ಸಂಜೆ 6 ಗಂಟೆಯ ನಂತರ ಕೆಲವು ತಿಂಡಿಗಳು ಅಥವಾ ಆಹಾರಗಳನ್ನು ಸೇವಿಸಿದ್ರೆ ಹೊಟ್ಟೆಯಲ್ಲಿ ಅನಿಲ (ಗ್ಯಾಸ್) ಸಂಗ್ರಹವಾಗಿ ಉಬ್ಬಸ ಉಂಟಾಗಬಹುದು, ಏಕೆಂದರೆ ರಾತ್ರಿಯಲ್ಲಿ ಜೀರ್ಣಕ್ರಿಯೆ ನಿಧಾನಗತಿಯಲ್ಲಿ ನಡೆಯುತ್ತದೆ.
ಡೀಪ್ ಫ್ರೈಡ್ ತಿಂಡಿಗಳು
ಪಕೋಡಾ, ಸಮೋಸಾ, ಚಿಪ್ಸ್, ಫ್ರೆಂಚ್ ಫ್ರೈಸ್ ಇದು ತಿನ್ನುವುದರಿಂದ ಕೊಬ್ಬು ಜೀರ್ಣವಾಗಲು ಸಮಯ ತೆಗೆದುಕೊಳ್ಳುತ್ತದೆ, ರಾತ್ರಿ ಇದು ಗ್ಯಾಸ್ ಮತ್ತು ಉಬ್ಬಸಕ್ಕೆ ಕಾರಣವಾಗುತ್ತದೆ.
ಡೈರಿ ಉತ್ಪನ್ನಗಳು
ಹಾಲು, ಚೀಸ್, ಯೋಗರ್ಟ್, ಕ್ರೀಮ್ ತಿನ್ನುವುದರಿಂದ ಲ್ಯಾಕ್ಟೋಸ್ ಇಂಟಾಲರೆನ್ಸ್ ಇದ್ದವರಿಗೆ ರಾತ್ರಿ ತೊಂದರೆ ಕೊಡುತ್ತದೆ.
ರಿಫೈಂಡ್ ಕಾರ್ಬ್ಸ್
ವೈಟ್ ರೈಸ್, ಬ್ರೆಡ್, ಪಾಸ್ತಾ ತಿನ್ನುವುದರಿಂದ ಇನ್ಸುಲಿನ್ ಸ್ಪೈಕ್ ಉಂಟುಮಾಡಿ ಬೆಲ್ಲಿ ಫ್ಯಾಟ್ ಮತ್ತು ಗ್ಯಾಸ್ ಹೆಚ್ಚಿಸುತ್ತದೆ.
ಕ್ರೂಸಿಫೆರಸ್ ತರಕಾರಿಗಳು
ಬ್ರೋಕೊಲಿ, ಕ್ಯಾಬೇಜ್, ಕಾಲಿಫ್ಲವರ್ ತಿನ್ನುವುದರಿಂದ ರ್ಯಾಫಿನೋಸ್ ಎಂಬ ಸಕ್ಕರೆ ಇರುವುದರಿಂದ ಗ್ಯಾಸ್ ಉತ್ಪಾದನೆಯಾಗುತ್ತದೆ, ವಿಶೇಷವಾಗಿ ರಾತ್ರಿ.
ಶುಗರ್ ಫ್ರೀ ಕ್ಯಾಂಡಿ
ಸಾರ್ಬಿಟಾಲ್ ನಂತಹ ಸ್ವೀಟ್ನರ್‌ಗಳು ಗ್ಯಾಸ್ ಉಂಟುಮಾಡುತ್ತವೆ. ದಿಢೀರಾಗಿ ಸೇವಿಸಿದ್ರೆ ಅಥವಾ ರಾತ್ರಿ ಸೇವಿಸಿದ್ರೆ ಗ್ಯಾಸ್ ಬರುತ್ತದೆ.