಿ ಜೀರ್ಣಕ್ರಿಯೆಗೆ ತುಂಬಾ ಒಳ್ಳೆಯದು. ಇದರಲ್ಲಿ ವಿಟಮಿನ್ ಸಿ ಮತ್ತು ಬಿ ಇದ್ದು, ಹೊಟ್ಟೆಯನ್ನು ತಂಪಾಗಿರಿಸುತ್ತದೆ.

ಹೀರೆಕಾಯಿ (Ridge Gourd)

ಹೀರೆಕಾಯಿ ರಕ್ತವನ್ನು ಶುದ್ಧೀಕರಿಸಲು ಮತ್ತು ಲಿವರ್ ಆರೋಗ್ಯಕ್ಕೆ ಇದು ಪೂರಕ. ಇದರಲ್ಲಿ ನಾರಿನಂಶ (Fiber) ಸಮೃದ್ಧವಾಗಿದೆ

ಕುಂಬಳಕಾಯಿ (Pumpkin)

ಕುಂಬಳಕಾಯಿ ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ ಮತ್ತು ಕಣ್ಣಿನ ಆರೋಗ್ಯಕ್ಕೆ ತುಂಬಾ ಒಳ್ಳೆಯದು.

ಹಸಿರು ತರಕಾರಿಗಳು (Green Leafy Veggies)

ಪಾಲಕ್ ಅಥವಾ ದಂಟಿನ ಸೊಪ್ಪಿನಲ್ಲಿ ನೀರಿನಂಶ ಮತ್ತು ಕಬ್ಬಿಣದಂಶ ಹೆಚ್ಚಿರುತ್ತದೆ, ಇದು ಸುಸ್ತನ್ನು ಕಡಿಮೆ ಮಾಡುತ್ತದೆ.