ಇಂದಿನ ದಿನಗಳಲ್ಲಿ ಬಲವಾದ ಸ್ನಾಯುಗಳನ್ನು ಹೊಂದಲು ಎಲ್ಲರೂ ಇಷ್ಟಪಡುತ್ತಾರೆ. ಆದರೆ, ಆರೋಗ್ಯದಲ್ಲಿ ಏರುಪೇರು, ಬಲಹೀನತೆಗಳು ಇದಕ್ಕೆ ಸಹಾಯ ಮಾಡುವುದಿಲ್ಲ. ಹಾಗಾಗಿ ಈ ವ್ಯಾಯಾಮಗಳನ್ನು ಅಭ್ಯಾಸ ಮಾಡುವುದರಿಂದ ಬಲವಾದ ಕಾಲುಗಳನ್ನು ಪಡೆಯಬಹುದು.
ಸ್ಕ್ವಾಟ್ಸ್ ವ್ಯಾಯಾಮ
ನಿಂತುಕೊಂಡು ಕಾಲುಗಳನ್ನು ಭುಜದ ಅಗಲಕ್ಕೆ ತೆರೆದು, ಕುಳಿತುಕೊಳ್ಳುವಂತೆ ಕೆಳಗೆ ಇಳಿದು ಮತ್ತೆ ಎದ್ದೇಳಿ. ದಿನಕ್ಕೆ 3 ಬಾರಿ 10-15 ಸಲ ಮಾಡುವುದರಿಂದ ತೊಡೆ ಮತ್ತು ಹಿಂಭಾಗದ ಸ್ನಾಯುಗಳನ್ನು ಬಲಪಡಿಸುತ್ತದೆ.
ಲಂಜಸ್ ವ್ಯಾಯಾಮ
ಒಂದು ಕಾಲನ್ನು ಮುಂದೆ ಇಟ್ಟು ಕೆಳಗೆ ಇಳಿದು, ಮತ್ತೊಂದು ಕಾಲು ಹಿಂದೆ ಇಡಿ. ಪ್ರತಿ ಕಾಲಿಗೆ 10-12 ಬಾರಿ ಮಾಡಿ. ಇದು ಸಮತೋಲನ ಕಾಪಾಡುವುದರ ಜೊತೆಗೆ ತೊಡೆ ಸ್ನಾಯುಗಳಿಗೆ ಬಲ ನೀಡುತ್ತದೆ.
ಕ್ಯಾಲ್ಫ್ ರೇಸಸ್ ವ್ಯಾಯಾಮ
ನೆಲದ ಮೇಲೆ ನಿಂತುಕೊಂಡು ಹಿಮ್ಮಡಿಗಳ ಮೇಲೆ ಎದ್ದು ಕೆಳಗಿಳಿಯಿರಿ. ದಿನಕ್ಕೆ 15-20 ಬಾರಿ ಮಾಡುವುದರಿಂದ ಇದು ಕಾಲಿನ ಕೆಳಭಾಗದ ಸ್ನಾಯುಗಳನ್ನು ಬಲಪಡಿಸುತ್ತದೆ.
ಗ್ಲೂಟ್ ಬ್ರಿಡ್ಜ್ ವ್ಯಾಯಾಮ
ಬೆನ್ನುಮೇಲೆ ಮಲಗಿ, ಕಾಲುಗಳನ್ನು ಬಗ್ಗಿಸಿ, ಸೊಂಟವನ್ನು ಮೇಲೆತ್ತಿ ಕೆಳಗಿಳಿಯಿರಿ. ದಿನಕ್ಕೆ 10-15 ಬಾರಿ ಮಾಡುವುದರಿಂದ ಇದು ಹಿಂಭಾಗ ಮತ್ತು ಹ್ಯಾಮ್‌ಸ್ಟ್ರಿಂಗ್‌ಗೆ ಒಳ್ಳೆಯದು.
ವಾಲ್ ಸಿಟ್ ವ್ಯಾಯಾಮ
ಗೋಡೆಗೆ ಒರಗಿ ಕುಳಿತುಕೊಳ್ಳುವಂತೆ ಇದ್ದು 30-60 ಸೆಕೆಂಡ್ ಹಿಡಿದಿಟ್ಟುಕೊಳ್ಳಿ. ಈ ವ್ಯಾಯಾಮವು ತೊಡೆ ಸ್ನಾಯುಗಳ ಸಹನಶಕ್ತಿ ಹೆಚ್ಚಿಸುತ್ತದೆ.