ಅತಿಯಾದ ಶಾಖವು ನಿಮ್ಮ ಅಂಗಾಂಗಗಳ ಮೇಲೆ ಹೇಗೆ ದಾಳಿ ಮಾಡುತ್ತದೆ ಗೊತ್ತಾ?
ಭಾನುಪ್ರಿಯ ಡಿ.ಕೆ
ಅತಿಯಾದ ಶಾಖವು ನಿಮ್ಮ ಅಂಗಾಂಗಗಳ ಮೇಲೆ ಹೇಗೆ ದಾಳಿ ಮಾಡುತ್ತದೆ ಗೊತ್ತಾ?
ಅತಿಯಾದ ಶಾಖವು ಕೇವಲ ಅಸ್ವಸ್ಥತೆ ಉಂಟುಮಾಡುವುದಲ್ಲದೆ, ದೇಹದ ಆಂತರಿಕ ವ್ಯವಸ್ಥೆಯ ಮೇಲೆ ತೀವ್ರವಾದ ಪರಿಣಾಮಗಳನ್ನು ಬೀರುತ್ತದೆ.
ಮಾಂಸಖಂಡಗಳ ಸೆಳೆತ
ಬೆವರಿನ ಮೂಲಕ ಸೋಡಿಯಂ ಮತ್ತು ಪೊಟ್ಯಾಸಿಯಮ್‌ನಂತಹ ಲವಣಗಳು ನಷ್ಟವಾಗುವುದರಿಂದ ಕೈಕಾಲು ಹಾಗೂ ಹೊಟ್ಟೆಯ ಮಾಂಸಖಂಡಗಳಲ್ಲಿ ತೀವ್ರ ನೋವು ಮತ್ತು ಸೆಳೆತ ಉಂಟಾಗುತ್ತದೆ.
ಮೆದುಳಿನ ಕಾರ್ಯಕ್ಷಮತೆ ಕುಸಿತ
ಮೆದುಳಿಗೆ ರಕ್ತ ಪರಿಚಲನೆ ಕಡಿಮೆಯಾದಾಗ ಏಕಾಗ್ರತೆ ಕೊರತೆ, ಗೊಂದಲ, ಸಿಡುಕುತನ ಮತ್ತು ತಲೆನೋವು ಕಾಣಿಸಿಕೊಳ್ಳುತ್ತದೆ.
ಕಿಡ್ನಿಗಳ ಮೇಲೆ ಪರಿಣಾಮ
ದೀರ್ಘಕಾಲದವರೆಗೆ ಶಾಖಕ್ಕೆ ಒಡ್ಡಿಕೊಳ್ಳುವುದು ಮತ್ತು ಸರಿಯಾಗಿ ನೀರು ಕುಡಿಯದಿರುವುದು ಕಿಡ್ನಿಗಳ ಮೇಲೆ ಒತ್ತಡವನ್ನು ಹೇರುತ್ತದೆ. ಇದು ಕಿಡ್ನಿ ಸ್ಟೋನ್ಸ್ ಅಥವಾ ತೀವ್ರತರದ ಸಂದರ್ಭಗಳಲ್ಲಿ ಕಿಡ್ನಿ ವೈಫಲ್ಯಕ್ಕೂ ಕಾರಣವಾಗಬಹುದು.
ನಿದ್ರಾಹೀನತೆ
ರಾತ್ರಿಯ ವೇಳೆಯೂ ತಾಪಮಾನ ಹೆಚ್ಚಿದ್ದರೆ ದೇಹಕ್ಕೆ ಸರಿಯಾದ ವಿಶ್ರಾಂತಿ ಸಿಗುವುದಿಲ್ಲ. ಇದು ನಿದ್ರೆಯ ಗುಣಮಟ್ಟವನ್ನು ಕುಂದಿಸಿ ದೈಹಿಕ ಮಂದತೆಗೆ ಕಾರಣವಾಗುತ್ತದೆ.
ಹೃದಯದ ಮೇಲೆ ಒತ್ತಡ
ದೇಹವನ್ನು ತಂಪಾಗಿಸಲು ರಕ್ತವನ್ನು ಚರ್ಮದ ಮೇಲ್ಭಾಗಕ್ಕೆ ಪಂಪ್ ಮಾಡಲು ಹೃದಯವು ಸಾಮಾನ್ಯಕ್ಕಿಂತ ಹೆಚ್ಚು ವೇಗವಾಗಿ ಕೆಲಸ ಮಾಡಬೇಕಾಗುತ್ತದೆ. ಇದು ಹೃದಯಕ್ಕೆ ಹೆಚ್ಚಿನ ಒತ್ತಡವನ್ನು ನೀಡಿ, ಹೃದಯ ಸಂಬಂಧಿ ಕಾಯಿಲೆ ಇರುವವರಲ್ಲಿ ತೊಂದರೆಯನ್ನು ಉಂಟುಮಾಡಬಹುದು.