ಮಜ್ಜಿಗೆ (Buttermilk)
ಭಾರತೀಯ ಸಾಂಪ್ರದಾಯಿಕ ಆಹಾರ ಪದ್ಧತಿಯಲ್ಲಿ ಮಜ್ಜಿಗೆಗೆ ವಿಶೇಷ ಸ್ಥಾನವಿದೆ. ಎದೆಯುರಿ ಇರುವಾಗ ತಣ್ಣನೆಯ ಮಜ್ಜಿಗೆ ಕುಡಿಯುವುದು ರಾಮಬಾಣ. ಮಜ್ಜಿಗೆಯಲ್ಲಿರುವ ಲ್ಯಾಕ್ಟಿಕ್ ಆಸಿಡ್ ಹೊಟ್ಟೆಯ ಉರಿಯನ್ನು ಕಡಿಮೆ ಮಾಡುತ್ತದೆ. ಇದಕ್ಕೆ ಸ್ವಲ್ಪ ಜೀರಿಗೆ ಪುಡಿ ಮತ್ತು ಪುದೀನಾ ರಸ ಸೇರಿಸಿ ಕುಡಿದರೆ ಜೀರ್ಣಕ್ರಿಯೆ ವೇಗಗೊಂಡು, ಗ್ಯಾಸ್ಟ್ರಿಕ್‌ನಿಂದ ಉಂಟಾಗುವ ಎದೆಯುರಿ ಮಾಯವಾಗುತ್ತದೆ.