ಮಲಯಾಳಂ ಸೂಪರ್ ಹಿಟ್ ಸಿನಿಮಾ ದೃಶ್ಯಂನಲ್ಲಿ ಬಾಲನಟಿಯಾಗಿ ನಟಿಸಿದ್ದ ಎಸ್ತರ್ ಅನಿಲ್ ಇದೀಗ ಯುವ ನಟಿಯಾಗಿದ್ದು, ಆಕೆ ಇನ್ಸ್ಟಾಗ್ರಾಂನಲ್ಲಿ ಹಂಚಿಕೊಂಡಿರುವ ಹೊಸ ಫೋಟೋಗಳು ಸಖತ್ ವೈರಲ್ ಆಗುತ್ತಿವೆ.
ಶ್ವೇತವರ್ಣದ ಉಡುಪು
ನಟಿ ಎಸ್ತರ್ ಅನಿಲ್ ಅವರು ಹೊಸ ಫೋಟೋಶೂಟ್‌ನಲ್ಲಿ ಸಾಂಪ್ರದಾಯಿಕ ಹಾಗೂ ವೆಸ್ಟರ್ನ್ ಶೈಲಿಯ ಸಮ್ಮಿಶ್ರಣ ಹೊಂದಿರುವ ಶ್ವೇತವರ್ಣದ ವಿಶಿಷ್ಟ ಉಡುಪಿನಲ್ಲಿ ಅತ್ಯಂತ ಸರಳ ಮತ್ತು ಸುಂದರವಾಗಿ ಕಂಗೊಳಿಸುತ್ತಿದ್ದಾರೆ.
ಕ್ಯೂಟ್ ಲುಕ್
ಟ್ರಾನ್ಸ್‌ಪರೆಂಟ್ ಕಟ್-ಔಟ್ ಕುರ್ತಾ, ಕೆಳಭಾಗದಲ್ಲಿರುವ ಸೂಕ್ಷ್ಮ ಎಂಬ್ರಾಯ್ಡರಿ ವಿನ್ಯಾಸವು ಅವರ ಉಡುಪಿಗೆ ಮೆರುಗು ನೀಡಿದೆ. ಕಿವಿಗೆ ಧರಿಸಿರುವ ಚಿನ್ನದ ಝುಮ್ಕಾ, ಕೈಯಲ್ಲೊಂದು ಉಂಗುರ ಮತ್ತು ಸ್ಲಿಕ್ ಆಗಿ ಹಿಂಬದಿಗೆ ಬಾಚಿದ ಹೇರ್‌ಸ್ಟೈಲ್ ಎಲಿಗಂಟ್ ಲುಕ್‌ಗೆ ಮತ್ತಷ್ಟು ಶೋಭೆ ತಂದಿದೆ.
ಬಾಲನಟಿಯಾಗಿ ಪಾದಾರ್ಪಣೆ
ಬಾಲನಟಿಯಾಗಿ ಚಿತ್ರರಂಗಕ್ಕೆ ಕಾಲಿಟ್ಟ ಇವರು, 2010ರಲ್ಲಿ ತೆರೆಕಂಡ ಮಲಯಾಳಂನ 'ನಲ್ಲವನ್' ಚಿತ್ರದ ಮೂಲಕ ಅಭಿನಯ ಜೀವನವನ್ನು ಆರಂಭಿಸಿದರು.
ದೃಶ್ಯಂ ಮೂಲಕ ಅಪಾರ ಖ್ಯಾತಿ
ಹಿಟ್ ಮಲಯಾಳಂ ಸಿನಿಮಾ 'ದೃಶ್ಯಂ'ನಲ್ಲಿ ಮೋಹನ್‌ಲಾಲ್ ಅವರ ಕಿರಿಯ ಮಗಳ (ಅನುಮೋಲ್) ಪಾತ್ರದಲ್ಲಿ ನಟಿಸಿ ಅತ್ಯಂತ ಜನಪ್ರಿಯತೆ ಗಳಿಸಿದರು.
ಬಹುಭಾಷೆಗಳಲ್ಲಿ ಅಭಿನಯ
ಮೂಲ ಮಲಯಾಳಂ 'ದೃಶ್ಯಂ' ಅಷ್ಟೇ ಅಲ್ಲದೆ, ಇದರ ತೆಲುಗು ರಿಮೇಕ್ 'ದೃಶ್ಯಂ' (ವೆಂಕಟೇಶ್ ಜೊತೆ) ಹಾಗೂ ತಮಿಳು ರಿಮೇಕ್ 'ಪಾಪ್ನಾಶಂ' (ಕಮಲ್ ಹಾಸನ್ ಜೊತೆ) ಸಿನಿಮಾಗಳಲ್ಲೂ ಅದೇ ಪಾತ್ರವನ್ನು ಮರುಸೃಷ್ಟಿಸಿ ಸೈ ಎನಿಸಿಕೊಂಡರು.
ನಾಯಕಿಯಾಗಿ ಬಡ್ತಿ
'ಒರು ನೊಚ್ಚಿಯಾಲಯಂ ವಿಂಟೇಜ್ ಕಥಾ' ಎಂಬ ಮಲಯಾಳಂ ಚಿತ್ರದ ಮೂಲಕ ಕಥಾನಾಯಕಿಯಾಗಿ ಪ್ರಮುಖ ಪಾತ್ರಗಳನ್ನು ಮಾಡಲು ಪ್ರಾರಂಭಿಸಿದರು.
ಸೋಷಿಯಲ್ ಮೀಡಿಯಾ ಪ್ರಭಾವಿ
ಅತ್ಯುತ್ತಮ ಫ್ಯಾಷನ್ ಸೆನ್ಸ್ ಹೊಂದಿರುವ ಇವರು ಇನ್‌ಸ್ಟಾಗ್ರಾಮ್ ಸೇರಿದಂತೆ ಸಾಮಾಜಿಕ ಜಾಲತಾಣಗಳಲ್ಲಿ ತಮ್ಮ ಗ್ಲಾಮರಸ್ ಹಾಗೂ ಸಾಂಪ್ರದಾಯಿಕ ಫೋಟೋಶೂಟ್‌ಗಳ ಮೂಲಕ ಸದಾ ಸಕ್ರಿಯರಾಗಿದ್ದಾರೆ.