ಮೊಬೈಲ್ ಬಳಕೆಯನ್ನು ಕಡಿಮೆ ಮಾಡಲು ಸುಲಭ ಉಪಾಯಗಳು

ಸವಿನಾ ನಾಯ್ಕ

ಮೊಬೈಲ್ ಬಳಕೆಯನ್ನು ಕಡಿಮೆ ಮಾಡಲು ಸುಲಭ ಉಪಾಯಗಳು

ಇಂದಿನ ಡಿಜಿಟಲ್ ಯುಗದಲ್ಲಿ ಸ್ಮಾರ್ಟ್‌ಫೋನ್ ನಮ್ಮ ಜೀವನದ ಅವಿಭಾಜ್ಯ ಅಂಗವಾಗಿದೆ. ಆದರೆ ಅತಿಯಾದರೆ ಅಮೃತವೂ ವಿಷ ಎಂಬಂತೆ ಮೊಬೈಲ್‌ನ ಅತಿಯಾದ ಬಳಕೆ ನಮ್ಮ ದೈಹಿಕ ಮತ್ತು ಮಾನಸಿಕ ಆರೋಗ್ಯದ ಮೇಲೆ ಗಂಭೀರ ಪರಿಣಾಮ ಬೀರಬಹುದು.

ನೋಟಿಫಿಕೇಶನ್ ಆಫ್ ಮಾಡಿ

ಅನಗತ್ಯ ಆಪ್‌ಗಳ ನೋಟಿಫಿಕೇಶನ್ ಆಫ್ ಮಾಡುವುದರಿಂದ ಪದೇ ಪದೇ ಫೋನ್ ನೋಡುವ ಅಭ್ಯಾಸ ತಪ್ಪುತ್ತದೆ.

ಮೊಬೈಲ್ ಬಳಸುವುದಿಲ್ಲ ಎಂದು ನಿರ್ಧರಿಸಿ

ಊಟದ ಮೇಜು ಮತ್ತು ಬೆಡ್‌ರೂಮ್‌ನಲ್ಲಿ ಮೊಬೈಲ್ ಬಳಸುವುದಿಲ್ಲ ಎಂದು ನಿರ್ಧರಿಸಿ.

ಸ್ಕ್ರೀನ್ ಟೈಮ್ ಲಿಮಿಟ್

ನಿಮ್ಮ ಫೋನ್‌ನಲ್ಲಿರುವ 'Digital Wellbeing' ಫೀಚರ್ ಬಳಸಿ ಪ್ರತಿಯೊಂದು ಆಪ್‌ಗೆ ಸಮಯದ ಮಿತಿ ನಿಗದಿಪಡಿಸಿ.

ಒಳ್ಳೆಯ ಹವ್ಯಾಸ ಬೆಳೆಸಿಕೊಳ್ಳಿ

ಬಿಡುವಿನ ವೇಳೆಯಲ್ಲಿ ಫೋನ್ ನೋಡುವ ಬದಲು ಪುಸ್ತಕ ಓದುವುದು, ಗಿಡಗಳಿಗೆ ನೀರು ಹಾಕುವುದು ಅಥವಾ ವಾಕಿಂಗ್ ಹೋಗುವ ಅಭ್ಯಾಸ ಮಾಡಿ.

ಫೋನ್ ಆಕರ್ಷಣೆ ಕಡಿಮೆ ಮಾಡಿ

ಫೋನ್ ಡಿಸ್‌ಪ್ಲೇಯನ್ನು ಬಣ್ಣರಹಿತ (ಕಪ್ಪು-ಬಿಳುಪು) ಮಾಡುವುದರಿಂದ ಫೋನ್ ಆಕರ್ಷಣೆ ಕಡಿಮೆಯಾಗಿ ಬಳಕೆ ತಾನಾಗಿಯೇ ತಗ್ಗುತ್ತದೆ.