ದಪ್ಪ ಹಾಗೂ ಉದ್ದವಾದ ಕೂದಲನ್ನು ಹೊಂದಲು ಈ ಆಹಾರಗಳನ್ನು ಸೇವಿಸಿ! Hair growth
ಭಾನುಪ್ರಿಯ ಡಿ.ಕೆ
ದಪ್ಪ ಹಾಗೂ ಉದ್ದವಾದ ಕೂದಲನ್ನು ಹೊಂದಲು ಈ ಆಹಾರಗಳನ್ನು ಸೇವಿಸಿ! Hair growth
Hair growth: ಉದ್ದ ಮತ್ತು ಕಪ್ಪು ಕೂದಲು ಯಾರಿಗೆ ತಾನೇ ಬೇಡ ಹೇಳಿ! ಪ್ರತಿಯೊಬ್ಬ ಹುಡುಗಿಯೂ ತನ್ನ ಸೊಂಟದವರೆಗೂ ಉದ್ದ ಕೂದಲು ಇರಬೇಕೆಂದು ಬಯಸುತ್ತಾರೆ.
ನೆನೆಸಿದ ಬಾದಾಮಿ
ರಾತ್ರಿಯಿಡೀ ನೆನಸಿಟ್ಟ ಬಾದಾಮಿಯನ್ನು ಸೇವಿಸುವುದರಿಂದ ದೇಹಕ್ಕೆ ಮಾತ್ರವಲ್ಲದೇ, ಕೂದಲಿಗೂ ಪ್ರಯೋಜನ ಎಂದು ತಿಳಿದುಬಂದಿದೆ. ಇದು ಬಯೋಟಿನ್ ಮತ್ತು ವಿಟಮಿನ್ ಇ ಗಳಿಂದ ಸಮೃದ್ಧಿಯಾಗಿದ್ದು, ಕೂದಲನ್ನು ಬಲಶಾಲಿಯಾಗಿರುವಂತೆ ತಡೆಯುತ್ತದೆ.
ಅರಿಶಿಣ
ಅರಿಶಿಣವನ್ನು ನೈಸರ್ಗಿಕವಾದ ಔಷಧಿ ಎಂದು ಕರೆಯುತ್ತಾರೆ. ಇದು ಚರ್ಮಕ್ಕೆ ಮಾತ್ರವಲ್ಲದೇ, ಕೂದಲಿನ ಆರೋಗ್ಯಕ್ಕೂ ಮುಖ್ಯ ಎಂದು ಕರೆಯಲಾಗಿದೆ. ಇದರ ನಿಯಮಿತ ಸೇವನೆಯು ನೆತ್ತಿಯನ್ನು ನಿರ್ವಿಷಗೊಳಿಸಿ ಕೂದಲನ್ನು ಬಲಪಡಿಸುತ್ತದೆ.
ಮೆಂತ್ಯ ಬೀಜಗಳು
ಮೆಂತ್ಯೆ ಬೀಜಗಳನ್ನು ರಾತ್ರಿಯಿಡೀ ನೆನಸಿಟ್ಟು ತಿನ್ನುವುದರಿಂದ ತಲೆಹೊಟ್ಟನ್ನು ನಿಯಂತ್ರಿಸಲು ಸಹಾಯ ಮಾಡುತ್ತದೆ. ಇದರಲ್ಲಿರುವ ಪ್ರೊಟೀನ್ ಹಾಗೂ ಪೋಷಕಾಂಶಗಳು ಕೂದಲಿನ ಬೆಳವಣಿಗೆಗೆ ಸಹಾಯ ಮಾಡುತ್ತದೆ.
ನಿಂಬೆ ನೀರು
ನಿಂಬೆಹಣ್ಣಿನಿಂದ ಹಲವಾರು ಪ್ರಯೋಜನಗಳನ್ನು ಪಡೆಯಬಹುದು ಎಂದು ತಿಳಿದುಬಂದಿದೆ. ಇದು ಕೂದಲು ಮತ್ತು ಚರ್ಮದ ಆರೋಗ್ಯದಲ್ಲಿ ಉತ್ತಮ ಕೆಲಸವನ್ನು ಮಾಡುತ್ತದೆ.
ಕರಿಬೇವು
ಕರಿಬೇವು ಎಲೆಗಳನ್ನು ಆಹಾರದ ರುಚಿಯನ್ನು ಹೆಚ್ಚಿಸಲು ಮಾತ್ರವಲ್ಲದೇ, ಕೂದಲಿಗೆ ಸಹ ತುಂಬಾ ಪ್ರಯೋಜನಕಾರಿ ಎಂದು ತಿಳಿದುಬಂದಿದೆ. ಪ್ರತಿದಿನ ಬೆಳಿಗ್ಗೆ ಖಾಲಿ ಹೊಟ್ಟೆಯಲ್ಲಿ 15-20 ಕರಿಬೇವು ಎಲೆಗಳನ್ನು ಅಗಿದು ತಿನ್ನುವುದರಿಂದ ಕೂದಲಿನ ಬೆಳವಣಿಗೆಗೆ ಸಹಾಯವಾಗುತ್ತದೆ.