ಡ್ರೈ ಫ್ರೂಟ್ಸ್ ನಿಯಮಿತಕ್ಕಿಂತ ಹೆಚ್ಚು ಸೇವಿಸಿದರೆ ಏನಾಗುತ್ತೆ?
ಕಲಾನ್ವಿತ ಜಿ ಜೈನ್
ಡ್ರೈ ಫ್ರೂಟ್ಸ್ ನಿಯಮಿತಕ್ಕಿಂತ ಹೆಚ್ಚು ಸೇವಿಸಿದರೆ ಏನಾಗುತ್ತೆ?
ಡ್ರೈ ಫ್ರೂಟ್ಸ್ ಮಿತಿಯಲ್ಲಿ ಸೇವಿಸಿದರೆ ಆರೋಗ್ಯಕ್ಕೆ ಒಳ್ಳೆಯದು, ಆದರೆ ನಿಯಮಿತಕ್ಕಿಂತ ಹೆಚ್ಚು ಸೇವಿಸಿದರೆ ಕೆಲವು ಅಡ್ಡಪರಿಣಾಮಗಳು ಉಂಟಾಗಬಹುದು.. !
ತೂಕ ಹೆಚ್ಚಳ
ಡ್ರೈ ಫ್ರೂಟ್ಸ್‌ಗಳು ಹೆಚ್ಚು ಕ್ಯಾಲೊರಿ ಮತ್ತು ಕೊಬ್ಬಿನಾಂಶ ಹೊಂದಿರುತ್ತವೆ. ಹೆಚ್ಚು ತಿನ್ನುವುದರಿಂದ ಅನಗತ್ಯ ಕ್ಯಾಲೊರಿ ಸೇರಿ ತೂಕ ತ್ವರಿತವಾಗಿ ಹೆಚ್ಚುತ್ತದೆ.
ಜೀರ್ಣಕ್ರಿಯೆ ಸಮಸ್ಯೆ
ಹೆಚ್ಚು ಫೈಬರ್ ಇರುವುದರಿಂದ ಹೊಟ್ಟೆ ಉಬ್ಬರ, ಅನಿಲ, ಡಯೇರಿಯಾ, ಮಲಬದ್ಧತೆ ಅಥವಾ ಹೊಟ್ಟೆ ನೋವು ಉಂಟಾಗಬಹುದು.
ರಕ್ತದಲ್ಲಿ ಸಕ್ಕರೆ ಹೆಚ್ಚಳ
ಒಣದ್ರಾಕ್ಷಿ, ಖರ್ಜೂರದಂತಹವುಗಳಲ್ಲಿ ನೈಸರ್ಗಿಕ ಸಕ್ಕರೆ ಹೆಚ್ಚು. ಅವುಗಳನ್ನು ಹೆಚ್ಚು ಸೇವಿಸಿದರೆ ರಕ್ತದೊತ್ತಡ ಏರಿಕೆಯಾಗಿ ಮಧುಮೇಹ ಅಪಾಯ ಎದುರಿಸಬಹುದು.
ಹಲ್ಲುಗಳ ಸಮಸ್ಯೆ
ಡ್ರೈ ಫ್ರೂಟ್ಸ್ ಅಂಟಿಕೊಳ್ಳುವ ಸ್ವಭಾವ ಹೊಂದಿರುವುದರಿಂದ ಮತ್ತು ಸಕ್ಕರೆ ಹೆಚ್ಚು. ಹಲ್ಲುಗಳಿಗೆ ಅಂಟಿಕೊಂಡು ಹಲ್ಲು ಕುಳಿ ಉಂಟಾಗಬಹುದು. ಅತಿಯಾಗಿ ಸೇವಿಸದೆ ನಿಯಮಿತವಾಗಿ ಸೇವಿಸುವುದು ಉತ್ತಮ