ಈ ಜನರು ನಿಂಬೆ ನೀರನ್ನು ಅಪ್ಪಿತಪ್ಪಿಯೂ ಕುಡಿಯಬೇಡಿ!

ಭಾನುಪ್ರಿಯ ಡಿ.ಕೆ

ಈ ಜನರು ನಿಂಬೆ ನೀರನ್ನು ಅಪ್ಪಿತಪ್ಪಿಯೂ ಕುಡಿಯಬೇಡಿ!

ನಿಂಬೆ ನೀರು ಒಂದು ಸರಳ, ರುಚಿಕರ ಮತ್ತು ಆರೋಗ್ಯಕರ ಪಾನೀಯವಾಗಿದೆ. ಇದನ್ನು ಬೆಳಿಗ್ಗೆ ಖಾಲಿ ಹೊಟ್ಟೆಯಲ್ಲಿ ಕುಡಿಯುವುದರಿಂದ ದೇಹಕ್ಕೆ ವಿಟಮಿನ್ C, ಆಂಟಿಆಕ್ಸಿಡೆಂಟ್‌ಗಳು, ಸಿಟ್ರಿಕ್ ಆಸಿಡ್​​ಗಳು ಹೇರಳವಾಗಿ ಸಿಗುತ್ತವೆ. ಆದರೆ, ಈ ಸಮಸ್ಯೆ ಇರುವವರು ಈ ನೀರನ್ನು ಕುಡಿಯಬೇಡಿ.

ಹೊಟ್ಟೆ ಮತ್ತು ಆಮ್ಲ ಸಂಬಂಧಿತ ಸಮಸ್ಯೆಗಳು

ಹೊಟ್ಟೆಯ ಸಮಸ್ಯೆ ಇರುವವರಿಗೆ ನಿಂಬೆ ನೀರು ಹಿಮ್ಮುಖ ಹರಿವಾಗಿರುತ್ತದೆ. ಇದು ಜಠರದಲ್ಲಿ ಉರಿಯುವುದು, ಹುಣ್ಣಾಗುವುದು, ಸೂಕ್ಷ್ಮ ಹೊಟ್ಟೆ ಇದ್ದವರಿಗೆ ಹಾನಿಯಾಗಬಹುದು.

ಹಲ್ಲುಗಳ ಸಮಸ್ಯೆ ಇರುವವರು

ನಿಂಬೆಹಣ್ಣಿನಲ್ಲಿರುವ ಆಮ್ಲವು ಕ್ರಮೇಣ ಹಲ್ಲಿನ ದಂತಕವಚವನ್ನು ಸವೆಯುವಂತೆ ಮಾಡಿ, ಹಲ್ಲುಗಳು ಹುಳುಕಾಗುವಂತೆ ಮಾಡುತ್ತದೆ. ಇದರಿಂದ ಹೆಚ್ಚಿನ ನೋವನ್ನು ಅನುಭವಿಸಬೇಕಾಗುತ್ತದೆ.

ಬಾಯಿ ಹುಣ್ಣು

ನಿಮಗೆ ಆಗಾಗ್ಗೆ ಬಾಯಿ ಹುಣ್ಣು ಅಥವಾ ಕ್ಯಾಂಕರ್ ಹುಣ್ಣುಗಳು ಆಗುತ್ತಿದ್ದರೆ, ನಿಂಬೆ ನೀರನ್ನು ಕುಡಿಯಬೇಡಿ. ಇದು ನಿಮ್ಮ ಆರೋಗ್ಯವನ್ನು ಇನ್ನಷ್ಟು ಹದಗೆಡಿಸುತ್ತದೆ.

ತಲೆನೋವು

ನಿಂಬೆಹಣ್ಣಿನ ರಸವನ್ನು ಸೇವಿಸುವುದು ಕೆಲವೊಮ್ಮೆ ತಲೆನೋವು ಮತ್ತು ಮೈಗ್ರೇನ್​​ ಸಮಸ್ಯೆಯನ್ನು ಉಂಟು ಮಾಡುತ್ತದೆ. ಕೆಲವರಿಗೆ ಅಲರ್ಜಿ ಬರುವ ಸಾಧ್ಯತೆಯೂ ಹೆಚ್ಚಿರುತ್ತದೆ.

ಮೂತ್ರಪಿಂಡದ ಸಮಸ್ಯೆಗಳು

ನಿಂಬೆ ನೀರು ಸೌಮ್ಯವಾದ ಮೂತ್ರವರ್ಧಕವಾಗಿದ್ದು, ಇದು ಮೂತ್ರ ವಿಸರ್ಜನೆಯನ್ನು ಹೆಚ್ಚಿಸುತ್ತದೆ. ಮೊದಲೇ ನಿರ್ಜಲೀಕರಣ ಅಥವಾ ಮೂತ್ರಪಿಂಡದ ಸಮಸ್ಯೆಗಳಿರುವ ಜನರು ಈ ನೀರನ್ನು ಕುಡಿಯುವ ಮುಂಚೆ ಜಾಗರೂಕರಾಗಿರುವುದು ಉತ್ತಮ.