ಚಳಿಗಾಲದ ತಿಂಡಿಗಳಿಂದ ಉಂಟಾಗುವ ಕೊಬ್ಬಿನ ಯಕೃತ್ತಿನ ಆರಂಭಿಕ ಚಿಹ್ನೆಗಳು!
ಭಾನುಪ್ರಿಯ ಡಿ.ಕೆ
ಚಳಿಗಾಲದ ತಿಂಡಿಗಳಿಂದ ಉಂಟಾಗುವ ಕೊಬ್ಬಿನ ಯಕೃತ್ತಿನ ಆರಂಭಿಕ ಚಿಹ್ನೆಗಳು!
ಚಳಿಗಾಲದಲ್ಲಿ ಬಿಸಿಬಿಸಿ ಕರಿದ ತಿಂಡಿಗಳು ಮತ್ತು ಸಿಹಿ ತಿಂಡಿಗಳನ್ನು ಹೆಚ್ಚು ತಿನ್ನುವುದರಿಂದ ನಾನ್-ಆಲ್ಕೋಹಾಲಿಕ್ ಫ್ಯಾಟಿ ಲಿವರ್ ಡಿಸೀಸ್ ಸಮಸ್ಯೆ ಉಂಟಾಗಬಹುದು. ಇದು ಯಕೃತ್ತಿನಲ್ಲಿ ಕೊಬ್ಬು ಶೇಖರಣೆಯಾಗಿ ಉರಿಯೂತಕ್ಕೆ ಕಾರಣವಾಗುತ್ತದೆ.
ಅತಿಯಾದ ಆಯಾಸ ಅಥವಾ ದಣಿವು
ಯಕೃತ್ತಿನ ಸಮಸ್ಯೆಗಳು ಪ್ರಾರಂಭವಾದಾಗ ಎಷ್ಟೇ ವಿಶ್ರಾಂತಿ ಪಡೆದರೂ ದೇಹಕ್ಕೆ ಶಕ್ತಿ ಕಡಿಮೆ ಇರುವಂತೆ ಭಾಸವಾಗುತ್ತದೆ. ಯಕೃತ್ತು ಸರಿಯಾಗಿ ಕೆಲಸ ಮಾಡದಿದ್ದಾಗ ಇದು ಸಾಮಾನ್ಯ ಲಕ್ಷಣವಾಗಿರುತ್ತದೆ.
ಹೊಟ್ಟೆಯ ಮೇಲ್ಭಾಗದ ನೋವು
ಪ್ರತಿದಿನ ಯಕೃತ್ತು ಇರುವ ಭಾಗದಲ್ಲಿ ಮಂದ ನೋವು ಅಥವಾ ತುಂಬಿಕೊಂಡ ಭಾವನೆ ಉಂಟಾಗುತ್ತದೆ. ಹಾಗೆಯೇ ಅಸ್ವಸ್ಥತೆಯು ಉಂಟಾಗುತ್ತದೆ.
ಅಜೀರ್ಣ ಅಥವಾ ಉಬ್ಬಸ
ಅತಿ ಹೆಚ್ಚು ಕರಿದ ಮತ್ತು ಕೊಬ್ಬಿನ ಆಹಾರಗಳನ್ನು ಸೇವಿಸುವುದರಿಂದ ಹೊಟ್ಟೆ ಉಬ್ಬುವುದು, ಗ್ಯಾಸ್ ಸಮಸ್ಯೆ, ಅಜೀರ್ಣದಂತಹ ಕಾಯಿಲೆಗಳಿಗೆ ತುತ್ತಾಗಬೇಕಾಗುತ್ತದೆ.
ತೂಕ ಹೆಚ್ಚಾಗುವುದು
ಚಳಿಗಾಲದಲ್ಲಿ ಹೆಚ್ಚು ಕ್ಯಾಲೋರಿ ಇರುವಂತಹ ತಿಂಡಿಗಳನ್ನು ತಿನ್ನುವುದರಿಂದ ತೂಕ ಇದ್ದಕ್ಕಿದ್ದಂತೆ ಹೆಚ್ಚಾಗಬಹುದು
ಶಕ್ತಿಯ ಕೊರತೆ ಅಥವಾ ದೌರ್ಬಲ್ಯ
ಯಕೃತ್ ಸಮಸ್ಯೆಗಳು ದೇಹದಲ್ಲಿ ಗೋಚರಿಸಿಕೊಂಡಾಗ ದೈನಂದಿನ ಕೆಲಸಗಳಿಗೆ ಶಕ್ತಿ ಕಡಿಮೆಯಾಗುತ್ತದೆ. ಹಾಗೆಯೇ ದೇಹದ ಭಾಗಗಳಲ್ಲಿ ತೀವ್ರ ನೋವನ್ನು ಅನುಭವಿಸಬೇಕಾಗುತ್ತದೆ.