ಪಿಸಿಒಡಿ/ಪಿಸಿಒಎಸ್ ಸಮಸ್ಯೆಗೆ ಗುಡ್‌ಬೈ ಹೇಳಲು ಹೀಗೆ ಮಾಡಿ!

ಭಾನುಪ್ರಿಯ ಡಿ.ಕೆ

ಪಿಸಿಒಡಿ/ಪಿಸಿಒಎಸ್ ಸಮಸ್ಯೆಗೆ ಗುಡ್‌ಬೈ ಹೇಳಲು ಹೀಗೆ ಮಾಡಿ!

ಪಿಸಿಒಡಿ (PCOD) ಮತ್ತು ಪಿಸಿಒಎಸ್ (PCOS) ಇಂದಿನ ದಿನಗಳಲ್ಲಿ ಮಹಿಳೆಯರಲ್ಲಿ ಕಂಡುಬರುವ ಸಾಮಾನ್ಯ ಹಾರ್ಮೋನ್ ಸಮಸ್ಯೆಗಳಾಗಿವೆ. ಜೀವನಶೈಲಿಯಲ್ಲಿ ಕೆಲವು ಶಿಸ್ತುಬದ್ಧ ಬದಲಾವಣೆಗಳನ್ನು ಮಾಡಿಕೊಳ್ಳುವ ಮೂಲಕ ಈ ಸಮಸ್ಯೆಗಳನ್ನು ನಿಯಂತ್ರಣಕ್ಕೆ ತರಬಹುದು.

ಸಮತೋಲಿತ ಆಹಾರ ಕ್ರಮ

ಆಹಾರದ ಮೇಲೆ ನಿಯಂತ್ರಣವಿರುವುದು ಅತ್ಯಂತ ಮುಖ್ಯ. ಹಸಿರು ಎಲೆಕೋಸು, ತರಕಾರಿಗಳು ಮತ್ತು ನಾರಿನಂಶವಿರುವ ಆಹಾರಗಳನ್ನು ಹೆಚ್ಚಾಗಿ ಬಳಸಿ. ಪ್ರೋಟೀನ್ ಯುಕ್ತ ಆಹಾರಗಳನ್ನು ಸೇವಿಸಿ.

ನಿಯಮಿತ ವ್ಯಾಯಾಮ

ದಿನಕ್ಕೆ ಕನಿಷ್ಠ 30-40 ನಿಮಿಷಗಳ ಕಾಲ ದೈಹಿಕ ಚಟುವಟಿಕೆಯಲ್ಲಿ ತೊಡಗಿಸಿಕೊಳ್ಳಿ. ಸೂರ್ಯ ನಮಸ್ಕಾರ, ಧನುರಾಸನ ಮತ್ತು ಕಪಾಲಭಾತಿ ಪ್ರಾಣಾಯಾಮಗಳು ಪಿಸಿಒಡಿ ಸಮಸ್ಯೆಗೆ ರಾಮಬಾಣ.

ದೇಹದ ತೂಕದ ನಿರ್ವಹಣೆ

ದೇಹದ ತೂಕ ಹೆಚ್ಚಾದಂತೆ ಪಿಸಿಒಎಸ್ ಲಕ್ಷಣಗಳು ಉಲ್ಬಣಗೊಳ್ಳುತ್ತವೆ. ನಿಮ್ಮ ಎತ್ತರಕ್ಕೆ ತಕ್ಕಂತೆ ತೂಕವನ್ನು ಕಾಯ್ದುಕೊಳ್ಳುವುದು ಅಗತ್ಯ. ಕೇವಲ 5-10% ತೂಕ ಇಳಿಕೆಯಾದರೂ ಮುಟ್ಟಿನ ಚಕ್ರ ಸರಿಯಾಗಲು ಪ್ರಾರಂಭವಾಗುತ್ತದೆ.

ಒತ್ತಡ ನಿರ್ವಹಣೆ

ಮಾನಸಿಕ ಒತ್ತಡವು ಹಾರ್ಮೋನ್ ಏರುಪೇರಿಗೆ ಮುಖ್ಯ ಕಾರಣ. ಒತ್ತಡ ಕಡಿಮೆ ಮಾಡಲು ಧ್ಯಾನ ಮಾಡಿ. ಒತ್ತಡ ಹೆಚ್ಚಾದಾಗ ದೇಹದಲ್ಲಿ ಕಾರ್ಟಿಸೋಲ್ ಎಂಬ ಹಾರ್ಮೋನ್ ಬಿಡುಗಡೆಯಾಗಿ ಸಮಸ್ಯೆ ಹೆಚ್ಚಿಸುತ್ತದೆ.

ಸಮರ್ಪಕ ನಿದ್ರೆ

ದಿನಕ್ಕೆ ಕನಿಷ್ಠ 7-8 ಗಂಟೆಗಳ ಕಾಲ ಗುಣಮಟ್ಟದ ನಿದ್ರೆ ಅವಶ್ಯಕ. ತಡರಾತ್ರಿ ವರೆಗೆ ಎಚ್ಚರವಿದ್ದರೆ ಹಾರ್ಮೋನ್ ಸಮತೋಲನ ತಪ್ಪುತ್ತದೆ. ರಾತ್ರಿ ಬೇಗ ಮಲಗಿ ಬೆಳಗ್ಗೆ ಬೇಗ ಏಳುವ ಅಭ್ಯಾಸ ಮಾಡಿಕೊಳ್ಳಿ.