ಚಳಿಗಾಲದಲ್ಲಿ ಪ್ರತಿದಿನ ಬೆಳಿಗ್ಗೆ ದಾಳಿಂಬೆ ಜ್ಯೂಸ್ ಕುಡಿಯಿರಿ! pomegranate juice
ಸವಿನಾ ನಾಯ್ಕ
ಚಳಿಗಾಲದಲ್ಲಿ ಪ್ರತಿದಿನ ಬೆಳಿಗ್ಗೆ ದಾಳಿಂಬೆ ಜ್ಯೂಸ್ ಕುಡಿಯಿರಿ! pomegranate juice
ಚಳಿಗಾಲದಲ್ಲಿ ಅನಾರೋಗ್ಯಕ್ಕೆ ಒಳಗಾಗುವ ಸಾಧ್ಯತೆಗಳು ತುಂಬಾ ಹೆಚ್ಚು. ಈ ಅವಧಿಯಲ್ಲಿ ನಿಮ್ಮ ಆಹಾರದ ಬಗ್ಗೆ ಹೆಚ್ಚಿನ ಕಾಳಜಿ ವಹಿಸಲು ಪ್ರತಿದಿನ ಬೆಳಿಗ್ಗೆ ಖಾಲಿ ಹೊಟ್ಟೆಯಲ್ಲಿ ದಾಳಿಂಬೆ ಜ್ಯೂಸ್ ಕುಡಿಯಿರಿ.
ದಾಳಿಂಬೆ ಜ್ಯೂಸ್ ಆರೋಗ್ಯಕ್ಕೆ ಒಳ್ಳೆಯದು!
ಚಳಿಗಾಲದಲ್ಲಿ ಆರೋಗ್ಯವಾಗಿರಲು ಪ್ರತಿದಿನ ಬೆಳಿಗ್ಗೆ ಖಾಲಿ ಹೊಟ್ಟೆಯಲ್ಲಿ ದಾಳಿಂಬೆ ರಸವನ್ನು ಕುಡಿಯಬೇಕು ಎಂದು ಆರೋಗ್ಯ ತಜ್ಞರು ಹೇಳುತ್ತಾರೆ.
ರೋಗನಿರೋಧಕ ಶಕ್ತಿ ಹೆಚ್ಚಿಸುತ್ತದೆ!
ದಾಳಿಂಬೆಯಲ್ಲಿ ವಿಟಮಿನ್ C ಅತ್ಯಧಿಕ ಪ್ರಮಾಣದಲ್ಲಿದೆ (ಒಂದು ದಾಳಿಂಬೆಯಲ್ಲಿ ದಿನನಿತ್ಯದ ಅಗತ್ಯಕ್ಕಿಂತ ಹೆಚ್ಚು ವಿಟಮಿನ್ C ಇರುತ್ತದೆ). ಚಳಿಗಾಲದಲ್ಲಿ ಜಲುಬು, ಕೆಮ್ಮು, ಶೀತ ಆಗುವ ಸಾಧ್ಯತೆ ಹೆಚ್ಚು – ಇದನ್ನು ತಡೆಗಟ್ಟಲು ವಿಟಮಿನ್ C ತುಂಬಾ ಪರಿಣಾಮಕಾರಿ.
ಹೃದಯದ ಆರೋಗ್ಯಕ್ಕೆ ಒಳ್ಳೆಯದು!
ನೀವು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಿದ್ದರೆ, ದಾಳಿಂಬೆ ರಸವನ್ನು ಕುಡಿಯುವುದು ಒಳ್ಳೆಯದು. ಚಳಿಗಾಲದಲ್ಲಿ ರಕ್ತ ಪರಿಚಲನೆ ಸ್ವಲ್ಪ ನಿಧಾನವಾಗುತ್ತದೆ. ದಾಳಿಂಬೆ ಜ್ಯೂಸ್ ರಕ್ತವನ್ನು ತೆಳು ಮಾಡಿ, ಹೃದಯಕ್ಕೆ ಒಳ್ಳೆಯದು.
ಚರ್ಮಕ್ಕೆ ಒಳ್ಳೆಯದು!
ಚಳಿಗಾಲದಲ್ಲಿ ಚರ್ಮ ಒಣಗುತ್ತದೆ, ಸೀಳು ಬರುತ್ತದೆ. ದಾಳಿಂಬೆಯ ಆಂಟಿ-ಏಜಿಂಗ್ ಗುಣಗಳು ಚರ್ಮದ ಆರ್ದ್ರತೆಯನ್ನು ಕಾಪಾಡುತ್ತವೆ.
ಜ್ಯೂಸ್ ತಯಾರಿಸುವುದು ಹೇಗೆ?
ಮನೆಯಲ್ಲೇ ತಾಜಾ ದಾಳಿಂಬೆ ಬೀಜಗಳನ್ನು ಬ್ಲೆಂಡ್ ಮಾಡಿ, ರಸ ಮಾಡಿ ಕುಡಿಯಿರಿ. ಮಾರುಕಟ್ಟೆ ಜ್ಯೂಸ್‌ಗಳಲ್ಲಿ ಸಕ್ಕರೆ, ಪ್ರಿಸರ್ವೇಟಿವ್‌ಗಳು ಹೆಚ್ಚಿರುತ್ತವೆ. ಹೀಗಾಗಿ ಸಾಧ್ಯವಾದರೆ ತಪ್ಪಿಸಿ.