ಅಪ್ಪಿತಪ್ಪಿಯೂ ಬಾಗಿಲಿನ ಹಿಂದೆ ಈ ವಸ್ತುಗಳನ್ನು ನೇತಾಕಬೇಡಿ!
ಭಾನುಪ್ರಿಯ ಡಿ.ಕೆ
ಅಪ್ಪಿತಪ್ಪಿಯೂ ಬಾಗಿಲಿನ ಹಿಂದೆ ಈ ವಸ್ತುಗಳನ್ನು ನೇತಾಕಬೇಡಿ!
ವಾಸ್ತು ಶಾಸ್ತ್ರದ ಪ್ರಕಾರ ಮನೆಯ ಮುಖ್ಯ ದ್ವಾರ ಅಥವಾ ಬಾಗಿಲಿನ ಹಿಂಭಾಗವು ಧನಾತ್ಮಕ ಶಕ್ತಿಯ ಹರಿವಿನ ಮೇಲೆ ಹೆಚ್ಚಿನ ಪ್ರಭಾವ ಬೀರುತ್ತದೆ.
ಹಳೆಯ ಬಟ್ಟೆಗಳು
ಬಾಗಿಲಿನ ಹಿಂದೆ ಹಳೆಯ ಅಥವಾ ಒಗೆಯದ ಬಟ್ಟೆಗಳನ್ನು ನೇತಾಕುವುದರಿಂದ ಮನೆಯಲ್ಲಿ ನಕಾರಾತ್ಮಕ ಶಕ್ತಿ ನೆಲೆಸುತ್ತದೆ ಮತ್ತು ಇದು ಕುಟುಂಬದ ಸದಸ್ಯರ ಆರೋಗ್ಯದ ಮೇಲೆ ಪರಿಣಾಮ ಬೀರಬಹುದು.
ಕ್ಯಾಲೆಂಡರ್
ಬಾಗಿಲಿನ ಹಿಂಭಾಗದಲ್ಲಿ ಕ್ಯಾಲೆಂಡರ್ ನೇತಾಕಬಾರದು. ಇದು ಸಮಯದ ಸಂಕೇತವಾಗಿದ್ದು, ಬಾಗಿಲಿನ ಹಿಂದೆ ಇದ್ದರೆ ಮನೆಯವರ ಪ್ರಗತಿಯು ಕುಂಠಿತಗೊಳ್ಳುತ್ತದೆ ಎಂಬ ನಂಬಿಕೆಯಿದೆ.
ಕನ್ನಡಿ
ಬಾಗಿಲಿನ ಹಿಂದೆ ಅಥವಾ ಬಾಗಿಲು ತೆರೆದಾಗ ಕಾಣುವಂತೆ ಕನ್ನಡಿ ಇರಬಾರದು. ಇದು ಮನೆಗೆ ಬರುವ ಧನಾತ್ಮಕ ಶಕ್ತಿಯನ್ನು ಪ್ರತಿಫಲಿಸಿ ವಾಪಸ್ ಕಳುಹಿಸುತ್ತದೆ ಎಂದು ಹೇಳಲಾಗುತ್ತದೆ.
ಪೊರಕೆ
ಪೊರಕೆಯನ್ನು ಲಕ್ಷ್ಮಿಯ ಸಂಕೇತವೆಂದು ಪರಿಗಣಿಸಲಾಗುತ್ತದೆ. ಇದನ್ನು ಬಾಗಿಲಿನ ಹಿಂದೆ ನೇತಾಕುವುದು ಅಥವಾ ಇಡುವುದು ಆರ್ಥಿಕ ಸಂಕಷ್ಟಕ್ಕೆ ದಾರಿ ಮಾಡಿಕೊಡಬಹುದು.
ದೇವತೆಗಳ ಫೋಟೋ
ಅನೇಕರು ಜಾಗದ ಕೊರತೆಯಿಂದ ಬಾಗಿಲಿನ ಹಿಂದೆ ದೇವರ ಫೋಟೋ ನೇತಾಕುತ್ತಾರೆ. ಇದು ಅತ್ಯಂತ ಅಶುಭ. ಬಾಗಿಲು ಪದೇ ಪದೇ ಬಡಿಯುವುದರಿಂದ ದೇವರಿಗೆ ಅವಮಾನ ಮಾಡಿದಂತಾಗುತ್ತದೆ ಮತ್ತು ಮನೆಯಲ್ಲಿ ಅಶಾಂತಿ ಮೂಡುತ್ತದೆ.