80ರ ದಶಕದ ಈ ಸ್ಟಾರ್​ ನಟಿ ಯಾರು ಹೇಳಬಲ್ಲಿರಾ?

ಮೋಹನ್​ ಶೆಟ್ಟಿ

80ರ ದಶಕದ ಈ ಸ್ಟಾರ್​ ನಟಿ ಯಾರು ಹೇಳಬಲ್ಲಿರಾ?

ಮೇಲಿನ ಫೋಟೋದಲ್ಲಿ ಇರುವ ಸ್ಟಾರ್​ ಹಿರಿಯ ನಟಿ (Actress) ಯಾರು? ಇವರನ್ನು ಹಲವಾರು ಸಿನಿಮಾಗಳಲ್ಲಿ ನೋಡಿದ್ದೀವಿ. ಆದರೆ, ತಕ್ಷಣಕ್ಕೆ ಸುಲಭವಾಗಿ ನೆನಪಾಗುತ್ತಿಲ್ಲ, ಯಾರಿರಬಹುದು ಎಂಬ ನಿಮ್ಮ ಕೆಲವು ಪ್ರಶ್ನೆಗಳಿಗೆ ಇಲ್ಲಿದೆ ನೋಡಿ ವಿವರವಾದ ಉತ್ತರ.

‘ಒಡ ಹುಟ್ಟಿದವರು’, ‘ಹಾಲುಜೇನು’, ‘ಅನುರಾಗ ಅರಳಿತು’ ನಟಿ

ಕನ್ನಡದ ‘ಒಡ ಹುಟ್ಟಿದವರು’, ‘ಹಾಲುಜೇನು’, ‘ಅನುರಾಗ ಅರಳಿತು’ ಮತ್ತು ಇತರೆ ಭಾಷೆಯ ‘ಮಾತೃ ದೇವೋ ಭವ’ದಂತಹ ಸೂಪರ್ ಹಿಟ್ ಭಾವನಾತ್ಮಕ ಸಿನಿಮಾಗಳ ಮೂಲಕ ಪ್ರೇಕ್ಷಕರು ಚಿತ್ರಮಂದಿರಗಳಲ್ಲಿ ಕಣ್ಣೀರಾಕುವಂತೆ ಮಾಡಿದ ನಟಿ ಬೇರಾರು ಅಲ್ಲ ಅವರೇ ಹಿರಿಯ ನಟಿ ಮಾಧವಿ.

ಡಾ. ರಾಜ್​ ಜತೆಗೆ ಸೂಪರ್​ಹಿಟ್​ ಚಿತ್ರಗಳು

80ರ ದಶಕದಲ್ಲಿ ಭಾರತೀಯ ಚಿತ್ರೋದ್ಯಮವನ್ನು ಆಳಿದ ಸ್ಟಾರ್ ಹೀರೋಯಿನ್​ಗಳ ಪೈಕಿ ಮಾಧವಿ ಮುಂಚೂಣಿಯಲ್ಲಿದ್ದರು. ವರನಟ, ಡಾ. ರಾಜ್​ಕುಮಾರ್​ ಅವರೊಂದಿಗೆ ಹಲವಾರು ಚಿತ್ರಗಳಲ್ಲಿ ಅಭಿನಯಿಸಿ, ಸಿನಿಪ್ರೇಕ್ಷಕರ ಮನಸೂರೆಗೊಳಿಸಿ, ಸೈಎನಿಸಿಕೊಂಡ ನಟಿ

1996ರಲ್ಲಿ ದಾಂಪತ್ಯ

ಬಣ್ಣದ ಬದುಕಿನಲ್ಲಿ ಉತ್ತುಂಗದಲ್ಲಿದ್ದಾಗಲೇ ಮಾಧವಿ ದಿಢೀರನೆ ಮದುವೆ ನಿರ್ಧಾರಕ್ಕೆ ಬಂದು ಚಿತ್ರರಂಗಕ್ಕೆ ಗುಡ್​ಬೈ. ದಾಂಪತ್ಯದ ಬಳಿಕ ನಟನೆಯಿಂದ ಸಂಪೂರ್ಣವಾಗಿ ದೂರ ಉಳಿದಿದ್ದಾರೆ. ಮಾಧವಿ 1996ರಲ್ಲಿ ಉದ್ಯಮಿ ರಾಲ್ಫ್ ಶರ್ಮಾ ಅವರನ್ನು ವಿವಾಹವಾದರು. ಪ್ರಸ್ತುತ ಅಮೆರಿಕದ ನ್ಯೂಜೆರ್ಸಿಯಲ್ಲಿ ನೆಲೆಸಿದ್ದು, ಮೂವರು ಹೆಣ್ಣು ಮಕ್ಕಳೊಂದಿಗೆ ಸುಖ ಸಂಸಾರವನ್ನು ಸಾಗಿಸುತ್ತಿದ್ದಾರೆ.