ಆರೋಗ್ಯಕರವಾಗಿ ತೂಕ ಹೆಚ್ಚಿಸಿಕೊಳ್ಳಲು ಪೌಷ್ಟಿಕಾಂಶಯುಕ್ತ ಆಹಾರ ಅಗತ್ಯ. ಹಣ್ಣುಗಳಲ್ಲಿ ನೈಸರ್ಗಿಕ ಸಕ್ಕರೆ, ಕಾರ್ಬೋಹೈಡ್ರೇಟ್ಸ್ ಮತ್ತು ಕ್ಯಾಲೊರಿಗಳು ಸಮೃದ್ಧವಾಗಿದ್ದು, ಇವು ಮಾಂಸಖಂಡಗಳನ್ನು ಸದೃಢಗೊಳಿಸಲು ಸಹಾಯ ಮಾಡುತ್ತವೆ.
ಬಾಳೆಹಣ್ಣು (Banana)
ತೂಕ ಹೆಚ್ಚಿಸಿಕೊಳ್ಳಲು ಬಾಳೆಹಣ್ಣು ಎಲ್ಲಕ್ಕಿಂತ ಮೊದಲ ಆಯ್ಕೆ. ಇದರಲ್ಲಿ ಕಾರ್ಬೋಹೈಡ್ರೇಟ್ಸ್ ಮತ್ತು ಕ್ಯಾಲೊರಿಗಳು ಯಥೇಚ್ಛವಾಗಿರುತ್ತವೆ. ಒಂದು ಮಧ್ಯಮ ಗಾತ್ರದ ಬಾಳೆಹಣ್ಣಿನಲ್ಲಿ ಸುಮಾರು 105 ಕ್ಯಾಲೊರಿಗಳು ಇರುತ್ತವೆ.
ಮಾವಿನಹಣ್ಣು (Mango)
ಹಣ್ಣುಗಳ ರಾಜ ಮಾವಿನಹಣ್ಣು ಕೇವಲ ರುಚಿಯಷ್ಟೇ ಅಲ್ಲ, ತೂಕ ಹೆಚ್ಚಿಸಲೂ ಸಹಕಾರಿ. ಇದರಲ್ಲಿ ಪ್ರೊಟೀನ್, ಕಾರ್ಬೋಹೈಡ್ರೇಟ್ಸ್ ಮತ್ತು ಹೆಚ್ಚಿನ ಕ್ಯಾಲೊರಿ ಇರುತ್ತದೆ. ಒಂದು ಕಪ್ ಮಾವಿನಹಣ್ಣಿನಲ್ಲಿ ಸುಮಾರು 99 ಕ್ಯಾಲೊರಿಗಳು ಸಿಗುತ್ತವೆ.
ಸಪೋಟ (Chikoo)
ಸಪೋಟ ಹಣ್ಣಿನಲ್ಲಿ ನೈಸರ್ಗಿಕ ಸಕ್ಕರೆ ಅಧಿಕವಾಗಿರುತ್ತದೆ. ಇದು ದೇಹಕ್ಕೆ ತಕ್ಷಣದ ಶಕ್ತಿಯನ್ನು ನೀಡುತ್ತದೆ ಮತ್ತು ಆರೋಗ್ಯಕರವಾಗಿ ತೂಕವನ್ನು ಹೆಚ್ಚಿಸಲು ಸಹಾಯ ಮಾಡುತ್ತದೆ.
ಹಲಸಿನಹಣ್ಣು (Jackfruit)
ಹಲಸಿನಹಣ್ಣಿನಲ್ಲಿ ಹೆಚ್ಚಿನ ಪ್ರಮಾಣದ ಕ್ಯಾಲೊರಿಗಳು ಮತ್ತು ಕಾರ್ಬೋಹೈಡ್ರೇಟ್‌ಗಳು ಇರುತ್ತವೆ. ಇದರಲ್ಲಿರುವ ವಿಟಮಿನ್ ಬಿ ಮತ್ತು ಸಿ ದೇಹದ ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುವುದರ ಜೊತೆಗೆ, ದೇಹಕ್ಕೆ ಮಾಂಸಖಂಡಗಳನ್ನು ನೀಡಲು ಸಹಾಯ ಮಾಡುತ್ತದೆ.
ಒಣ ಹಣ್ಣುಗಳು (Dry Fruits)
ತಾಜಾ ಹಣ್ಣುಗಳಿಗಿಂತ ಒಣ ಹಣ್ಣುಗಳಲ್ಲಿ (Dry Fruits) ನೀರಿನಂಶ ಕಡಿಮೆ ಇರುವುದರಿಂದ ಕ್ಯಾಲೊರಿಗಳ ಸಾಂದ್ರತೆ ಹೆಚ್ಚಿರುತ್ತದೆ. ಖರ್ಜೂರ ಮತ್ತು ಒಣದ್ರಾಕ್ಷಿ ತೂಕ ಹೆಚ್ಚಿಸಲು ರಾಮಬಾಣ ಎಂದು ಹೇಳಲಾಗುತ್ತದೆ.