ಬೇಸಿಗೆಯಲ್ಲಿ ಈ ಐದು ಪಾನಿಯಗಳನ್ನು ತಪ್ಪಿಯೂ ಸೇವಿಸಬೇಡಿ

ವಿನಾಯಕ ನಾಯಕ

ಬೇಸಿಗೆಯಲ್ಲಿ ಈ ಐದು ಪಾನಿಯಗಳನ್ನು ತಪ್ಪಿಯೂ ಸೇವಿಸಬೇಡಿ

ಬೇಸಿಗೆಯ ಸುಡುವ ಬಿಸಿಲಿನಲ್ಲಿ ದೇಹವನ್ನು ತಂಪಾಗಿಸಿಕೊಳ್ಳಲು ನಾವು ವಿವಿಧ ಪಾನೀಯಗಳನ್ನು ಆಶ್ರಯಿಸುತ್ತೇವೆ. ಆದರೆ ನಮಗೆ ಹಿತವೆನಿಸುವ ಎಲ್ಲಾ ಪಾನೀಯಗಳು ಆರೋಗ್ಯಕ್ಕೆ ಒಳ್ಳೆಯದಲ್ಲ. ಕೆಲವು ಪಾನೀಯಗಳು ದೇಹವನ್ನು ಮತ್ತಷ್ಟು ನಿರ್ಜಲೀಕರಣಗೊಳಿಸಿ ಸುಸ್ತು ಮಾಡಬಹುದು.

ಕಾರ್ಬೋನೇಟೆಡ್ ಸಾಫ್ಟ್ ಡ್ರಿಂಕ್ಸ್

ಇವುಗಳಲ್ಲಿ ಸಕ್ಕರೆ ಅಂಶ ಅತಿಯಾಗಿರುತ್ತದೆ ಮತ್ತು ಕೆಫೀನ್ ಇರುತ್ತದೆ. ಇದು ದೇಹದಲ್ಲಿನ ನೀರನ್ನು ಕಡಿಮೆ ಮಾಡಿ ಪದೇ ಪದೇ ಬಾಯಾರಿಕೆಯಾಗುವಂತೆ ಮಾಡುತ್ತದೆ. ಅಲ್ಲದೆ, ಇದು ಜೀರ್ಣಕ್ರಿಯೆಯ ಮೇಲೆ ಕೆಟ್ಟ ಪರಿಣಾಮ ಬೀರುತ್ತದೆ.

ಅತಿಯಾದ ಟೀ ಮತ್ತು ಕಾಫಿ

ಟೀ-ಕಾಫಿ ಪ್ರಿಯರಿಗೆ ಇದು ಕಷ್ಟ ಎನಿಸಬಹುದು, ಆದರೆ ಬಿಸಿಲಿನಲ್ಲಿ ಇವುಗಳನ್ನು ಕಡಿಮೆ ಮಾಡುವುದು ಉತ್ತಮ. ಟೀ ಮತ್ತು ಕಾಫಿಯಲ್ಲಿರುವ ಕೆಫೀನ್ ಮೂತ್ರವರ್ಧಕವಾಗಿ ಕೆಲಸ ಮಾಡುತ್ತದೆ.

ಎನರ್ಜಿ ಡ್ರಿಂಕ್ಸ್

ಇವುಗಳಲ್ಲಿ ಕೆಫೀನ್ ಮತ್ತು ಕೃತಕ ಸಿಹಿಕಾರಕಗಳು ಬಹಳ ಹೆಚ್ಚಿರುತ್ತವೆ. ಇದು ಬೇಸಿಗೆಯಲ್ಲಿ ರಕ್ತದೊತ್ತಡವನ್ನು ಹೆಚ್ಚಿಸಬಹುದು ಮತ್ತು ಹೃದಯ ಬಡಿತದಲ್ಲಿ ಏರುಪೇರು ಉಂಟುಮಾಡಬಹುದು.

ಪ್ಯಾಕ್ ಮಾಡಿದ ಹಣ್ಣಿನ ರಸಗಳು

ಇದರಲ್ಲಿ ಹಣ್ಣಿನ ನೈಸರ್ಗಿಕ ಅಂಶಕ್ಕಿಂತ ಹೆಚ್ಚಾಗಿ ಪ್ರಿಸರ್ವೇಟಿವ್‌ಗಳು (Preservatives) ಮತ್ತು ಸಕ್ಕರೆ ಇರುತ್ತದೆ. ಇದು ಶರೀರದಲ್ಲಿ ಕ್ಯಾಲೋರಿ ಹೆಚ್ಚಿಸುವುದಲ್ಲದೆ, ನೈಸರ್ಗಿಕ ಹೈಡ್ರೇಶನ್ ನೀಡುವುದಿಲ್ಲ.

ಮದ್ಯಪಾನ

ಮದ್ಯವು ದೇಹವನ್ನು ಅತಿ ವೇಗವಾಗಿ ನಿರ್ಜಲೀಕರಣಗೊಳಿಸುತ್ತದೆ. ಬಿಸಿಲಿನಲ್ಲಿ ಮದ್ಯ ಸೇವಿಸುವುದರಿಂದ ಹೀಟ್ ಸ್ಟ್ರೋಕ್ ಆಗುವ ಸಾಧ್ಯತೆ ಹೆಚ್ಚಿರುತ್ತದೆ.